More

    ರೈಲ್ವೆ ಇಲಾಖೆ ಖಾಸಗೀಕರಣಕ್ಕೆ ವಿರೋಧ

    ವಿಜಯಪುರ :ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ(ಎಐಯುವೈಎಸ್‌ಸಿ) ಕಾರ್ಯಕರ್ತರು ಶನಿವಾರ ವಿಜಯಪುರ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸಂಘಟನೆ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ದೇಶದ ಲಕ್ಷಾಂತರ ಯುವಜನರಿಗೆ ಉದ್ಯೋಗ ನೀಡುವ ರೈಲ್ವೆ ಇಲಾಖೆಯಲ್ಲಿ 90 ಸಾವಿರ ಹುದ್ದೆಗಳನ್ನು ರದ್ದು ಮಾಡಿ, ಖಾಸಗಿಯವರಿಗೆ ಇಲಾಖೆಯನ್ನು ಒಪ್ಪಿಸಿ, ಗುತ್ತಿಗೆ ಕಾರ್ಮಿಕರ ಮೂಲಕ ಯುವಜನರನ್ನು ಶೋಷಣೆ ಮಾಡಲು ಹೊರಟಿದೆ. ದೇಶದೆಲ್ಲೆಡೆ ನಿರುದ್ಯೋಗ ಭೀಕರವಾಗಿ ಹೆಚ್ಚುತ್ತಿದೆ. ವಿದ್ಯಾವಂತ ನಿರುದ್ಯೋಗಿಗಳ ಸಂಖೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ. ಉನ್ನತ ಶಿಕ್ಷಣ ಪಡೆದು ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾವಂತ ಯುವಕರ ಪಾಲಿಗೆ ಕೇಂದ್ರ ಸರ್ಕಾರವು ಅನ್ಯಾಯ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರೈಲ್ವೆ ಇಲಾಖೆ ಪ್ರತಿ ವರ್ಷ ಸರ್ಕಾರಕ್ಕೆ ಆದಾಯವನ್ನು ನೀಡುತ್ತಿದೆ. ಆದರೆ ಸರ್ಕಾರ ದೇಶಿ ಮತ್ತು ವಿದೇಶಿ ಕಂಪನಿಗಳಿಗೆ ಲಾಭ ಮಾಡಿಕೊಡಲು ರೈಲ್ವೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದಾಗಿ ಬಡವರಿಗೆ ರೈಲಿನಲ್ಲಿ ಪ್ರಯಾಣ ಮಾಡುವುದು ತುಂಬಾ ದುಬಾರಿಯಾಗಿದೆ. ಖಾಸಗಿ ರೈಲುಗಳ ಪ್ರಯಾಣ ದರವು ತುಂಬಾ ಹೆಚ್ಚಿದ್ದು, ಸಾಮಾನ್ಯ ನಾಗರಿಕರು ಪ್ರಯಾಣಿಸಲು ಸಾಧ್ಯವಿಲ್ಲ. ದೇಶದಲ್ಲಿ ಈಗಾಗಲೇ ಹಣದುಬ್ಬರದಿಂದಾಗಿ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ದೇಶದ ಹೆಚ್ಚಿನ ಜನಸಂಖ್ಯೆಯು ದಿನಕ್ಕೆ ಕೇವಲ ಒಂದುಹೊತ್ತಿನ ಊಟಕ್ಕೂ ಪರದಾಟುವ ಸ್ಥಿತಿ ನಿರ್ಮಾಣಗೊಂಡಿದೆ. ಖಾಸಗೀಕರಣವು ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕೂಡಲೇ ಹುದ್ದೆಗಳ ರದ್ಧತಿ ಮಾಡಬೇಕು ಎಂದು ಆಗ್ರಹಿಸಿದರು.
    ಮುಖಂಡರಾದ ಶಶಿಕುಮಾರ ಉಪ್ಪಾರ, ಸಂತೋಷ ಬರಡೋಲ, ಸಚೀನ ಪಾಟೀಲ, ಪಾಂಡು ಉಪ್ಪಾರ, ಶಿವಾನಂದ ಹೂಗಾರ, ಶಿವಾನಂದ ಪೂಜಾರಿ, ಅನುರಾಗ ಸಾಳುಂಕೆ ಇನ್ನಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts