More

    ಉನ್ನತ ಸಂಸ್ಕೃತಿ, ಪರಂಪರೆಯ ನಾಡು ನಮ್ಮದು

    ಶಹಾಬಾದ್: ದೇಶದಲ್ಲಿಯೇ ಉನ್ನತ ಸಂಸ್ಕೃತಿ, ಅಧ್ಯಾತ್ಮ, ರಾಜಕೀಯ ಶಕ್ತಿಯನ್ನು ಹೊಂದಿದ್ದ ಕರುನಾಡನ್ನು ಬ್ರಿಟೀಷರು ಮೈಸೂರು, ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕವೆಂದು ಒಡೆದು ಆಳುತ್ತಿದ್ದರು. ಆದರೆ ಅಸಂಖ್ಯಾತ ಜನರ ಹೋರಾಟದಿಂದ ಇಂದು ಅಖಂಡ ಕರ್ನಾಟಕ ರೂಪಗೊಂಡಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ ಹೇಳಿದರು.

    ಪಾರ್ವತಿ ಸಭಾಗೃಹದಲ್ಲಿ ಸುವರ್ಣ ರಾಜ್ಯೋತ್ಸವ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್‌ನಿಂದ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕನ್ನಡ ಗೀತೆಗಳ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದ್ವೆÊತ, ಅದ್ವೆÊತ, ವಿಶಿಷ್ಠಾದ್ವೆÊತವನ್ನು ಅಪ್ಪಿಕೊಂಡ ನಾಡು ಕನ್ನಡ. ಅಸಂಖ್ಯಾತ ದಾಸರು, ಶರಣರನ್ನು ನಾಡಿಗೆ ನೀಡಿ, ವಿಶ್ವದಲ್ಲಿ ಪ್ರಥಮ ಸಂಸತ್ ಪರಿಕಲ್ಪನೆ ಕೊಟ್ಟ ಪುಣ್ಯಭೂಮಿ ನಮ್ಮದಾಗಿದೆ ಎಂದರು.

    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿದರು. ನಿಕಟಪೂರ್ವ ತಾಲೂಕು ಅಧ್ಯಕ್ಷ ಮೃತ್ಯುಂಜಯ ಸ್ವಾಮಿ ಹಿರೇಮಠ, ಪ್ರಮುಖರಾದ ಶರಣಗೌಡ ಪೊಲೀಸ್ ಪಾಟೀಲ್, ಮಹಾದೇವ ಬಂದಳ್ಳಿ, ಶರಣಗೌಡ ಪಾಟೀಲ್, ವಿಶ್ವಾರಾಧ್ಯ ಬಿರಾಳ, ಕನಕಪ್ಪ ದಂಡಗುಲಕರ್, ಸಾಹೇಬಗೌಡ ಬೊಗುಂಡಿ, ಪೂಜಪ್ಪ ಮೇತ್ರೆ, ಸೂರ್ಯಕಾಂತ ಕೋಬಾಳ, ರವಿ ಅಲ್ಲಮಶೆಟ್ಟಿ, ಜಯಶ್ರೀ ಸೂಡಿ, ಗುರುರಾಜ ದಿಕ್ಷೀತ್ ಇತರರಿದ್ದರು.

    ರಾಜು ಕೋಬಾಳ, ದಶರಥ ಕೋಟನೂರ ತಂಡದಿAದ ಕನ್ನಡ ಗೀತೆಗಳ ರಸಮಂಜರಿ, ಡಿ ಸ್ಪೀರಿಟ್ ನೃತ್ಯ ತಂಡದ ನಿರ್ದೇಶಕ ಪ್ರಮೋದ ನಾಟೀಕಾರ ನಿರ್ದೇಶನದ ನೃತ್ಯ ಪ್ರದರ್ಶನ ಗಮನಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts