More

    ಅಮಾನತು ಹಿಂಪಡೆಯುವ ತನಕ ಕಲಾಪ ಬಹಿಷ್ಕರಿಸಿದ ವಿಪಕ್ಷ

    ನವದೆಹಲಿ: ದುರ್ವರ್ತನೆ ತೋರಿದ 8 ಸದಸ್ಯರ ಅಮಾನತು ಆದೇಶ ವಾಪಸ್ ಪಡೆಯುವ ತನಕ ರಾಜ್ಯಸಭೆ ಕಲಾಪವನ್ನು ಬಹಿಷ್ಕರಿಸುವುದಾಗಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಇದೇ ವೇಳೆ ಅವರು, ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಹಣಕ್ಕೆ ಕೃಷಿ ಉತ್ಪನ್ನವನ್ನು ಖಾಸಗಿ ಕಂಪನಿಗಳು, ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ ಕೂಡ ಖರೀದಿಸಬಾರದು ಎಂದು ಮಸೂದೆ ಅಂಗೀಕರಿಸುವುದಕ್ಕೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

    ಮಂಗಳವಾರ ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಬಹುತೇಕರು, 8 ಸದಸ್ಯರ ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹಿಸಿದ್ದರು. ಸರ್ಕಾರ ಈಗ ಅಂಗೀಕರಿಸಿರುವ ಕೃಷಿ ಮಸೂದೆಗಳ ಜತೆಗೆ ಇನ್ನೊಂದು ಮಸೂದೆಯನ್ನೂ ಅಂಗೀಕರಿಸಬೇಕು. ಅದರಲ್ಲಿ ಸ್ವಾಮಿನಾಥನ್ ಫಾರ್ಮುಲಾ ಪ್ರಕಾರ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು. ಅದೇ ರೀತಿ, ಯಾವುದೇ ಕಂಪನಿ ಕೃಷಿ ಉತ್ಪನ್ನ ಖರೀದಿಸುವಾಗ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ಖರೀದಿಸಬಾರದು. ಅದನ್ನು ಖಾತರಿಗೊಳಿಸುವ ಕಾನೂನು ಜಾರಿಯಾಗಬೇಕು ಎಂಬುದು ವಿಪಕ್ಷ ಸದಸ್ಯರ ಆಗ್ರಹ.

    ಇದನ್ನೂ ಓದಿ: ನಿಮ್ಮ ವಸ್ತುಗಳು ಕಳೆದುಹೋಗಿವ್ಯಾ? ಇನ್ಮುಂದೆ ಮನೆಯಲ್ಲೇ ಕೂತು ಕಂಪ್ಲೇಟ್​ ಕೊಡ್ಬೋದು!

    ರಾಜ್ಯಸಭೆಯಲ್ಲಿ ಭಾನುವಾರ ಏನಾಗಿತ್ತೋ ಅದರ ಬಗ್ಗೆ ಖೇದವಿಲ್ಲ. ಖುಷಿ ಇದೆ. ಸದನ ಎನ್ನುವುದು ಒಂದು ಕುಟುಂಬ ಇದ್ದಂತೆ. ಅಲ್ಲಿ ಭಿನ್ನಮತಗಳೂ ಇರುತ್ತವೆ. ಕೋವಿಡ್ ಸೋಂಕು ಇನ್ನೆಷ್ಟು ಕಾಲ ಇರುವುದೋ ಗೊತ್ತಿಲ್ಲ. ನನ್ನ ಸದಸ್ಯತ್ವದ ಅವಧಿ ಇನ್ನು 5 ತಿಂಗಳಷ್ಟೇ ಇದೆ. ಬಹುಶಃ ಈ ಕಲಾಪ ನನ್ನ ಕೊನೆಯ ಕಲಾಪ ಆಗಿರಬಹುದು, ಭಾಷಣವೂ ಕೊನೆಯದೇ ಆಗಿರಬಹುದು. ಸದಸ್ಯರ ಅಮಾನತು ಆದೇಶ ಹಿಂಪಡೆಯುವ ತನಕ ಕಲಾಪದಲ್ಲಿ ಭಾಗವಹಿಸುವುದು ಸಾಧ್ಯವೇ ಇಲ್ಲ ಎಂದು ಆಜಾದ್ ಹೇಳಿದರು. (ಏಜೆನ್ಸೀಸ್)

    ಅಮಾನತು ಪ್ರಕರಣದಲ್ಲಿ ವಿಪಕ್ಷದಿಂದ ಕಲಾಪ ಬಹಿಷ್ಕಾರದ ಬೆದರಿಕೆ : ರಾಜ್ಯಸಭಾ ಡೆಪ್ಯುಟಿ ಚೇರ್ಮನ್​ ರಿಂದ ನಿರಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts