More

    ತಾಯಿ ಹಾಲಿನಲ್ಲಿದೆ ಪೌಷ್ಟಿಕಾಂಶ

    ಕುರುಗೋಡು: ನವಜಾತ ಶಿಶುಗಳಿಗೆ ತಾಯಿ ಹಾಲು ಅಮೃತ ಇದ್ದಂತೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಾಘವ ಶೆಟ್ಟಿ ಹೇಳಿದರು.
    ಓರ್ವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗ್ರಾಮದ 1ನೇ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ನವಜಾತ ಶಿಶು ಆರೈಕೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನವಜಾತ ಶಿಶುಗಳಿಗೆ ತಾಯಿ ಹಾಲು ಅಮೃತ ಇದ್ದಂತೆ

    ತಾಯಿಯ ಹಾಲಿನಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುತ್ತದೆ. ಬಾಟಲಿ ಹಾಲನ್ನು ಕುಡಿದ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುವ ಸಾಧ್ಯತೆಗಳಿವೆ ಎಂದರು. ನವಜಾತ ಶಿಶುಗಳ ಆರೈಕೆ ಸುಲಭದ ಕೆಲಸವಲ್ಲ. ಶಿಶುಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಸಣ್ಣಪುಟ್ಟ ಸಮಸ್ಯೆಗಳಿಗೂ ಪದೇಪದೆ ವೈದ್ಯರ ಬಳಿ ಹೋಗಲು ಸಾಧ್ಯವಿಲ್ಲ. ಕೆಲವು ಸಾಮಾನ್ಯ ಸಮಸ್ಯೆಗಳನ್ನು ಮನೆಯಲ್ಲಿಯೇ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು. ಗ್ರಾಪಂ ಸದಸ್ಯೆ ಎಸ್.ಬಿ.ಪುಷ್ಪಾವತಿ, ಸಿಎಚ್‌ಸಿಒ ಚಂದ್ರಿಕಾ ಇತರರಿದ್ದರು.

    ಇದನ್ನೂ ಓದಿ: ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ, ಮಹಿಳೆ ಸಾವು: ಪ್ರಾಣಾಪಾಯದಿಂದ ಪಾರಾದ ತಂದೆ,ಮಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts