More

    ತುಮಕೂರು, ಚಾಮರಾಜನಗರ, ಮಂಡ್ಯದಲ್ಲಿ ಆಕ್ಸಿಜನ್ ಸಮಸ್ಯೆ ಉಲ್ಬಣ

    ಬೆಂಗಳೂರು : ರಾಜ್ಯದಲ್ಲಿ ಮತ್ತೆ ಮೂರು ಜಿಲ್ಲೆಗಳಲ್ಲಿ ಕರೊನಾ ರೋಗಿಗಳಿಗೆ ಆಕ್ಸಿಜನ್ ಕೊರತೆ ತಲೆದೋರಿದೆ. ತುಮಕೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಈ ಸಮಸ್ಯೆ ಕಂಡುಬಂದಿದ್ದು, ಚಾಮರಾಜನಗರದಲ್ಲಿ ನಡೆದ ದುರಂತ ಮರುಕಳಿಸಬಹುದೆಂಬ ಆತಂಕ ಮೂಡಿದೆ.

    ತುಮಕೂರಿನ ರಿಂಗ್ ರಸ್ತೆಯಲ್ಲಿರುವ ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದ ಕೋವಿಡ್ ಆಸ್ಪತ್ರೆಯಾದ ಅಶ್ವಿನಿ ಆಸ್ಪತ್ರೆಯಲ್ಲಿ ದಿಢೀರ್ ಆಗಿ ಆಕ್ಸಿಜನ್ ಕೊರತೆ ಕಂಡುಬಂದಿದೆ. ಒಟ್ಟು 37 ಸೋಂಕಿತರಿಗೆ ಚಿಕಿತ್ಸೆಗೆ ಆಕ್ಸಿಜನ್ ಕೊರತೆ ಉಂಟಾಗಬಹುದು. ಆದ್ದರಿಂದ ಅವರನ್ನು ಬೇರೆ ಕಡೆಗೆ ಶಿಫ್ಟ್ ಮಾಡಿ ಎಂದು ಸೋಂಕಿತರ ಸಂಬಂಧಿಗಳಿಗೆ ಆಸ್ಪತ್ರೆ ಆಡಳಿತ ಮಂಡಳಿ ತಾಕೀತು ಮಾಡಿದೆ ಎನ್ನಲಾಗಿದೆ. ತಕ್ಷಣ 80 ಜಂಬೋ ಸಿಲಿಂಡರ್​​​ಗಳನ್ನು ಡಿ.ಎಚ್.ಒ ಕಚೇರಿ ಪೂರೈಕೆ ಮಾಡಿದ್ದರೂ ಆಸ್ಪತ್ರೆ ಆವರಣದಲ್ಲಿ ಆತಂಕದ ವಾತಾವರಣ ಮುಂದುವರಿದಿದೆ.

    ಇದನ್ನೂ ಓದಿ: ಉಕ್ಕು ಕಾರ್ಖಾನೆಗಳಿಂದ ಹೆಚ್ಚಿದೆ ಮೆಡಿಕಲ್ ಆಕ್ಸಿಜನ್ ಪೂರೈಕೆ

    ಮಂಡ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲವೇ ಗಂಟೆಗಳಲ್ಲಿ ಆಕ್ಸಿಜನ್ ಖಾಲಿಯಾಗಲಿದ್ದು, ರೋಗಿಗಳನ್ನು ಬೇರೆಡೆ ಶಿಫ್ಟ್ ಮಾಡಿಕೊಳ್ಳಲು ಸಂಬಂಧಿಕರಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತಕ್ಕೆ ತಿಳಿಸಿದ್ದರೂ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಕೂಡಲೇ ರೋಗಿಗಳನ್ನು ಕರೆದೊಯ್ಯುವಂತೆ ಆಸ್ಪತ್ರೆ ಸಿಬ್ಬಂದಿ ಬಲವಂತ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ನಾಲ್ಕು ರೋಗಿಗಳನ್ನು ಸಂಬಂಧಿಕರು ಶಿಫ್ಟ್​ ಮಾಡಿದ್ದರೆ, ಮತ್ತೆ ಕೆಲವರಿಗೆ ಎಲ್ಲಿಗೆ ಕರೆದೊಯ್ಯಬೇಕೆಂಬ ಗೊಂದಲ ಉಂಟಾಗಿದೆ ಎನ್ನಲಾಗಿದೆ.

    ಮೈಸೂರಿನಿಂದ ಇಂದು ಆಕ್ಸಿಜನ್ ಬರಬೇಕಿತ್ತು. ಆದರೆ ಅದರಲ್ಲಿ ತಡವಾಗಿರುವುದರಿಂದ ಏನೂ ಮಾಡಲಾಗದ ಸ್ಥಿತಿಯಲ್ಲಿ ಅಧಿಕಾರಿಗಳು ಇದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಚಾಮರಾಜನಗರ ದುರಂತ ಮರುಕಳಿಸುವ ಆತಂಕವಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಉಪಚುನಾವಣೆ ಮುಂದೂಡಿದ ಚುನಾವಣಾ ಆಯೋಗ

    ಇನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ಆಮ್ಲಜನಕ ತುರ್ತು ಸ್ಥಿತಿ ತಲೆದೋರಿದೆ. ಒಟ್ಟು 6 ಸಾವಿರ ಲೀಟರ್ ಲಿಕ್ವಿಡ್ ಆಕ್ಸಿಜನ್ ಖಾಲಿಯಾಗಿದ್ದು, ಹಾಲಿ 150 ಜಂಬೋ ಸಿಲಿಂಡರ್ ಸ್ಟಾಕ್ ಮಾತ್ರ ಉಳಿದಿದೆ. ಇನ್ನು ಏಳು ಗಂಟೆಗೆ ಮಾತ್ರ ಸಾಕಾಗುವಷ್ಟು ಆಕ್ಸಿಜನ್ ಇದೆ. ಮೈಸೂರಿನಿಂದ ಆಕ್ಸಿಜನ್ ಸಿಲಿಂಡರ್ ಬರುವುದು ತಡವಾದರೆ ರೋಗಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.

    ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಮೈಸೂರಿಗೆ ದೌಡಾಯಿಸಿದ್ದಾರೆ ಎನ್ನಲಾಗಿದೆ. ಮೈಸೂರಿನ ಪದಕಿ ಹಾಗು ಸದರ್ನ್ ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡಲು ಸಚಿವರು ಹೊರಟಿದ್ದಾರೆ ಎನ್ನಲಾಗಿದೆ.

    ಇನ್ನೂ ಬರಲಿದೆಯಂತೆ ಕರೊನಾ 3ನೇ ಅಲೆ ! ಸರ್ಕಾರದ ವೈಜ್ಞಾನಿಕ ಸಲಹೆಗಾರರ ಎಚ್ಚರಿಕೆ

    ಕರೊನಾ ಪೀಡಿತ ತಂದೆಗೆ ನೀರು ಕುಡಿಸಲು ಸೆಣಸಾಡಿದ ಮಗಳು ! ಮನ ಕಲಕುವ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts