More

    ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರ ಕೈ ಹಿಡಿದ ವಂದೇ ಭಾರತ್​ ಮಿಷನ್​; ಇಲ್ಲಿಯವರೆಗೆ ವಾಪಸ್​ ಆದವರೆಷ್ಟು ಮಂದಿ ಗೊತ್ತಾ?

    ನವದೆಹಲಿ: ಕೊವಿಡ್​-19 ಲಾಕ್​ಡೌನ್​ನಿಂದಾಗಿ ಬೇರೆ ದೇಶಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದ ಭಾರತೀಯರನ್ನು ವಂದೇ ಭಾರತ್​ ಯೋಜನೆಯಡಿ, ವಿಮಾನಗಳ ಮೂಲಕ ವಾಪಸ್​ ಕರತರಲಾಗಿದೆ.

    ಮೇ 7ರಿಂದ ಶುರು ಮಾಡಿ ಒಟ್ಟು ನಾಲ್ಕು ಹಂತದ ಕಾರ್ಯಾಚರಣೆ ನಡೆಸಲಾಗಿದ್ದು, ಇಲ್ಲಿಯವರೆಗೆ ವಂದೇ ಭಾರತ್​ ಯೋಜನೆಯಡಿ ಸುಮಾರು 8.78 ಲಕ್ಷ ಭಾರತೀಯರದನ್ನು ವಿದೇಶಗಳಿಂದ ವಾಪಸ್​ ಕರೆತರಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

    849 ಅಂತಾರಾಷ್ಟ್ರೀಯ ವಿಮಾನಗಳು ಮತ್ತು 234 ಫೀಡರ್​ ಫ್ಲೈಟ್ ಸೇರಿ ಒಟ್ಟು 1083 ವಿಮಾನಗಳ ಮೂಲಕ ಭಾರತೀಯರನ್ನು ಕರೆತರುವ ಕಾರ್ಯಾಚರಣೆ ನಡೆದಿದೆ ಎಂದು ಇಲಾಖೆ ವಕ್ತಾರ ಅನುರಾಗ್​ ಶ್ರೀವಾಸ್ತವ್​ ತಿಳಿಸಿದ್ದಾರೆ. ಇದನ್ನೂ ಓದಿ: ಪ್ಯಾಂಟಿನೊಳಗೆ ಹಾವು: ರಾತ್ರಿಯಿಡೀ ಕದಲದೇ ಕಳೆದ ಯುವಕ!

    ಏರ್​ ಇಂಡಿಯಾ, ಇಂಡಿಗೋ, ಸ್ಪೈಸ್​ಜೆಟ್​ ಮತ್ತು ಗೋ ಏರ್​ ಸಂಸ್ಥೆಗಳ ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ವಂದೇ ಭಾರತ್​ ಮಿಶನ್​​ನ 4ನೇ ಹಂತದಿಂದ 5ನೇ ಹಂತವನ್ನು ಪ್ರಾರಂಭಿಸಲಾಗಿದೆ. ಜು.29ರವರೆಗೆ 8,78,921 ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ.

    ನೇಪಾಳ, ಭೂತಾನ್​, ಮಯನ್ಮಾರ್​, ಪಾಕಿಸ್ತಾನ, ಬಾಂಗ್ಲಾದೇಶ, ಯುಎಸ್​ಎ, ಕೆನಡಾ, ಯುಕೆ, ಜರ್ಮನಿ, ಫ್ರಾನ್ಸ್​, ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ, ಥೈಲ್ಯಾಂಡ್​, ಚೀನಾ, ಇಸ್ರೇಲ್​, ಉಕ್ರೇನ್​, ಕರ್ಜಿಸ್ತಾನ್​​ಗಳಿಂದ ವಾಪಸ್​ ಆಗಿದ್ದಾರೆ. 5ನೇ ಹಂತ ಆಗಸ್ಟ್​ 1ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಲಾಕ್​ಡೌನ್ ವರದಾನವಾಯ್ತು ಈ 51 ವರ್ಷದ ವ್ಯಕ್ತಿಗೆ; 33 ವರ್ಷದಿಂದ ಸಾಧ್ಯವಾಗದ್ದು ಈಗ ಫಲಿಸಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts