More

    ಅಂತ್ಯಸಂಸ್ಕಾರದ ಬೆನ್ನಲ್ಲೇ ಸಮಾಧಿಯಿಂದ ಹೆಣ್ಣುಮಗುವಿನ ಮೃತದೇಹ ಕಿತ್ತು ರಸ್ತೆಗೆಸೆದ ಧರ್ಮಾಂಧರು!

    ಢಾಕಾ: ಮುಸ್ಲಿಂ ಧರ್ಮದ ಕೆಲ ಮತಾಂಧರು ಹೆಣ್ಣು ಮಗುವಿನ ಮೃತದೇಹವನ್ನು ಸಮಾಧಿಯಿಂದ ತೆಗೆದು ರಸ್ತೆ ಬದಿಯಲ್ಲಿ ಬೀಸಾಡಿರುವ ಅಮಾನವೀಯ ಘಟನೆ ಬಾಂಗ್ಲಾದೇಶದಲ್ಲಿ ಬೆಳಕಿಗೆ ಬಂದಿದೆ.

    ಮೂರು ದಿನ ಮಗು ಅಹ್ಮದಿ ಮುಸ್ಲಿಂ ಆಗಿದ್ದು, ಬಾಂಗ್ಲಾದೇಶದ ಬ್ರಹ್ಮನ್‌ಬೇರಿಯಾದ ಪೂರ್ವ ಜಿಲ್ಲೆಯ ಘತುರಾದ ಸ್ಮಶಾನದಲ್ಲಿ ಕೆಲವೇ ಗಂಟೆಗಳ ಕಾಲ ಸಮಾಧಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮತಾಂಧರು ಮೃತದೇಹ ಹೊರತೆಗೆದಿದ್ದಾರೆ.

    ಇದನ್ನೂ ಓದಿ: ತಮಿಳುನಾಡಿನ ಗ್ರಾಮವೊಂದರಲ್ಲಿ ಸೆರೆಸಿಕ್ಕ ಕಾಳಿಂಗ ಸರ್ಪದ ಉದ್ದ ಕೇಳಿದ್ರೆ ಶಾಕ್​ ಆಗ್ತಿರಾ?

    ಪ್ರಮುಖ ಮುಸ್ಲಿಂ ನಾಯಕರು ಅಹ್ಮದಿ ಮುಸ್ಲಿಂರನ್ನು ನಾಸ್ತಿಕರು ಎಂದು ಪರಿಗಣಿಸಿದ್ದಾರೆ. ಏಕೆಂದರೆ ಅಹ್ಮದಿಯರು ಮುಸ್ಲಿಂ ಸಂಸ್ಥಾಪಕನನ್ನು ಕೇವಲ ಪ್ರವಾದಿ ಎಂದು ನೋಡುತ್ತಾರೆ ಎಂಬುದು ಅವರ ನಂಬಿಕೆ. ಈ ಬಗ್ಗೆ ಮಾತನಾಡಿರುವ ಸ್ಥಳಿಯ ಆಹ್ಮದಿ ನಾಯಕ ಎಸ್​.ಎಂ. ಸೆಲಿಮ್​, ಮುಖ್ಯವಾಹಿನಿಯ ಮುಸ್ಲಿಂ ಮತಾಂಧರು ಮಗುವಿನ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದರು ಎಂದು ಆರೋಪಿಸಿದ್ದಾರೆ.

    ಮಗು ಮಾಡಿದ ತಪ್ಪೇನೆಂದರೆ ಅವಳು ಅಹ್ಮದಿ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದು ಎಂದು ಸೆಲೀಮ್​ ತಿಳಿಸಿದ್ದಾರೆ. ಚಾಪೆಯ ಮೇಲೆ ಬಿದ್ದಿರುವ ಮಗುವಿನ ಮೃತದೇಹದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಪ್ರಕರಣ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದಾಗ್ಯು ಪ್ರಕರಣವನ್ನು ಶಾಂತಿಯುತವಾಗಿ ಬಗೆಹರಿಸಲಾಗಿದೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ. ಮಗುವಿನ ಮೃತದೇಹವನ್ನು 16 ಕಿ.ಮೀ ದೂರದಲ್ಲಿ ಸಮಾಧಿ ಮಾಡಲಾಯಿತು ಎಂದಿದ್ದಾರೆ.

    ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದ ಒಂದೇ ಕುಟುಂಬದ ಐವರು: ನಡೆಯಿತು ಪವಾಡ!

    ಮುಸ್ಲಿಂರ ಸ್ಥಳದಲ್ಲಿ ನಾಸ್ತಿಕರನ್ನು ಸಮಾಧಿ ಮಾಡುವುದು ಶೆರಿಯಾಗೆ ವಿರುದ್ಧವಾದದ್ದು ಎಂದು ಕೆಲ ಮತಾಂಧರು ಕ್ಯಾತೆ ತೆಗೆದಿದ್ದರು. ಆದಾಗ್ಯೂ ಕೆಲವರ ಬೆಂಬಲದೊಂದಿಗೆ ಮಗುವಿನ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಮಗುವಿನ ಮೃತದೇಹವನ್ನು ಸಮಾಧಿಯಿಂದ ಹೊರಕಿತ್ತು ಬೀಸಾಡಲಾಗಿದೆ. (ಏಜೆನ್ಸೀಸ್​)

    ಜಪ್ಪಯ್ಯ ಎಂದ್ರೂ ಮಾಸ್ಕ್‌ ಧರಿಸಲು ಒಪ್ಪದ ಟ್ರಂಪ್‌ ಹೀಗೆ ಕಾಣಿಸಿಕೊಂಡದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts