More

    ಫೆಬ್ರವರಿ 9ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅತಿಥಿಗಳಿಗೆ ಸಸ್ಯಾಹಾರದ ಔತಣ!

    ನವದೆಹಲಿ: ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಆಸ್ಕರ್​ ಪ್ರಶಸ್ತಿ ಮೂರ್ತಿಗಳು ಸಿದ್ಧಗೊಂಡು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಕುಳಿತಿವೆ.

    ಫೆಬ್ರವರಿ 9ರಂದು ನಡೆಯಲಿರುವ ಆಸ್ಕರ್ ಪ್ರಶಸ್ತಿಗಳು ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್, ಲಿಟಲ್ ವುಮೆನ್, ಜೋಕರ್ ಆ್ಯಂಡ್​ ದಿ ಐರಿಶ್‌ಮನ್, ಪಾರಾಸೈಟ್​ ಮುಂತಾದ ಚಲನಚಿತ್ರಗಳು ಆಸ್ಲರ್​ ಗೌರವಕ್ಕಾಗಿ ಸೆಣಸಾಟ ನಡೆಸಲಿವೆ.

    ಅಕಾಡೆಮಿ ಪ್ರಶಸ್ತಿಗಳು ಈ ಬಾರಿ ಪ್ರಸ್ತುತ ಸಾಮಾಜಿಕ ಕಾರಣಗಳಿಂದ ಪ್ರೇರಿತವಾಗಿವೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಸ್ಯ ಆಧಾರಿತ ಮೆನುವನ್ನು ಹೊಂದಿರುತ್ತದೆ ಎಂದು ಲೇಖನವೊಂದು ತಿಳಿಸಿದೆ.

    ಜನವರಿ 27ರಂದು ಆಯೋಜಿಸಿದ್ದ ಉಪಾಹಾರದಲ್ಲಿಯೂ ಸಸ್ಯಾಹಾರವೇ ಮೆನುವಾಗಿತ್ತು. ಅದರಂತೆ ಫೆಬ್ರವರಿಯಲ್ಲಿ ನಡೆಯಲಿರುವ ಕಾರ್ಯಕ್ರಮವೂ ಸಸ್ಯಾಹಾರವಿರಲಿದೆ ಎಂಬ ಸೂಚನೆ ನೀಡಲಾಗಿತ್ತು.

    ಆಹಾರ ಪೂರೈಕೆಯ ಜವಾಬ್ದಾರಿ ಹೊತ್ತಿರುವ ವೋಲ್​ಫ್ಯಾಂಗ್ ಪಕ್ ಎಂಬುವವರು, ಈ ಬಾರಿ ಸಸ್ಯಾಹಾರವೇ ನಮ್ಮ ಆಯ್ಕೆ ಎಂದು ಖಚಿತ ಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪಕ್​, ಈ ಬಾರಿ ಶೇ.60ರಿಂದ 70 ಸಸ್ಯಾಹಾರವಿರಲಿದೆ. ಪಿಜ್ಜಾ, ಪೆಸ್ಟೊ, ಉರಿದ ತರಕಾರಿಗಳು ಇರಲಿವೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts