More

    ವಿಪಕ್ಷದವರಿಗೆ ಶಾಕ್​ ಕೊಟ್ರು ಸಚಿವ ಗಿರಿರಾಜ್ ಸಿಂಗ್ : ರಾಜ್ಯಸಭೆ ವಿಪಕ್ಷ ಸದಸ್ಯರ ದುರ್ವರ್ತನೆಗೆ ಬಿಹಾರ ಟಚ್ !

    ನವದೆಹಲಿ: ಕೃಷಿ ಮಸೂದೆ ಅಂಗೀಕರಿಸುವ ವೇಳೆ ಭಾನುವಾರ ರಾಜ್ಯಸಭೆಯಲ್ಲಿ ವಿಪಕ್ಷದ ಕೆಲವು ಸದಸ್ಯರು ತೋರಿದ ದುರ್ವರ್ತನೆ ಇದೀಗ ವ್ಯಾಪಕವಾಗಿ ಸುದ್ದಿಯಲ್ಲಿದೆ. ಅಮಾನತು ಹಿಂಪಡೆಯುವಂತೆ ಆಗ್ರಹಿಸಿ 8 ಸದಸ್ಯರು ಪ್ರತಿಭಟನೆ ಮಾಡುತ್ತಿದ್ದರೆ, ಅವರಿಗೆ ಬೆಂಬಲವಾಗಿ ವಿಪಕ್ಷ ಸದಸ್ಯರು ಕಲಾಪ ಬಹಿಷ್ಕರಿಸಿದ್ದಾರೆ. ಇದರ ಬೆನ್ನಿಗೆ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಶಾಕಿಂಗ್ ಹೇಳಿಕೆ ನೀಡಿ ದೇಶದ ಗಮನಸೆಳೆದಿದ್ದಾರೆ!

    “ರಾಜ್ಯಸಭೆಯಲ್ಲಿ ಭಾನುವಾರ ಕಲಾಪದ ವೇಳೆ ನಡೆದ ದಾಳಿ ಬಿಹಾರದ ಪುತ್ರನ ಮೇಲಾದುದಲ್ಲ, ಅದು ರಾಜ್ಯಸಭೆಯ ಡೆಪ್ಯುಟಿ ಚೇರ್​ಮನ್ ವಿರುದ್ಧದ ದಾಳಿ. ಸಾಂವಿಧಾನಿಕ ಚೌಕಟ್ಟಿನ ಮೇಲೆ ನೆಲೆಗೊಂಡಿರುವ ಪ್ರಜಾಪ್ರಭುತ್ವದ ಮೇಲೆ ನಡೆದ ಹಲ್ಲೆ ಅದು. ಅವರು ರಾಜ್ಯಸಭೆಯ ಸದಸ್ಯರಾಗಿದ್ದಾಗ್ಯು ಸದನದ ನಿಯಮ ಪುಸ್ತಕವನ್ನೇ ಹರಿದು ಅಧ್ಯಕ್ಷರ ಪೀಠಕ್ಕೆ ಎಸೆದಿದ್ದಾರೆ. ಒಂದೊಮ್ಮೆ ಅಲ್ಲಿ ಮಾರ್ಷಲ್ಸ್ ಇಲ್ಲದೇ ಹೋಗಿದ್ದರೆ ಅವರು ಹರಿವಂಶಜೀ ಅವರನ್ನು ಕೊಂದೇ ಬಿಡುತ್ತಿದ್ದರು. ಅವರು ಸಾಯಬೇಕಾಗಿತ್ತು” ಎಂದು ಸಚಿವ ಗಿರಿರಾಜ್ ಸಿಂಗ್ ಎಎನ್​ಐಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಅಮಾನತು ಪ್ರಕರಣದಲ್ಲಿ ವಿಪಕ್ಷದಿಂದ ಕಲಾಪ ಬಹಿಷ್ಕಾರದ ಬೆದರಿಕೆ : ರಾಜ್ಯಸಭಾ ಡೆಪ್ಯುಟಿ ಚೇರ್ಮನ್​ ರಿಂದ ನಿರಶನ

    ಹರಿವಂಶಜೀ ಅವರು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಅನುಯಾಯಿ. ಚಂದ್ರಶೇಖರ ಅವರೊಂದಿಗೂ ಕೆಲಸ ಮಾಡಿದ್ದಾರೆ. ಪತ್ರಕರ್ತರಾಗಿ ಕೆಲಸ ಮಾಡಿದವರು. ರಾಜ್ಯಸಭೆಗೆ ಸದಸ್ಯರಾಗಿ ಬಂದ ಬಳಿಕ, ಉಪಾಧ್ಯಕ್ಷರಾದರು. ದುರ್ವರ್ತನೆ ತೋರಿದವರು ಕ್ಷಮೆಯಾಚಿಸದೇ ಇದ್ದರೆ, ಬಿಹಾರದ ಜನತೆ ಖಚಿತವಾಗಿ ಸೇಡು ತೀರಿಸಿಕೊಳ್ತಾರೆ.  ಈ ಜನರೆಲ್ಲ ನಗರ ನಕ್ಸಲರ ಹೊಸ ಅವತಾರ. ನಕ್ಸಲರೇನು ಮಾಡ್ತಾರೆ? ಅವರು ಜನರನ್ನು ಕೊಲ್ತಾರೆ ಮತ್ತು ಬಡವರ ಕಲ್ಯಾಣ, ಅಭಿವೃದ್ಧಿ ಬಗ್ಗೆ ಮಾತನಾಡ್ತಾರೆ. ಯಾವ ಪ್ರಜಾಪ್ರಭುತ್ವದಲ್ಲಿ ಇಂತಹ ಕೃತ್ಯ ನಡೆಯುತ್ತದೆ. ದೇಶ ಅವರನ್ನು ಕ್ಷಮಿಸಲಾರದು ಎಂದು ಅವರು ಹೇಳಿದರು. (ಏಜೆನ್ಸೀಸ್)

    ಅಮಾನತು ಹಿಂಪಡೆಯುವ ತನಕ ಕಲಾಪ ಬಹಿಷ್ಕರಿಸಿದ ವಿಪಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts