More

  ವಿಶ್ವದಲ್ಲಿಯೇ ಶ್ರೀಮಂತ ಭಾಷೆ ನಮ್ಮದು

  ಚಿತ್ತಾಪುರ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಭಾಷೆಯಾಗಿದೆ ಎಂದು ಬರಹಗಾರ್ತಿ ಪೂಜಾ ಭಂಕಲಗಿ ಹೇಳಿದರು.

  ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಉಪನ್ಯಾಸ ನೀಡಿ, ಕನ್ನಡ ಕೇವಲ ಭಾಷೆಯಲ್ಲ, ಅದು ಜೀವನ, ಸಂಸ್ಕೃತಿ, ಪರಂಪರೆಯಾಗಿದೆ. ಭಾಷೆಯ ಬಗೆಗಿನ ಕೀಳರಿಮೆಯನ್ನು ಬಿಡಿ, ಹೆಮ್ಮೆಯಿಂದ ಕನ್ನಡಿಗೆ ಎಂದು ಹೇಳಿ ಎಂದು ತಿಳಿಸಿದರು. ತಹಸಿಲ್ದಾರ್ ಸೈಯ್ಯದ್ ಷಾಷಾವಲಿ ಅಧ್ಯಕ್ಷತೆ ವಹಿಸಿದ್ದರು.

  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ಬಸವರಾಜ ಬಳೊಂಡಗಿ ಮಾತನಾಡಿದರು. ತಾಪಂ ಇಒ ನೀಲಗಂಗಾ ಬಬಲಾದ್ ಕಾರ್ಯಕ್ರಮ ಉದ್ಘಾಟಿಸಿದರು.

  ಸಿಪಿಐ ಚಂದ್ರಶೇಖರ್ ತಿಗಡಿ, ಬಿಇಒ ಸಿದ್ದವೀರಯ್ಯ ರೂದ್ನೂರ, ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಕೊಲ್ಲೂರ, ಪ್ರಮುಖರಾದ ಮನೋಜಕುಮಾರ ಗುರಿಕಾರ, ಅಶ್ವತ್ಥ ನಾರಾಯಣ, ಮಧುಸೂದನ ಘಾಳೆ, ಸಂಜೀವಕುಮಾರ ಮಾನಕಾರ, ಶಂಕರಗೌಡ, ಮಲ್ಲಣ್ಣ ದೇಸಾಯಿ, ಡಾ.ಶಿವಶಂಕರ ಕಣ್ಣಿ, ಪ್ರಕಾಶ ನಾಯಕೋಡಿ, ರಾಜಣ್ಣ ಕರದಾಳ, ನರಹರಿ ಕುಲಕರ್ಣಿ ಇತರರಿದ್ದರು. ಸಂತೋಷ ಶಿರನಾಳ ನಿರೂಪಣೆ ಮಾಡಿ ವಂದಿಸಿದರು. ಸಾಧಕರಾದ ಡಾ.ಶ್ರೀನಿವಾಸ ಕಂದಕೂರ್ (ವೈದ್ಯಕೀಯ), ಅಮರ ದೀಪಲಾ (ಕೃಷಿ), ಮಲ್ಲಿಕಾರ್ಜುನ ಭಜಂತ್ರಿ (ಸಂಗೀತ), ನಾಗರಾಜ ರೇಷ್ಮಿ, ದೇವಿದಾಸ ದಂಡೋತಿ (ಸಮಾಜ ಸೇವೆ), ಸಂತೋಷ ಶಿರನಾಳ (ಶಿಕ್ಷಣ), ಕಾಶೀನಾಥ ಬಿರಾದಾರ (ರಂಗಭೂಮಿ), ಗಾಂಧಿ ಪುರಸ್ಕಾರ ಪಡೆದ ದಂಡೋತಿ ಗ್ರಾಪಂ ಅಧ್ಯಕ್ಷರನ್ನು ಸತ್ಕರಿಸಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts