More

    ಯುಎಸ್ ಓಪನ್ ಚಾಂಪಿಯನ್ ನವೊಮಿ ಒಸಾಕಾ ಫ್ರೆಂಚ್ ಓಪನ್ ಆಡಲ್ಲ..!

    ಪ್ಯಾರಿಸ್: ಮಂಡಿನೋವಿನಿಂದ ಬಳಲುತ್ತಿರುವ ಯುಎಸ್ ಓಪನ್ ಚಾಂಪಿಯನ್ ನವೊಮಿ ಒಸಾಕಾ ಸೆಪ್ಟೆಂಬರ್ 27 ರಿಂದ ಆರಂಭವಾಗಲಿರುವ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹಾಲಿ ಚಾಂಪಿಯನ್ ಆಶ್ ಬಾರ್ಟಿ ಬಳಿಕ ಫ್ರೆಂಚ್ ಓಪನ್‌ನಿಂದ ಹಿಂದೆ ಸರಿಯುತ್ತಿರುವ ಮತ್ತೋರ್ವ ಸ್ಟಾರ್ ಆಟಗಾರ್ತಿ ಎನಿಸಿದ್ದಾರೆ. ಕರೊನಾ ವೈರಸ್ ಭೀತಿ ನಡುವೆಯೂ ನಡೆಯುತ್ತಿರುವ 2ನೇ ಗ್ರಾಂಡ್ ಸ್ಲಾಂ ಟೂರ್ನಿ ಇದಾಗಿದೆ. ಕಳೆದ ವಾರವಷ್ಟೇ ಯುಎಸ್ ಓಪನ್ ಟೂರ್ನಿ ಆಯೋಜಿಸಲಾಗಿತ್ತು.

    ಇದನ್ನೂ ಓದಿ : ಅಮ್ಮನಾದ ಮಯಂತಿ ಲ್ಯಾಂಗರ್.. ಐಪಿಎಲ್ ನಿರೂಪಣೆಯಿಂದ ಹೊರಕ್ಕೆ..

    ಪ್ರತಿದಿನ 5 ಸಾವಿರ ಮಂದಿಗಷ್ಟೇ ಅವಕಾಶ..!

    ಕರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಪ್ಯಾರಿಸ್‌ನಲ್ಲಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿ ವೀಕ್ಷಿಸಲು ಪ್ರತಿದಿನ ಕೇವಲ 5 ಸಾವಿರ ಮಂದಿಗಷ್ಟೇ ಅವಕಾಶ ಕಲ್ಪಿಸಲಾಗುತ್ತಿದೆ. ಈ ಮೊದಲು ಪ್ರತಿದಿನ 11,500 ಮಂದಿಗೆ ಟೂರ್ನಿ ವೀಕ್ಷಿಸಲು ಅನುಮತಿ ನೀಡಲು ನಿರ್ಧರಿಸಲಾಗಿತ್ತು. ಆದರೆ, ಸ್ಥಳೀಯ ಪೊಲೀಸರು ಇಷ್ಟು ಮಂದಿಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ 5 ಸಾವಿರ ಮಂದಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ‘ಆರೋಗ್ಯದ ಹಿತದೃಷ್ಟಿಯಿಂದ ರೋಲ್ಯಾಂಡ್ ಗ್ಯಾರೊಸ್ ಅಂಗಳದಲ್ಲಿ ಹೆಚ್ಚು ಜನ ಓಡಾಡಲು ಅವಕಾಶ ನೀಡಲಾಗುತ್ತಿಲ್ಲ. ಕ್ರೀಡೆಯೂ ಆರ್ಥಿಕ ದೃಷ್ಟಿಯಿಂದ ದೇಶಕ್ಕೆ ಮುಖ್ಯವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

    ಇದನ್ನೂ ಓದಿ: VIDEO | ಆರ್‌ಸಿಬಿ ಹಾಡಿನಲ್ಲಿ ಹಿಂದಿ ಹೇರಿಕೆ ವಿವಾದ, ಕನ್ನಡಿಗರ ಆಕ್ರೋಶ

    ವಿಶ್ವ ನಂ.3 ಒಸಾಕಾ, ಕಳೆದ ತಿಂಗಳು ನ್ಯೂಯಾರ್ಕ್‌ನಲ್ಲಿ ನಡೆದ ವೆಸ್ಟರ್ನ್ ಹಾಗೂ ಸದರ್ನ್ ಓಪನ್ ಟೂರ್ನಿ ವೇಳೆ ಮಂಡಿ ನೋವಿಗೆ ತುತ್ತಾಗಿದ್ದರು. ಇದರಿಂದಾಗಿ ಟೂರ್ನಿಯ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು. ನೋವಿನ ನಡುವೆಯೂ ಯುಎಸ್ ಓಪನ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಈ ವರ್ಷ ಫ್ರೆಂಚ್ ಓಪನ್ ಆಡಲು ಸಾಧ್ಯವಾಗುತ್ತಿಲ್ಲ ಎಂದು ಒಸಾಕಾ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಕಳೆದ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಒಸಾಕಾ, ವಿಕ್ಟೋರಿಯಾ ಅಜರೆಂಕಾ ಅವರನ್ನು ಮಣಿಸಿ 3ನೇ ಗ್ರಾಂಡ್ ಸ್ಲಾಂ ಗೆದ್ದುಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts