More

    ಅಮಾನತು ಕ್ರಮ ವಿರೋಧಿಸಿ ರಾತ್ರಿಯೂ ಧರಣಿ ಕುಳಿತ ರಾಜ್ಯಸಭೆಯ 8 ಸದಸ್ಯರು

    ನವದೆಹಲಿ: ದುರ್ವರ್ತನೆ ತೋರಿದ ರಾಜ್ಯಸಭೆಯ ಎಂಟು ಸದಸ್ಯರನ್ನು ನಿನ್ನೆ ರಾಜ್ಯಸಭೆಯ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಿದ್ದರು. ಆದಾಗ್ಯು, ಸದನದಿಂದ ಹೊರನಡೆಯದೇ ಒಳಗೇ ನಿಂತು ಗದ್ದಲ ಎಬ್ಬಿಸಿದ 8 ಸದಸ್ಯರು ಬಳಿಕ ನಿನ್ನೆ ರಾತ್ರಿಯೂ ಸದನದ ಹೊರಗೆ ಧರಣಿ ಮುಂದುವರಿಸಿದ್ದರು.

    ಪ್ರತಿಭಟನಾ ನಿರತ ಸದಸ್ಯರಿಗೆ ಬೆಂಬಲ ಸೂಚಿಸುವ ಸಲುವಾಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಜೆಡಿಎಸ್ ವರಿಷ್ಠ ಎಚ್​.ಡಿ.ದೇವೇಗೌಡ, ಸಮಾಜವಾದಿ ಪಕ್ಷದ ಜಯಾ ಬಚ್ಚನ್​, ಕಾಂಗ್ರೆಸ್​ನ ಅಹ್ಮದ್ ಪಟೇಲ್, ಎನ್​ಸಿಪಿಯ ಪ್ರಫುಲ್ಲ ಪಟೇಲ್​ ಕೂಡ ಜತೆಗೂಡಿದ್ದರು. ಇನ್ನೋರ್ವ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಸುಮಾರು ನಾಲ್ಕು ಗಂಟೆ ಕಾಲ ಪ್ರತಿಭಟನಾನಿರತರೊಂದಿಗೆ ತಾವೂ ಕುಳಿತಿದ್ದರು.

    ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್‌ಗೆ ಇಂದು ಸಿಎಸ್‌ಕೆ ಸವಾಲು

    ಪ್ರತಿಭಟನಾನಿರತ ಸದಸ್ಯರು ರಾತ್ರಿ ಇಡೀ ದೇಶಭಕ್ತಿ ಗೀತೆ ಹೇಳುತ್ತ, ಘೋಷಣೆ ಕೂಗುತ್ತಿದ್ದುದಾಗಿ ಅಮಾನತುಗೊಂಡಿರುವ ಸದಸ್ಯರೊಬ್ಬರು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೊಳ್ಳೆಬತ್ತಿ, ಆಂಬುಲೆನ್ಸ್ ಸೇವೆ ಲಭ್ಯವಿತ್ತು. (ಏಜೆನ್ಸೀಸ್)

    ಡೆರೆಕ್​ ಓ ಬ್ರಿಯಾನ್, ಸಂಜಯ್ ಸಿಂಗ್ ಸೇರಿ 8 ರಾಜ್ಯಸಭಾ ಸದಸ್ಯರ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts