More

    ನಮ್ಮ ಸಂವಿಧಾನವೇ ಭೀಮಬಲ

    ಶಿಕಾರಿಪುರ: ಸಂವಿಧಾನ ನಮಗೆ ಸೂರ್ತಿ, ಕೀರ್ತಿ, ಶಕ್ತಿ ಹಾಗೂ ಭೀಮಬಲ ಎಂದು ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಹೇಳಿದರು.
    ಹಾರೋಗೋಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಜಾಥಾದಲ್ಲಿ ಮಾತನಾಡಿ, ನಮ್ಮ ಸಂವಿಧಾನ ವಿಶ್ವದಲ್ಲಿಯೇ ಅತಿ ದೊಡ್ಡದು ಮತ್ತು ಮಾದರಿ ಸಂವಿಧಾನ. ಇಡೀ ಜಗತ್ತು ಬೆರಗುಗಣ್ಣಿನಿಂದ ಭಾರತದ ಸಂವಿಧಾನವನ್ನು ನೋಡುತ್ತಿದೆ. ಎಷ್ಟೋ ದೇಶಗಳು ನಮ್ಮ ಸಂವಿಧಾನದಿAದ ಸೂರ್ತಿ ಪಡೆದು ಇದೇ ಮಾದರಿಯಲ್ಲಿ ರಚಿಸಿಕೊಂಡಿವೆ. ಅಂತಹ ವಿಶಿಷ್ಟವಾದ ಸಂವಿಧಾನದ ಶ್ರೇಷ್ಠತೆ ಮತ್ತು ಆಶಯಗಳನ್ನು ಬಿಂಬಿಸುವ ಮತ್ತು ಜನತೆಯಲ್ಲಿ ಅರಿವು ಮೂಡಿಸುವುದೇ ಜಾಥಾ ಉದ್ದೇಶ ಎಂದರು.
    ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಭಾನುವಾರ ಚಾಲನೆಗೊಂಡು ಜಾಥಾ ಶಿಕಾರಿಪುರ ತಾಲೂಕಿನ ಎಲ್ಲ ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ತಹಸೀಲ್ದಾರರು, ಸಮಾಜಕಲ್ಯಾಣ ಇಲಾಖೆ, ಪಂಚಾಯತ್‌ರಾಜ್ ಇಲಾಖೆಗಳ ಸಹಯೋಗದಲ್ಲಿ ಸಾಗುಗುತ್ತಿದೆ. ಅರಶಿಣಗೆರೆ, ಹಿತ್ತಲ, ಚುರ್ಚಿಗುಂಡಿ, ಈಸೂರು, ಗಾಮ, ಹಾರೋಗೊಪ್ಪ, ತರಲಘಟ್ಟ, ಮುದ್ದನಹಳ್ಳಿ, ತಾಳಗುಂದ, ಮಂಚಿಕೊಪ್ಪ ಮತ್ತಿತರ ಗ್ರಾಮಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿ ಮುಂದುವರಿದಿದೆ. ಜಾಥಾವು -ೆ.೪ರಂದು ಮುಕ್ತಾಯಗೊಳ್ಳಲಿದೆ ಎಂದರು. ಗ್ರಾಪಂ ಅಧ್ಯಕ್ಷ ನಾಗರಾಜ್ ನಾಯ್ಕ ಸೇರಿ ಗ್ರಾಪಂ ಸದಸ್ಯರು, ಅಽಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts