More

    ಭೀಕರ ಕರೊನಾ ವೈರಸ್​ ಹುಟ್ಟು ಇನ್ನೂ ಸ್ಪಷ್ಟವಾಗಿಲ್ಲ : ವಿಜ್ಞಾನಿಗಳ ಅಸಮಾಧಾನ

    ಲಂಡನ್: ಕರೊನಾ ವೈರಸ್​​ನ ಮೂಲ ಇನ್ನೂ ಸ್ಪಷ್ಟವಾಗಿಲ್ಲ. ಅದರ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯಬೇಕು. ಮಾಹಿತಿ-ಆಧಾರಿತ ತನಿಖೆಯು ವ್ಯತಿರಿಕ್ತವಾದ ತೀರ್ಮಾನ ನೀಡದ ಹೊರತು, ಅದು ಪ್ರಯೋಗಾಲಯದಿಂದ ಸೋರಿಕೆಯಾಯಿತು ಎಂಬ ಸಿದ್ಧಾಂತವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಪ್ರಮುಖ ವಿಜ್ಞಾನಿಗಳ ಗುಂಪು ಹೇಳಿದೆ.

    2019 ರ ಕೊನೆಯಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್​-19 ವೈರಸ್​ ಇದುವರೆಗೆ ಜಗತ್ತಿನಾದ್ಯಂತ 3.34 ಮಿಲಿಯನ್ ಜನರ ಸಾವಿಗೆ ಕಾರಣವಾಗಿದೆ. ಟ್ರಿಲಿಯನ್​ಗಟ್ಟಲೆ ಡಾಲರ್​ಗಳ ಆದಾಯವನ್ನು ನಷ್ಟಗೊಳಿಸಿದೆ ಮತ್ತು ಬಿಲಿಯನ್​ಗಟ್ಟಲೆ ಜನರ ಜೀವನವನ್ನು ಏರುಪೇರಾಗಿಸಿದೆ.

    ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಮೂವರು ಮೀನುಗಾರರ ರಕ್ಷಿಸಿದ ಕೋಸ್ಟ್‌ಗಾರ್ಡ್

    “ಕರೊನಾ ಸಾಂಕ್ರಾಮಿಕದ ಹುಟ್ಟು ಹೇಗಾಯಿತು ಎಂದು ತಿಳಿಯಲು ಇನ್ನೂ ಹೆಚ್ಚಿನ ತನಿಖೆಯಾಗಬೇಕಿದೆ” ಎನ್ನುತ್ತಾರೆ ಯೂನಿವರ್ಸಿಟಿ ಆಫ್ ಕೇಂಬ್ರಿಜ್​ನ ಕ್ಲಿನಿಕಲ್ ಮೈಕ್ರೊಬಯಲಾಜಿಸ್ಟ್​ ರವೀಂದ್ರ ಗುಪ್ತ ಮತ್ತು ಫ್ರೆಡ್​ ಹಚ್ಚಿನ್​ಸನ್​ ಕ್ಯಾನ್ಸರ್ ರಿಸರ್ಚ್​ ಸೆಂಟರ್​ನಲ್ಲಿ ವೈರಸ್​​ಗಳ ವಿಕಾಸವನ್ನು ಅಧ್ಯಯನ ಮಾಡುವ ಜೆಸ್ಸಿ ಬ್ಲೂಮ್ . ಪ್ರತಿಷ್ಠಿತ ಜರ್ನಲ್​ ಸೈನ್ಸ್​ಗೆ ಪತ್ರ ಬರೆದಿರುವ 18 ವಿಜ್ಞಾನಿಗಳಲ್ಲಿ ಇವರೂ ಸೇರಿದ್ದಾರೆ.

    ಮತ್ತೊಬ್ಬ ವಿಜ್ಞಾನಿ, ಸ್ಟಾನ್​​ಫರ್ಡ್​ ಯೂನಿವರ್ಸಿಟಿಯ ಮೈಕ್ರೊಬಯಾಲಜಿ ಪ್ರೊಫೆಸರ್​ ಡೇವಿಡ್ ರೆಲ್​ಮನ್ ಅವರು, “ಲ್ಯಾಬ್‌ನಿಂದ ಆಕಸ್ಮಿಕವಾಗಿ ಬಿಡುಗಡೆಯಾದ ಸಿದ್ಧಾಂತ ಮತ್ತು ಜೂನೋಟಿಕ್ ಸ್ಪಿಲ್‌ಓವರ್ ಸಿದ್ಧಾಂತ – ಎರಡೂ ಸಾಧ್ಯವಾಗಿಯೇ ಉಳಿದಿವೆ” ಎನ್ನುತ್ತಾರೆ. ಈ ವಿಜ್ಞಾನಿಗಳ ಪತ್ರ ಇಲ್ಲಿದೆ : https://science.sciencemag.org/content/372/6543/694.1

    ಪ್ರಯೋಗಾಲಯದಿಂದ ಸೋರಿಕೆಯಾಗಿ ವೈರಸ್​ ಹರಡಿದೆ ಎಂಬ ಆರೋಪವನ್ನು ಸಮತೋಲನಯುತವಾಗಿ ಅಧ್ಯಯನ ಮಾಡುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ ಎಂದೂ ಈ ವಿಜ್ಞಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈರಸ್​ ಉಗಮದ ನಿಜವಾದ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಭವಿಷ್ಯದಲ್ಲಿ ಈ ತೆರನ ಸಾಂಕ್ರಾಮಿಕಗಳು ಹರಡುವುದನ್ನು ತಪ್ಪಿಸಲು ಅತ್ಯಂತ ಅವಶ್ಯಕ ಎಂದಿದ್ದಾರೆ. (ಏಜೆನ್ಸೀಸ್)

    VIDEO | ಕರ್ನಾಟಕಕ್ಕೆ ಇನ್ನೂ ಎರಡು ಆಕ್ಸಿಜನ್ ಎಕ್ಸ್​ಪ್ರೆಸ್​

    ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್​ ವಿಚಾರಣೆ ನಡೆಸಿದ ದೆಹಲಿ ಪೊಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts