More

    ಆಸ್ಕರ್​ 2023: ಭಾರತದ ದಿ ಎಲಿಫೆಂಟ್​ ವಿಸ್ಪರರ್ಸ್​ ಸಾಕ್ಷ್ಯಚಿತ್ರಕ್ಕೆ ಒಲಿದ ಆಸ್ಕರ್​ ಪ್ರಶಸ್ತಿ

    ವಾಷಿಂಗ್ಟನ್​: ಲಾಜ್​ ಏಂಜಲೀಸ್​ನಲ್ಲಿರುವ 95ನೇ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಕಾರ್ತಿಕ್​ ಗೊನ್ಸಾಲ್ವಿಸ್​ ನಿರ್ದೇಶನದ ಮತ್ತು ಗುನೀತ್​ ಮೊಂಗಾ ನಿರ್ಮಾಣದ ದಿ ಎಲಿಫೆಂಟ್​ ವಿಸ್ಪರರ್ಸ್​ ಸಾಕ್ಷ್ಯಚಿತ್ರಕ್ಕೆ ಆಸ್ಕರ್​ ಅವಾರ್ಡ್​ ದೊರೆತಿದೆ.

    ಹೌಸ್ ದಟ್ ಆನಂದ ಬಿಲ್ಟ್ ಮತ್ತು ಆನ್ ಎನ್‌ಕೌಂಟರ್ ವಿತ್ ಫೇಸಸ್, ಇದು ಕ್ರಮವಾಗಿ 1969 ಮತ್ತು 1979 ರಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಸ್ಪರ್ಧಿಸಿತು. ಈ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ದಿ ಎಲಿಫೆಂಟ್​ ವಿಸ್ಪರರ್ಸ್​ ಸಾಕ್ಷ್ಯಚಿತ್ರ ಪಾತ್ರವಾಗಿದೆ. 1969 ಮತ್ತು 1979ರಲ್ಲಿ ಅನುಕ್ರಮವಾಗಿ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಸ್ಪರ್ಧಿಸಿದ ಆನಂದ ಬಿಲ್ಟ್ ಮತ್ತು ಆ್ಯನ್​ ಎನ್‌ಕೌಂಟರ್ ವಿತ್ ಫೇಸಸ್ ನಳಿಕ ನಾಮನಿರ್ದೇಶನಗೊಂಡ ಮೂರನೆಯ ಸಾಕ್ಷ್ಯಚಿತ್ರ ಇದಾಗಿದೆ.

    ಇದನ್ನೂ ಓದಿ: ಹೊಯ್ಸಳ ಅಲ್ಲ, ಗುರುದೇವ್ ಹೊಯ್ಸಳ; ಬದಲಾಯಿತು ಡಾಲಿ ಧನಂಜಯ 25ನೇ ಚಿತ್ರದ ಶೀರ್ಷಿಕೆ

    ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರವು ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಥಳೀಯ ದಂಪತಿಗಳಾದ ಬೊಮ್ಮನ್ ಮತ್ತು ಬೆಳ್ಳಿಯ ಆರೈಕೆಯಲ್ಲಿರುವ ರಘು ಎಂಬ ಅನಾಥ ಆನೆ ಮರಿಯ ಕಥೆಯಾಗಿದೆ. ಸಾಕ್ಷ್ಯಚಿತ್ರವು ಅವರ ನಡುವೆ ಬೆಳೆಯುವ ಬಾಂಧವ್ಯವನ್ನು ಮಾತ್ರವಲ್ಲದೆ, ಅವರ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಅದ್ಧುರಿಯಾಗಿ ತೆರೆಯ ಮೇಲೆ ತೋರಿಸಿದೆ. ಎಲಿಫೆಂಟ್ ವಿಸ್ಪರರ್ಸ್ 2022ರ ಡಿಸೆಂಬರ್​ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು.

    ಭಾರತಕ್ಕೆ ಈ ವರ್ಷ ಆಸ್ಕರ್ ವೇದಿಕೆಯಲ್ಲಿ ವಿಶೇಷ ಗಮನ ಸಿಕ್ಕಿದೆ. ದಿ ಎಲಿಫೆಂಟ್ ವಿಸ್ಪರರ್ಸ್ ಜೊತೆಗೆ ಜಾಗತಿಕವಾಗಿ ವೈರಲ್ ಆಗಿರುವ ಎಸ್‌ಎಸ್ ರಾಜಮೌಳಿ ಅವರ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆಗೆ ನಾಮನಿರ್ದೇಶನಗೊಂಡಿದೆ. ಇಷ್ಟೇ ಅಲ್ಲದೆ, ನಿರ್ದೇಶಕ ಶೌನಕ್ ಸೇನ್ ಅವರ ಆಲ್ ದಟ್ ಬ್ರೀತ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್ ಫಿಲ್ಮ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಪರ್ಸಿಸ್ ಖಂಬಟ್ಟಾ ಮತ್ತು ಪ್ರಿಯಾಂಕಾ ಚೋಪ್ರಾ ನಂತರ ಆಸ್ಕರ್‌ನಲ್ಲಿ ನಿರೂಪಣೆ ಮಾಡಿದ ಮೂರನೇ ಭಾರತೀಯ ತಾರೆ ಎಂಬ ಹೆಗ್ಗಳಿಕೆಗೆ ನಟಿ ದೀಪಿಕಾ ಪಡುಕೋಣೆ ಭಾಜನಾರಾಗಿದ್ದಾರೆ.

    ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಜಿಮ್ಮಿ ಕಿಮ್ಮೆಲ್ (ಮೂರನೇ ಬಾರಿಗೆ) ಆಸ್ಕರ್‌ ಅನ್ನು ಆಯೋಜಿಸಿದ್ದಾರೆ. (ಏಜೆನ್ಸೀಸ್​)

    ಇಬ್ಬರು ನೆಲದ ಮೇಲೆ ಅಸಯ್ಯವಾಗಿ ಮಲಗಿದ್ದರು: IPS​ ಅಧಿಕಾರಿ-ASI ಪತ್ನಿ ವಿರುದ್ಧ ಹೆಡ್​ ಕಾನ್​ಸ್ಟೆಬಲ್​​​ ದೂರು

    ನಟಿ ಮೀನಾಗೆ ಈ ನಟನ ಮೇಲೆ ನಿಜವಾಗಿ ಲವ್​ ಆಗಿತ್ತಂತೆ! ಮದ್ವೆ ದಿನ ಕಣ್ಣೀರು ಸಹ ಹಾಕಿದ್ದರಂತೆ

    ಚಿನ್ನದಂತಹ ರಸ್ತೆ… ಮೋದಿ ಬಂಗಾರದ ಉಡುಗೊರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts