More

    ಪ್ರಜಾತಂತ್ರದ ಸೌಂದರ್ಯವಿದು- ಪ್ರತಿಭಟನಾನಿರತ ಸದಸ್ಯರ ಬಳಿಗೆ ರಾಜ್ಯಸಭೆ ಉಪಾಧ್ಯಕ್ಷ !: ಪಿಎಂ ಮೆಚ್ಚುಗೆ

    ನವದೆಹಲಿ: ರಾಜ್ಯಸಭೆಯ ಕಲಾಪ ನಡೆಯುತ್ತಿದ್ದ ವೇಳೆ ತನ್ನ ವಿರುದ್ಧ ಪ್ರತಿಭಟನೆಯ ಹೆಸರಿನಲ್ಲಿ ದುರ್ವರ್ತನೆ ತೋರಿ ಅಮಾನತುಗೊಂಡ ಸದಸ್ಯರ ಬಳಿಗೆ ಚಹಾ, ಲಘು ಉಪಾಹಾರ ಸಹಿತವಾಗಿ ಆಗಮಿಸಿ ಅಚ್ಚರಿ ಮೂಡಿಸಿದ್ರು ರಾಜ್ಯಸಭೆಯ ಡೆಪ್ಯುಟಿ ಚೇರ್​ಮನ್ ಹರಿವಂಶ್ ನಾರಾಯಣ್ ಸಿಂಗ್.

    ದುರ್ವರ್ತನೆ ತೋರಿದ್ದಕ್ಕೆ ಒಂದು ವಾರದ ಅಮಾನತು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಎಂಟು ಸದಸ್ಯರು ನಿನ್ನೆ ರಾತ್ರಿ ಇಡೀ ಸಂಸತ್ ಭವನ ಆವರಣದ ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತಿದ್ರು. ಹರಿವಂಶ ನಾರಾಯಣ್ ಸಿಂಗ್ ಅವರ ವಿರುದ್ಧವೇ ವಿಪಕ್ಷ ಸದಸ್ಯರು ಅವಿಶ್ವಾಸಗೊತ್ತುವಳಿಯನ್ನು ಮಂಡಿಸಿದ್ರು. ಇಷ್ಟೆಲ್ಲ ಆದರೂ, ಬಹಳ ವಿನಯಪೂರ್ವಕವಾಗಿ ಹರಿವಂಶ ನಾರಾಯಣ್ ಸಿಂಗ್ ಅವರು ಇಂದು ಬೆಳಗ್ಗೆ ಧರಣಿ ನಿರತ ಸದಸ್ಯರ ಕುಶಲೋಪರಿ ವಿಚಾರಿಸಲು ಆಗಮಿಸಿದ್ದರು.

    ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್‌ಗೆ ಇಂದು ಸಿಎಸ್‌ಕೆ ಸವಾಲು

    ಹರಿವಂಶ ನಾರಾಯಣ ಸಿಂಗ್ ಅವರ ಈ ಪ್ರಬುದ್ಧತೆಯ ನಡೆ ಬಹಳ ಪ್ರಶಂಸೆಗೆ ಒಳಗಾಗಿದೆ. ಪ್ರಜಾತಂತ್ರ ವ್ಯವಸ್ಥೆಯ ಸೌಂದರ್ಯವಿದು ಎಂಬ ಬಣ್ಣನೆಯೂ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಟ್ವೀಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. (ಏಜೆನ್ಸೀಸ್)

    ಅಮಾನತು ಕ್ರಮ ವಿರೋಧಿಸಿ ರಾತ್ರಿಯೂ ಧರಣಿ ಕುಳಿತ ರಾಜ್ಯಸಭೆಯ 8 ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts