More

    ರಾಮಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿಗೆ ಓವೈಸಿ ನೀಡಿದ್ದಾರೊಂದು ಎಚ್ಚರಿಕೆ…!

    ಹೈದರಾಬಾದ್: ಅಯೋಧ್ಯೆಯಲ್ಲಿ ಆಗಸ್ಟ್​ 5ರಂದು ನಡೆಯಲಿರುವ ರಾಮಮಂದಿರ ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳುತ್ತಾರೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಹೇಳಿದೆ.
    ಇದೀಗ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಇದೇ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಚ್ಚರಿಕೆಯೊಂದನ್ನ ನೀಡಿದ್ದಾರೆ. ಇದನ್ನೂ ಓದಿ: ಕೋವಿಡ್​ ಕಾಲದಲ್ಲಿ ಚಿಕ್ಕಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಹೊಸದೊಂದು ಕಾಯಿಲೆ? ಪಾಲಕರ ಚಿಂತೆಗೀಡು ಮಾಡಿದೆ ಕರೊನಾ

    ಟ್ವೀಟ್​ ಮಾಡಿರುವ ಓವೈಸಿ, ನರೇಂದ್ರ ಮೋದಿಯವರು ಈಗ ಪ್ರಧಾನಿ ಹುದ್ದೆಯಲ್ಲಿದ್ದಾರೆ. ಅಧಿಕಾರದ ಸ್ಥಾನದಲ್ಲಿದ್ದುಕೊಂಡು ಈಗ ರಾಮಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಂಡರೆ ಸಾಂವಿಧಾನಿಕ ಪ್ರಮಾಣವಚನವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂಬುದರ ಬಗ್ಗೆ ಎಚ್ಚರಿಕೆ ಇರಲಿ. ಜಾತ್ಯಾತೀತ ಎಂಬುದು ಸಂವಿಧಾನದ ಮೂಲರಚನೆಯ ಒಂದು ಭಾಗ. 400ಕ್ಕೂ ಹೆಚ್ಚುಗಳ ಕಾಲ ಇಲ್ಲಿ ಬಾಬ್ರಿ ಮಸೀದಿ ಇತ್ತು ಎಂಬುದನ್ನು ನಾವ್ಯಾರೂ ಮರೆತಿಲ್ಲ. ಮಸೀದಿಯನ್ನು 1992ರಲ್ಲಿ ಕ್ರಿಮಿನಲ್​ಗಳ ಗುಂಪೊಂದು ಧ್ವಂಸಗೊಳಿಸಿದೆ ಎಂದು ಹೇಳಿದ್ದಾರೆ. ಈ ಮೂಲಕ ರಾಮಮಂದಿರ ಭೂಮಿ ಪೂಜೆಯಲ್ಲಿ ಭಾಗವಹಿಸುವ ಮೊದಲು ಯೋಚಿಸಿ ಎಂದು ಹೇಳಿದ್ದಾರೆ.

    ಅಯೋಧ್ಯೆ ಬಾಬ್ರಿ ಮಸೀದಿ-ರಾಮಮಂದಿರ ಸುದೀರ್ಘ ವಿವಾದದ ತೀರ್ಪನ್ನು ನವೆಂಬರ್​ನಲ್ಲಿ ಸುಪ್ರೀಂಕೋರ್ಟ್​ ನೀಡಿತ್ತು. ವಿವಾದಿತ ಸ್ಥಳದಲ್ಲಿ ಹಿಂದುಗಳು ರಾಮನ ದೇಗುಲ ಕಟ್ಟಬೇಕು. ಹಾಗೂ ಮುಸ್ಲಿಮರಿಗೆ ಮಸೀದಿ ಕಟ್ಟಲು ಅಯೋಧ್ಯೆಯಲ್ಲಿ ಭೂಮಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೇಳಿತ್ತು. (ಏಜೆನ್ಸೀಸ್​)

    VIDEO: ಕುಕ್ಕರ್​ನಿಂದ ಹೊರಬರುವ ಹಬೆಯೇ ಸಾಕು ತರಕಾರಿ ಸ್ವಚ್ಛಗೊಳಿಸಲು; ನೀವು ಟ್ರೈ ಮಾಡೋ ಮುನ್ನ ಯೋಚಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts