More

    ‘ಚೀನಾದ ಮೇಲೆ ಖಂಡಿತ ಕೋಪವಿದೆ…’ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​; ಡ್ರ್ಯಾಗನ್​ ರಾಷ್ಟ್ರಕ್ಕೊಂದು ಖಡಕ್​ ಎಚ್ಚರಿಕೆ ರವಾನೆ

    ವಾಷಿಂಗ್ಟನ್​: ಕರೊನಾ ವೈರಸ್​ ಜಗತ್ತಿನಾದ್ಯಂತ ವ್ಯಾಪಿಸಿದೆ. ಅದೇ ಹೊತ್ತಲ್ಲಿ ಚೀನಾ ಬಗ್ಗೆ ಅನೇಕ ರಾಷ್ಟ್ರಗಳಿಗೆ ಅನುಮನವೂ ಶುರುವಾಗಿದೆ. ಚೀನಾ ಜಗತ್ತಿನೆದುರು ಗುಟ್ಟೊಂದನ್ನು ಮುಚ್ಚಿಡುತ್ತಿದೆ ಎಂಬ ಆರೋಪ ಬಲವಾಗಿ ಕೇಳುತ್ತಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ರಂತೂ ಪದೇಪದೆ ಆ ದೇಶದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ನಿನ್ನೆ ಕೂಡ ಚೀನಾಕ್ಕೆ ಒಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ವೈಟ್​ಹೌಸ್​​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್​, ಚೀನಾ ಉದ್ದೇಶ ಪೂರ್ವಕವಾಗಿಯೇ ಕರೊನಾ ಸಾಂಕ್ರಾಮಿಕ ರೋಗವನ್ನು ಹರಡಿದ್ದರೆ ಖಂಡಿತ ಅದರ ಪರಿಣಾಮಗಳನ್ನು ಆ ದೇಶ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

    ಕರೊನಾ ವೈರಸ್​​ನ್ನು ಚೀನಾ ಉದ್ದೇಶಪೂರ್ವಕವಾಗಿ ಜಗತ್ತಿಗೆ ಹರಡಿದ್ದರೆ ಅಥವಾ ಅದು ಮೊದಲೇ ಗೊತ್ತಿದ್ದರೂ ಮೌನ ವಹಿಸಿದ್ದರೆ ಅದರ ಪರಿಣಾಮಗಳನ್ನು ಎದುರಿಸಲು ಆ ದೇಶ ಸಿದ್ಧವಾಗಲಿ. ಕೊವಿಡ್​-19 ಕಾಲಿಡುವುದಕ್ಕೂ ಮೊದಲು ಅಮೆರಿಕಕ್ಕೆ ಚೀನಾದೊಂದಿಗೆ ಉತ್ತಮ ಸಂಬಂಧವಿತ್ತು. ಆದರೆ ನಂತರ ಏನೇನಾಯ್ತು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆಗಿನ ಬಾಂಧವ್ಯಕ್ಕೂ..ಈಗಿನದಕ್ಕೂ ತುಂಬ ವ್ಯತ್ಯಾಸವಾಗಿದೆ ಎಂದು ಹೇಳಿದ್ದಾರೆ.

    ನನಗೆ ಚೀನಾದ ಮೇಲೆ ಖಂಡಿತ ತುಂಬ ಕೋಪವಿದೆ. ಆದರೆ ಅದು ಸಂದರ್ಭಗಳ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ದೇಶದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್​ ಅವರು ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲಿ ಎಂಬುದು ಚೀನಾ ಆಸೆ. ಡೆಮಾಕ್ರಟಿಕ್​ ಪಕ್ಷದ, ಸದಾ ತೂಕಡಿಸುವ ಜೋ ಬಿಡೆನ್​ ಗೆದ್ದರೆ ಅಮೆರಿಕವನ್ನು ಚೀನಾ ಆಳುತ್ತದೆ ಎಂದು ಟ್ರಂಪ್​ ಹೇಳಿದರು.

    ಹಾಗೇ ಕೊವಿಡ್​-19 ಸಾವಿನ ಸಂಖ್ಯೆಯಲ್ಲಿ ಚೀನಾನೇ ಮೊದಲ ಸ್ಥಾನದಲ್ಲಿ ಇದೆ. ನಾವಲ್ಲ. ಅದು ನಿಮಗೆ ಗೊತ್ತು..ನನಗೆ ಗೊತ್ತು.. ಎಂದು ಮಾಧ್ಯಮದವರಿಗೆ ತಿಳಿಸಿದರು. (ಏಜೆನ್ಸೀಸ್​)

    ರಾಜ್ಯದ ಕರೊನಾ ವಾರ್​ರೂಂ ದೇಶಕ್ಕೇ ಮಾದರಿ: ದೇಶದ 100 ನಗರಗಳಲ್ಲಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts