More

    ಜಾತ್ಯಾತೀತ ಮನೋಭಾವದಿಂದ ಸಂಘಟಿತರಾಗಿ

    ಎನ್.ಆರ್.ಪುರ: ರಾಜಕೀಯ ಮಾಡದೇ ಜಾತ್ಯಾತೀತ ಮನೋಭಾವ ಬೆಳೆಸಿಕೊಂಡು ಸಂಘಟಿತರಾಗಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
    ಪಟ್ಟಣದಲ್ಲಿ ತಾಲೂಕು ಶಾಮಿಯಾನ, ಡೆಕೋರೇಷನ್,ಧ್ವನಿ ಮತ್ತು ಬೆಳಕು ಮಾಲೀಕರ ಸಂಘದಿಂದ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಸಂಘಟನೆಗಳು ರಾಜಕಿಯೇತರವಾಗಿದ್ದಾಗ ಮಾತ್ರ ಸಂಘ ಬಲಿಷ್ಠವಾಗಿ ಸಂಘಟಿತವಾಗುತ್ತದೆ ಎಂದರು.
    ಸಭೆ, ಸಮಾರಂಭಗಳು ಶಾಮಿಯಾನ, ಧ್ವನಿ, ಬೆಳಕು, ಡೆಕೋರೇಷನ್ ಇಲ್ಲದೆ ಆಗಲು ಸಾಧ್ಯವಿಲ್ಲ. ಈ ಈ ಉದ್ಯಮಕ್ಕೆ ಯಾವ ರೀತಿಯಾಗಿ ಸಹಕಾರ ನೀಡಬಹುದು ಎಂದು ಚರ್ಚಿಸಿ ಸಹಾಯ ಮಾಡಲು ಪ್ರಯತ್ನಿಸಲಾಗುವುದು. ಈ ವೃತ್ತಿ ಮಾಡುವವರನ್ನು ಅಸಂಘಟಿತ ಕೂಲಿಕಾರ್ಮಿಕರ ವರ್ಗದಡಿ ತರಲು ಯತ್ನಿಸಲಾಗುವುದು ಎಂದು ಹೇಳಿದರು.
    ರಾಜ್ಯ ಧ್ವನಿ, ಬೆಳಕು ಮತ್ತು ಶಾಮಿಯಾನ ಸಂಘದ ರಾಜ್ಯಾಧ್ಯಕ್ಷ ಆರ್.ಲಕ್ಷ್ಮ್ಮಣ್ ಮಾತನಾಡಿ, ಜಾತಿ ಮತ ಬೇಧವಿಲ್ಲದ ಏಕೈಕ ಸಂಘ ನಮ್ಮದು. ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಸಂಘಟನೆ ಮಾಡಲಾಗಿದೆ. ಈ ವೃತ್ತಿ ಮಾಡುವವರು ಬಡವರು, ಮಧ್ಯಮ ವರ್ಗದವರು. ಇಂತಹವರ ಸಹಾಯಕ್ಕೆ ಸರ್ಕಾರ ಮುಂದಾಗಬೇಕು ಎಂದರು.
    ಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಮುಲ್ಲಾ ಮಾತನಾಡಿ, 2004ರಲ್ಲಿ 12 ಜಿಲ್ಲೆಗಳಲ್ಲಿ ಮಾತ್ರ ಸಂಘಗಳನ್ನು ಸ್ಥಾಪಿಸಲಾಯಿತು. ನಂತರ ರಾಜ್ಯದ ಎಲ್ಲ ಕಡೆ ಸಂಘ ಸ್ಥಾಪಿಸಿಸಲಾಗಿದೆ. ನಾವು ಜಾತಿ, ಮತ ಬೇಧವಿಲ್ಲದೆ ಎಲ್ಲರ ಸೇವೆ ಮಾಡುತ್ತೇವೆ. ಆದರೆ ನಮ್ಮ ವೃತ್ತಿಯಲ್ಲಿ ಯಾರಿಗಾದರೂ ಅನಾಹುತಗಳಾದರೆ ಯಾವ ಇಲಾಖೆಗೆ ತಿಳಿಸಬೇಕು. ಯಾವ ಇಲಾಖೆಯಿಂದ ಪರಿಹಾರ ದೊರಕುತ್ತದೆ ಎಂಬ ಬಗ್ಗೆ ಸಿಎಂ ಜತೆ ಚರ್ಚಿಸಿ ನಮಗೆ ಸ್ಪಷ್ಟ ಪಡಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
    ಸಂಘದ ರಾಜ್ಯ ಸಂಘದ ಕಾರ್ಯದರ್ಶಿ ಎಚ್.ಮಂಜುನಾಥ್, ಜಿಲ್ಲಾಧ್ಯಕ್ಷ ನಾಸಿರ್‌ತಾಜ್, ಗೌರವಾಧ್ಯಕ್ಷ ನಾಗಾರ್ಜುನ, ನೂತನ ಅಧ್ಯಕ್ಷ ಡಿ.ಐ.ಬಾಬು, ಕಾರ್ಯದರ್ಶಿ ಸಲ್ಮಾನ್ ಅಹಮ್ಮದ್, ಸಹ ಕಾರ್ಯದರ್ಶಿ ಪ್ರಜ್ವಲ್, ಶಶಿಧರ, ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ಪೂರ್ಣೇಶ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ಸುರೇಂದ್ರಾಚಾರ್,ಪ್ರಭಾಕರ್, ಸದಾಶಿವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts