More

    ‘ಪಠಾಣ್​’ ಹೊಸ ದಾಖಲೆ; ಮೊದಲ ದಿನವೇ ಎರಡು ಲಕ್ಷ ಟಿಕೆಟ್​ ಸೋಲ್ಡ್​ ಔಟ್!

    ಮುಂಬೈ: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರದ ಬಿಡುಡೆಗೆ ಇನ್ನು ನಾಲ್ಕು ದಿನಗಳಷ್ಟೇ ಉಳಿದಿವೆ. ಈ ಮಧ್ಯೆ, ಚಿತ್ರದ ಮೊದಲ ದಿನವೇ ಎರಡು ಲಕ್ಷ ಟಿಕೆಟ್​ ಮಾರಾಟವಾಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.

    ಇದನ್ನೂ ಓದಿ: ಬಾಲಿವುಡ್​ಗೆ ಎಂಟ್ರಿ ಕೊಡುವುದಕ್ಕೆ ರೆಡಿಯಾಗಿದ್ದಾಳೆ ರವೀನಾ ಟಂಡನ್​ ಮಗಳು

    ಸಾಮಾನ್ಯವಾಗಿ ಒಂದು ಚಿತ್ರ ಬಿಡುಗಡೆಯಾದ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಎಂದು ಆ ನಂತರ ಲೆಕ್ಕಾಚಾರ ಇರುತ್ತದೆ. ಆದರೆ, ‘ಪಠಾಣ್’ ಬಿಡುಗಡೆಗೂ ಮುನ್ನವೇ, ಚಿತ್ರ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಮೂಲಗಳ ಪ್ರಕಾರ, ‘ಪಠಾಣ್​’ ಮೊದಲ ದಿನ ಭಾರತದಲ್ಲಿ 40 ಕೋಟಿ ರೂ. ಗಳಿಕೆ ಮಾಡಬಹುದು ಎಂದು ಹೇಳಲಾಗುತ್ತಿದೆ.

    ಅದಲ್ಲೆ ಸರಿಯಾಗಿ, ಶುಕ್ರವಾರ ಚಿತ್ರದ ಅಡ್ವಾನ್ಸ್​ ಬುಕ್ಕಿಂಗ್​ ಪ್ರಾರಂಭಾಗಿದ್ದು, ಇಡೀ ದೇಶದಲ್ಲಿ ಮೊದಲ ದಿನವೇ ಎರಡು ಲಕ್ಷಕ್ಕೂ ಹೆಚ್ಚು ಟಿಕೆಟ್​ಗಳು ಮಾರಾಟವಾಗಿರುವ ಸುದ್ದಿ ಇದೆ. ಈ ಪೈಕಿ ಪಿವಿಆರ್​ ಸಿನಿಮಾಸ್​ನಲ್ಲೇ 87 ಸಾವಿರ ಟಿಕೆಟ್​ಗಳು ಮಾರಾಟವಾಗಿವೆ. ಇನ್ನು, ಐನಾಕ್ಸ್​​ನಲ್ಲಿ 73 ಸಾವಿರ ಮತ್ತು 41 ಸಾವಿರ ಸಿನಿಪೊಲೀಸ್​ನಲ್ಲಿ ಮಾರಾಟವಾಗಿವೆ. ಇದು ಬರೀ ಮೂರು ಮಲ್ಟಿಪ್ಲೆಕ್ಸ್​ ಸಮೂಹಗಳಿಂದ ಸಿಕ್ಕೆ ಲೆಕ್ಕವಷ್ಟೇ. ಮಿಕ್ಕ ಸಮೂಹಗಳು ಮತ್ತು ಏಕಪರದೆಯ ಚಿತ್ರಮಂದಿರಗಳನ್ನೆಲ್ಲ ಸೇರಿಸಿದರೆ ಲೆಕ್ಕ ಇನ್ನೂ ಜಾಸ್ತಿಯಾಗುತ್ತದೆ.

    ಮೂಲಗಳ ಪ್ರಕಾರ, ದೇಶಾದ್ಯಂತ ಸದ್ಯಕ್ಕೆ ಮೊದಲ ದಿನದ ಅಡ್ವಾನ್ಸ್​ ಬುಕ್ಕಿಂಗ್​ ಹಣವೇ 15ರಿಂದ 20 ಕೋಟಿಯಷ್ಟು ಗಳಿಸಬಹುದು ಎಂದು ಹೇಳಲಾಗುತ್ತಿದೆ. ಇನ್ನು, ಅಡ್ವಾನ್ಸ್​ ಬುಕ್ಕಿಂಗ್​ ಸಹ ಸೇರಿಸಿ, ಒಟ್ಟಾರೆ ಮೊದಲ ದಿನವೇ 40 ಕೋಟಿ ರೂ. ಕಲೆಕ್ಷನ್ ಆಗುವ ಅಂದಾಜಿದೆ.

    ಇದನ್ನೂ ಓದಿ: ರಚಿತಾ ರಾಮ್​ ಹೇಳಿಕೆಗೆ ಟೀಕೆ; ಮದ್ದೂರಿನಲ್ಲಿ ಕೇಸ್‌ ದಾಖಲು!

    ‘ಪಠಾಣ್​’ ಚಿತ್ರದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ, ಡಿಂಪಲ್​ ಕಪಾಡಿಯಾ ಮುಂತಾದವರು ಅಭಿನಯಿಸಿದ್ದಾರೆ. ಯಶ್​ರಾಜ್​ ಫಿಲಂಸ್​ನಡಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ.

    ಇನ್ನು ದಪ್ಪ ಆಗಬಾರದು ಎಂದು ವಿಜಯ್​ ಸೇತುಪತಿ ತೀರ್ಮಾನ … ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts