More

    ಅತಿಥಿ ಶಿಕ್ಷಕರ ಅನಿಶ್ಚಿತತೆ; ಬದುಕಿಗಾಗಿ ತರಕಾರಿ ಮಾರಾಟ…ಪಂಕ್ಚರ್​ ಶಾಪ್​ನಲ್ಲಿ ಕೆಲಸ​

    ನವದೆಹಲಿ: ಕರೊನಾದಿಂದ ಅದೆಷ್ಟೋ ವರ್ಗದ ಜನರ ಜೀವನ ಸಂಕಷ್ಟಕ್ಕೀಡಾಗಿದೆ. ಲಾಕ್​ಡೌನ್​ನಿಂದಾಗಿ ಸಂತ್ರಸ್ತ್ರರಾದವರಲ್ಲಿ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರೂ ಸೇರಿದ್ದಾರೆ.

    ಅದರಲ್ಲೂ ದೆಹಲಿ ಸರ್ಕಾರಿ ಶಾಲೆಗಳಲ್ಲಿ ದಿನದ ಕೆಲಸ ಆಧಾರದ ಮೇಲೆ ಸಂಬಳ ಪಡೆಯುತ್ತಿದ್ದ ಅತಿಥಿ ಶಿಕ್ಷಕರ ಬದುಕು ತೀರ ಕಷ್ಟಕ್ಕೀಡಾಗಿದ್ದು, ಅವರೆಲ್ಲ ಅನ್ಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

    ಇಂಗ್ಲಿಷ್​ ಶಿಕ್ಷಕನೋರ್ವ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿದ್ದಾರೆ. ವಿಜ್ಞಾನ ಶಿಕ್ಷಕ ಬೈಸಿಕಲ್​ ಪಂಚರ್​ ಶಾಪ್​​ ಹಾಕಿದ್ದಾರೆ…ಹಾಗೇ ಸಂಸ್ಕೃತ ಶಿಕ್ಷಕ ತನ್ನೂರಿಗೆ ಮರಳಿ ಗೋಧಿ ಹೊಲದಲ್ಲಿ ಮೈ ಬಗ್ಗಿಸಿ ದುಡಿಯುತ್ತಿದ್ದಾರೆ.
    ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಅನೇಕ ಶಿಕ್ಷಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಆ ದಿನದ ಕೆಲಸದ ಮೇಲೆ ವೇತನ ಪಡೆಯುವವರು. ಆದರೆ ಕರೊನಾ ವೈರಸ್​, ಲಾಕ್​ಡೌನ್​ನಿಂದಾಗಿ ಶಾಲೆಗಳೆಲ್ಲ ಮೂರು ತಿಂಗಳಿಂದಲೂ ಕ್ಲೋಸ್ ಆಗಿವೆ. ಮನೆಯಲ್ಲೇ ಇರಬೇಕಾದ ಸ್ಥಿತಿ. ಗುತ್ತಿಗೆ ಆಧಾರದ ನೇಮಕಾತಿ ಆಗಿದ್ದರಿಂದ ಮನೆಯಲ್ಲಿ ಕುಳಿತರೆ ಸಂಬಳ ಬರುವುದಿಲ್ಲ. ಹಾಗಾಗಿ ಬದುಕಿಗಾಗಿ ಮತ್ತೊಂದು ದುಡಿಮೆ ನೋಡಿಕೊಳ್ಳಲೇಬೇಕಾದ ಅನಿವಾರ್ಯತೆ ಇವರದ್ದು. ಇದನ್ನೂ ಓದಿ: ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಬಾರದೆಂದರೆ ಸಂಪೂರ್ಣ ಲಾಕ್​ಡೌನ್​ ಮಾಡಿ: ಎಚ್.ಡಿ. ಕುಮಾರಸ್ವಾಮಿ

    ದೆಹಲಿಯಲ್ಲಿ 1030 ಸರ್ಕಾರಿ ಶಾಲೆಗಳಲ್ಲಿ 20,000ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದರು. ಅವರ ಪ್ರತಿದಿನದ ವೇತನ 1,040 ರಿಂದ 1400 ರೂಪಾಯಿ.

    ಭಾನುವಾರಗಳು, ಬೇಸಿಗೆ ರಜೆ ಮತ್ತು ಯಾವುದೇ ಹಬ್ಬಗಳ ರಜೆಯಿದ್ದರೂ ಅಂದು ಅವರಿಗೆ ವೇತನ ಇರುವುದಿಲ್ಲ. ಆ ಸಮಯದಲ್ಲೂ ಸಹ ಇಂಥ ಶಿಕ್ಷಕರು ದುಡಿಮೆಗೆ ಬೇರೆ ಮಾರ್ಗ ಕಂಡುಕೊಳ್ಳುತ್ತಿದ್ದರು. ಆದರೆ ಈಗಂತೂ ಮೂರು ತಿಂಗಳುಗಳಿಂದ ನಯಾ ಪೈಸೆ ಸರ್ಕಾರದಿಂದ ಸಿಗುತ್ತಿಲ್ಲ. ಶಾಲೆಗಳು ಬೇಗ ಶುರುವಾಗುವ ಲಕ್ಷಣವೂ ಕಾಣಿಸುತ್ತಿಲ್ಲ.
    ದೆಹಲಿಯಲ್ಲಿ ಶಾಲೆಗಳು ಮಾ.19ರಿಂದ ಬಂದ್ ಆಗಿವೆ. ಕೆಲವು ಕಡೆ ಆನ್​ಲೈನ್​ ಮೂಲಕ ಕಲಿಕೆ ನಡೆಯುತ್ತಿದೆ. ಕೆಲವೇ ಅತಿಥಿ ಶಿಕ್ಷಕರಿಗೆ ಮೇ 8ರವರೆಗೆ ಆನ್​ಲೈನ್​ ಮೂಲಕ ಕಲಿಸಲು ಅವಕಾಶ ಸಿಕ್ಕಿತ್ತು. ಅಂಥವರಿಗೆ ಅದಕ್ಕೆ ತಕ್ಕಂತೆ ವೇತನ ನೀಡಲಾಗಿದೆ. ಇದನ್ನೂ ಓದಿ: ಸಮುದಾಯಕ್ಕೆ ಸೋಂಕು? ರಾಜ್ಯದಲ್ಲಿ ಕೈಮೀರಿತೇ ಕರೊನಾ; ಆರೋಗ್ಯ ತಜ್ಞರ ಅನುಮಾನ

    ಸುಮಾರು 1000 ಶಿಕ್ಷಕರು ಈ ಬಾರಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಬರೆದಿಲ್ಲ. ಈ ಪರೀಕ್ಷೆ ಜುಲೈನಲ್ಲಿ ಇನ್ನೊಮ್ಮೆ ನಡೆಯಲಿದೆ. ಆದರೆ ಸಾಂಕ್ರಾಮಿಕ ಕರೊನಾ ತೀವ್ರವಾಗಿ ಬಾಧಿಸುತ್ತಿರುವುದರಿಂದ ಅದರಲ್ಲೂ ಅನಿಶ್ಚಿತತೆ ಇದೆ. ಒಟ್ಟಿನಲ್ಲಿ ಅತಿಥಿ ಶಿಕ್ಷಕರ ಪಾಡು ತೀರ ಕಷ್ಟಕ್ಕೆ ಒಳಗಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts