More

    ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!

    ನವದೆಹಲಿ: ದಪ್ಪ ಇರುವವರು ಥಿನ್ ಆಗಬೇಕು ಎಂದರೆ ಏನು ಮಾಡಬೇಕು ಎಂದುಕೇಳಿದರೆ ಕೆಲವರು ತಮಾಷೆಯಾಗಿ ಹೀಗೆ ಹೇಳುವುದು ಸಹಜ. ಅದೇನೆಂದರೆ, ‘ಥಿನ್ ಆಗಬೇಕು ಎಂದರೆ ಜಾಸ್ತಿ ತಿನ್​ಬಾರ್ದು..’. ಹೌದು.. ತಮಾಷೆಯಾದರೂ ಬಹುಶಃ ಇದೇ ಮಾದರಿಯಲ್ಲಿ ಈ ಉಪಕರಣವನ್ನು ಕಂಡು ಹಿಡಿದಿರಬಹುದು ಅನಿಸುತ್ತದೆ. ದೇಹತೂಕ ಇಳಿಸಲು ಇದು ಜಗತ್ತಿನ ಮೊದಲ ಸರಳ ಉಪಕರಣ ಎನ್ನಲಾಗುತ್ತಿದ್ದು, ಇದನ್ನು ಬಾಯಿಯಲ್ಲಿ ಇಟ್ಟುಕೊಂಡರೆ ಸಾಕು, ಅಂಥವರು ಕೆಲವೇ ದಿನಗಳಲ್ಲಿ ದೇಹದ ತೂಕವನ್ನು ಗಣನೀಯವಾಗಿ ಕಳೆದುಕೊಳ್ಳುತ್ತಾರಂತೆ.

    ಟಾರ್ಚರ್ ಡಿವೈಸ್ ಎಂದೂ ಜನರಿಂದ ಟೀಕೆಗೆ ಒಳಗಾಗಿರುವ ಈ ಸಣ್ಣ ಅಯಸ್ಕಾಂತೀಯ ಉಪಕರಣವನ್ನು ದವಡೆಗೆ ಅಳವಡಿಸಿಕೊಂಡರೆ ಆ ವ್ಯಕ್ತಿ ಕೆಲವೇ ದಿನಗಳಲ್ಲಿ ತೂಕ ಕಳೆದುಕೊಳ್ಳುತ್ತಾನೆ. ಅಂದರೆ ಹೀಗೆ ಅಳವಡಿಸಲಾಗುವ ಈ ಉಪಕರಣ, ಘನಪದಾರ್ಥಗಳನ್ನು ತಿನ್ನಲು ಆಗದಂತೆ ಮಾಡಿಬಿಡುತ್ತದೆ. ಅರ್ಥಾತ್, ಈ ಉಪಕರಣ ಅಳವಡಿಸಿಕೊಂಡ ಬಳಿಕ ದ್ರವಪದಾರ್ಥಗಳನ್ನಷ್ಟೇ ಆರಾಮಾಗಿ ಸೇವಿಸಬಹುದು. ಉಸಿರಾಡಲು, ಮಾತನಾಡಲು ಏನೂ ತೊಂದರೆ ಮಾಡದ ಇದು ಘನ ಪದಾರ್ಥ ಸೇವಿಸಲು ಮಾತ್ರ ಸಹಕರಿಸುವುದಿಲ್ಲ. ಸಣ್ಣಗಾಗಬೇಕು ಎಂಬ ಮನಸಿದ್ದರೂ ಬಾಯಿಚಪಲವನ್ನು ನಿಯಂತ್ರಿಸಿಕೊಳ್ಳಲಾಗದಷ್ಟು ಮನೋಬಲ ಇರದವರಿಗೆ ಇದು ಅತ್ಯಂತ ಸೂಕ್ತ ಉಪಕರಣ ಎನ್ನಲಾಗಿದೆ.

    ಇದನ್ನೂ ಓದಿ: ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಯುನಿವರ್ಸಿಟಿ ಆಫ್ ಒಟಾಗೋದ ಸೈಂಟಿಸ್ಟ್​ಗಳು ಈ ಉಪಕರಣವನ್ನು ರೂಪಿಸಿದ್ದಾರೆ. ಇದನ್ನು ಸಾಮಾನ್ಯ ದಂತವೈದ್ಯರ ಬಳಿಗೆ ತೆರಳಿ ಅವರಿಂದ ಹಾಕಿಸಿಕೊಳ್ಳಬಹುದು. ಒಂದುವೇಳೆ ತುರ್ತು ಸಂದರ್ಭಗಳಲ್ಲಿ ವ್ಯಕ್ತಿ ಸ್ವತಃ ಇದನ್ನು ತೆಗೆಯಬಹುದು. ನಂತರ ಮತ್ತೆ ದಂತವೈದ್ಯರ ಬಳಿಗೆ ಹೋಗಿ ಅಳವಡಿಸಿಕೊಳ್ಳಬಹುದು. ಇದನ್ನು ಬಳಸಿದವರು ಎರಡೇ ವಾರದಲ್ಲಿ 6.36 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ಎಷ್ಟು ತೂಕ ಕಳೆದುಕೊಳ್ಳಬೇಕು ಎಂಬುದರ ಅನುಸಾರ ಇದನ್ನು ಒಂದಷ್ಟು ಅವಧಿಗೆ ಧರಿಸಿ ಮತ್ತೆ ಕೆಲವು ದಿನಗಳ ಬಿಡುವು ಪಡೆದು ಪುನಃ ಅಳವಡಿಸಿಕೊಂಡು ಇನ್ನಷ್ಟು ತೂಕವನ್ನು ಕಳೆದುಕೊಳ್ಳಬಹುದು ಎನ್ನುತ್ತಾರೆ ಇದನ್ನು ಕಂಡುಹಿಡಿದ ಪರಿಣತರು. ಪಾಲ್​ ಬ್ರಂಟನ್ ಎಂಬವರ ನೇತೃತ್ವದ ಪರಿಣತರ ತಂಡ ಈ ಸಾಧನವನ್ನು ಕಂಡುಹಿಡಿದು ವಿನ್ಯಾಸಗೊಳಿಸಿದೆ. (ಏಜೆನ್ಸೀಸ್)

    ಈ ಕರೊನಾ ಸಂಕಷ್ಟದಲ್ಲೂ 70 ಲಕ್ಷ ರೂ. ಲಾಟರಿ ಹೊಡೆದರೆ ಹೇಗಿರುತ್ತೆ!?; ಬಂಪರ್ ಪ್ರೈಜ್​ ಮಾಹಿತಿ ಇಲ್ಲಿದೆ…

    ಪ್ರಿಯಕರನ ಮೇಲಿನ ಸಿಟ್ಟಿಗೆ ಆತನ ಬೈಕಿಗೇ ಕಿಚ್ಚಿಟ್ಟಳು; ಧಗಧಗನೆ ಹೊತ್ತಿ ಉರಿಯಿತು ಅವಳೇ ಕೊಟ್ಟಿದ್ದ ದುಬಾರಿ ಗಿಫ್ಟ್​!

    ಕೆಥೊಲಿಕ್ ಪಾದ್ರಿಗಳ ಸೆಕ್ಸ್​ ಸ್ಕ್ಯಾಂಡಲ್​: 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts