More

    ಉಕ್ಕಿ ಹರಿಯುತ್ತಿರುವ ಹೊಳೆ: 5000 ಎಕರೆ ಭತ್ತದ ಗದ್ದೆ ಜಲಾವೃತ

    ತಾಳಗುಪ್ಪ: ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೋಬಳಿಯ ತಗ್ಗಿನ ಪ್ರದೇಶಗಳು ಜಲಾವೃತಗೊಂಡಿದ್ದು ಸೈದೂರು, ಹಿರೇನೆಲ್ಲೂರು, ಕಾನ್ಲೆ ಗ್ರಾಪಂ ವ್ಯಾಪ್ತಿಯಲ್ಲಿ 5 ಸಾವಿರ ಎಕರೆ ಭತ್ತದ ಗದ್ದೆಗಳಿಗೆ ನೆರೆ ಆವರಿಸಿದೆ. ಕನ್ನ ಹೊಳೆ ಹಾಗೂ ಕಣಸೆ ಹೊಳೆ ತುಂಬಿ ಹರಿಯುತ್ತಿದ್ದು ಕನ್ನ ಹೊಳೆ ಸೇತುವೆಯ ಮೇಲೆ 3ರಿಂದ 4 ಅಡಿ ನೀರು ಉಕ್ಕಿ ಹರಿದಿದೆ. ಕಳೆದ 48 ತಾಸಿನ ಅವಧಿಯಲ್ಲಿ 132 ಮಿಮೀ ಮಳೆ ಸುರಿದಿದೆ.

    ಮಾವಿನಹೊಳೆ, ಕಣಸೆ ಹೊಳೆ, ಕನ್ನ ಹೊಳೆ, ವರದಾ ನದಿ ಪಾತ್ರ ಕಿರಿದಾಗಿದ್ದು ನೀರು ದಡದಲ್ಲಿರುವ ಭತ್ತದ ಗದ್ದೆಗಳಿಗೆ ನುಗ್ಗುತ್ತಿದೆ.ನಾಲ್ಕು ಹೊಳೆಗಳ ಉಕ್ಕಿದ ನೀರು ಒಂದಕ್ಕೊಂದು ಸೇರಿ ಅಪಾರ ಪ್ರಮಾಣದ ಕೃಷಿ ಭೂಮಿಯನ್ನು ಆವರಿಸಿದೆ. ತಟ್ಟೆಗುಂಡಿ, ಯಲಕುಂದ್ಲಿ, ನೆಲ್ಲೂರು, ಸೂರಗುಪ್ಪೆ, ಬರದಳ್ಳಿ, ಅತ್ತಿಸಾಲು, ಬೀಸನಗದ್ದೆ, ತಡಗಳಲೆ, ಸುಳ್ಳೂರು, ಹಾರೆಗೊಪ್ಪ, ಕೆಲುವೆ, ಮಂಡಗಳಲೆ, ಗಡೆಮನೆ ಮೊದಲಾದ ಗ್ರಾಮಗಳ ಸಾವಿರಾರು ಎಕರೆ ಕೃಷಿ ಜಮೀನಿನ ಮೇಲೆ ನೀರು ನಿಂತಿದೆ. ಒಮ್ಮೆ ನೆರೆ ಬಂದರೆ ಅದು ಪೂರ್ಣ ಪ್ರಮಾಣದಲ್ಲಿ ಇಳಿದು ಸಹಜ ಸ್ಥಿತಿಗೆ ಬರಲು ತಿಂಗಳೇ ಬೇಕಾಗುತ್ತದೆ. ಆ ಅವಧಿಯಲ್ಲಿ ನೆರೆಗುಳಿ ಭತ್ತದ ತಳಿಯ ಸಸಿ ಹೊರತು ಪಡಿಸಿದರೆ ಇನ್ನುಳಿದ ತಳಿ ಸಸಿಗಳು ಹಾಳಾಗಿ ಬೆಳೆ ನಾಶವಾಗುತ್ತದೆ.
    ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಸ್ಥಳದಲ್ಲಿದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

    ತಪ್ಪಿದ ಬೀಸನಗದ್ದೆ ಸಮಸ್ಯೆ
    ಈ ಸಮಸ್ಯೆ ನಿವಾರಣೆಗೆ ನೆರೆ ನೀರನ್ನು ಆನವಟ್ಟಿಯ ಭಾಗಕ್ಕೆ ತೆಗೆದುಕೊಂಡು ಹೋಗಲು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಯೋಜನೆಗೆ ಪ್ರಾಥಮಿಕ ಸರ್ವೇ ನಡೆಸಿದ್ದರೂ ಈಗ ಕೇಳುವವರು ಇಲ್ಲವಾಗಿದೆ. ಪ್ರತಿವರ್ಷದ ಕಾಯಂ ಸಮಸ್ಯೆಯಾಗಿದ್ದ ಬೀಸನಗದ್ದೆ ದ್ವೀಪವಾಗುವುದು ಈ ವರ್ಷ ತಪ್ಪಿದೆ. ಕೃಷಿ ಭೂಮಿಗೆ ನೆರೆ ಆವರಿಸುತ್ತಿದ್ದರೂ ಕುಮಾರ್ ಬಂಗಾರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಒಂದು ಕೋಟಿ ರೂ. ವೆಚ್ಚದ ಅನುದಾನದಲ್ಲಿ ಬೀಸನಗದ್ದೆಗೆ ರಸ್ತೆ ನಿರ್ಮಿಸಿದ್ದರಿಂದ ಜನ ಸಂಪರ್ಕಕ್ಕೆ ಪರಿಹಾರ ದೊರೆತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts