More

    ಅಮಾನತು ಪ್ರಕರಣದಲ್ಲಿ ವಿಪಕ್ಷದಿಂದ ಕಲಾಪ ಬಹಿಷ್ಕಾರದ ಬೆದರಿಕೆ : ರಾಜ್ಯಸಭಾ ಡೆಪ್ಯುಟಿ ಚೇರ್ಮನ್​ ರಿಂದ ನಿರಶನ

    ನವದೆಹಲಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರದ ಸಂದರ್ಭದ ಘಟನಾವಳಿಗಳು ಮತ್ತೊಂದು ಹಂತ ತಲುಪಿದೆ. ಅಮಾನತು ಹಿಂಪಡೆಯಬೇಕು ಎಂದು ವಿಪಕ್ಷ ಸದಸ್ಯರು ಆಗ್ರಹಿಸುತ್ತಿದ್ದು, ಕಲಾಪ ಬಹಿಷ್ಕರಿಸುವ ಬೆದರಿಕೆ ಒಡ್ಡಿದ್ದಾರೆ. ಇದರ ಬೆನ್ನಿಗೇ, ಸದಸ್ಯರ ದುರ್ವರ್ತನೆ ಖಂಡಿಸಿ ರಾಜ್ಯಸಭೆಯ ಡೆಪ್ಯುಟಿ ಚೇರ್​ಮನ್ ಹರಿವಂಶ ನಾರಾಯಣ್ ಸಿಂಗ್ ಒಂದು ದಿನದ ನಿರಶನ ಪ್ರತಿಭಟನೆ ಘೋಷಿಸಿದ್ದಾರೆ.

    ಬೆಳಗ್ಗೆ ಚಹಾ ಮತ್ತು ಲಘು ಉಪಾಹಾರದೊಂದಿಗೆ ಅಮಾನತುಗೊಂಡು ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರ ಬಳಿಗೆ ಹೋಗಿ ಉತ್ತಮ ನಡವಳಿಕೆ ತೋರಿದ್ದ ಉಪಾಧ್ಯಕ್ಷ ಹರಿವಂಶ ನಾರಾಯಣ್ ಸಿಂಗ್, ಇದೀಗ ಕಠಿಣ ನಿಲುವು ತಾಳಿದ್ದಾರೆ. ಸದಸ್ಯರ ದುರ್ವರ್ತನೆ ವಿಚಾರವಾಗಿ ರಾಜ್ಯಸಭೆ ಚೇರ್​ಮನ್​ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರವನ್ನೂ ಹರಿವಂಶ ನಾರಾಯಣ ಸಿಂಗ್ ಅವರು ಬರೆದಿದ್ದಾರೆ.

    ಇದನ್ನೂ ಓದಿ: ನಿಮ್ಮ ವಸ್ತುಗಳು ಕಳೆದುಹೋಗಿವ್ಯಾ? ಇನ್ಮುಂದೆ ಮನೆಯಲ್ಲೇ ಕೂತು ಕಂಪ್ಲೇಟ್​ ಕೊಡ್ಬೋದು!

    ಇದರಲ್ಲಿ ಅವರು, ಸೆಪ್ಟೆಂಬರ್ 20ರಂದು ರಾಜ್ಯಸಭಾಧ್ಯಕ್ಷರ ಪೀಠದಲ್ಲಿದ್ದಾಗ ಸದಸ್ಯರು ತೋರಿದ ದುರ್ವರ್ತನೆಯಿಂದಾಗಿ ಸದನ ಮತ್ತು ಪೀಠದ ಘನತೆಗೆ ಊಹಿಸಲಾಗದ ಧಕ್ಕೆಯಾಗಿದೆ. ಅದು ನನ್ನ ಎದುರು ನಡೆದಿರುವಂಥದ್ದು. ನನಗೆ ಅವಮಾನವಾಗುವಂತೆ ನಡೆದುಕೊಂಡ ಸದಸ್ಯರ ವರ್ತನೆಯನ್ನು ಸರಿಯಾದುದಲ್ಲ. ಸ್ವಶುದ್ಧೀಕರಣಕ್ಕಾಗಿ ತಾನು ನಾಳೆಯವರೆಗೆ ನಿರಶನ ಕೈಗೊಳ್ಳುತ್ತೇನೆ ಎಂದು ವಿವರಿಸಿದ್ದಾರೆ. (ಏಜೆನ್ಸೀಸ್)

    ದೆಹಲಿ ಹಿಂಸಾಚಾರ ಅನುಷ್ಠಾನಕ್ಕಾಗಿ 1.61 ಕೋಟಿ ರೂಪಾಯಿ ಐವರ ಖಾತೆಗೆ ಜಮೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts