More

    ಜೀನಿಯಸ್​ ಮಾತ್ರ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ ಹಂದಿಯನ್ನು ಗುರುತಿಸಲು ಸಾಧ್ಯ!

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟ್ಟಿಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿಯಾಗಿದೆ.

    ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ….

    ಜೀನಿಯಸ್​ ಮಾತ್ರ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ ಹಂದಿಯನ್ನು ಗುರುತಿಸಲು ಸಾಧ್ಯ!

    ಸದ್ಯ ವೈರಲ್​ ಆಗಿರುವ ಫೋಟೋದಲ್ಲಿ ನೀವು ಕಲ್ಲ ಬಂಡೆಗಳನ್ನು ಕಾಣಬಹುದು. ಅವುಗಳ ನಡುವೆ ಕೆಲ ಮೊಲದ ಮರಿಗಳು ಸಹ ಇದೆ. ಆದರೆ, ಫೋಟೋದ ಒಂದು ಭಾಗದಲ್ಲಿ ಹಂದಿಯೊಂದು ಮಲಗಿದೆ. ಅದನ್ನು ನೀವು ಪತ್ತೆಹಚ್ಚಬೇಕು. ಆದರೆ, ಅದು ಅಷ್ಟು ಸುಲಭವಲ್ಲ. ಏಕೆಂದರೆ, ಹಂದಿಯ ಬಣ್ಣ ಮತ್ತು ಬಂಡೆಗಳ ಬಣ್ಣಕ್ಕೂ ಸಾಮ್ಯತೆ ಇದೆ. ನೋಡಲು ಹಂದಿ ಬಂಡೆಯಂತೆಯೇ ಕಾಣುತ್ತದೆ. ತೀಕ್ಷ್ಣ ದೃಷ್ಟಿಯುಳ್ಳವರು ಹಾಗೂ ಬುದ್ಧಿವಂತರು ಮಾತ್ರ ಹಂದಿಯನ್ನು ಹುಡುಕಬಲ್ಲರು. ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಹಂದಿಯು ಫೋಟೋದ ಯಾವ ಭಾಗದಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ನಿಮ್ಮ ಕಣ್ಣಿನ ಸಾಮರ್ಥ್ಯವನ್ನು ಪರೀಕ್ಷಿಸುವ ಸಮಯ ಈಗ ಶುರು.

    10 ಸೆಕೆಂಡ್​ ಸಮಯದಲ್ಲಿ ನೀವು ಫೋಟೋದಲ್ಲಿ ಹಂದಿಯನ್ನು ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಹಂದಿಯನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡಿ ಸುಸ್ತಾಗಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ. (ಏಜೆನ್ಸೀಸ್​)

    ಜೀನಿಯಸ್​ ಮಾತ್ರ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ ಹಂದಿಯನ್ನು ಗುರುತಿಸಲು ಸಾಧ್ಯ!

    ಏಲಿಯನ್ ದಾಳಿಯಿಂದ ಸೌರ ಸುನಾಮಿಯವರೆಗೆ! ಭಯಾನಕವಾಗಿದೆ ಬಾಬಾ ವಂಗಾರ 2023ರ ಭವಿಷ್ಯವಾಣಿ

    ಪ್ರೀತಿಸಿ ಮದುವೆಯಾಗಿ ಒಟ್ಟಿಗೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ದಂಪತಿ ಬಂಧನ

    ಡಿ. 5ರಂದು ರಾತ್ರಿ 8 ಗಂಟೆಗೆ ನನ್ನ ತಾಯಿ ಸಾಯಲಿದ್ದಾರೆ! ಶಿಕ್ಷಕನ ಲೀವ್​ ಲೆಟರ್​ ನೋಡಿ ಮುಖ್ಯಶಿಕ್ಷಕರಿಗೆ ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts