More

    ಪ್ರೊಟೊಕಾಲ್​ ಪ್ರಕಾರ ನನ್ನ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇರಬೇಕಿತ್ತು: ಸಿದ್ಧರಾಮಯ್ಯ

    ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಮಾಜಿ ಪ್ರಧಾನಿ ದೇವೇಗೌಡರನ್ನು ಹಿಂದಿನ ದಿನ ಸಂಜೆ ಆಹ್ವಾನಿಸಿ ಶಿಷ್ಟಾಚಾರ ಉಲ್ಲಂಘಿಸಿದ್ದನ್ನು ಜೆಡಿಎಸ್​ ವಿರೋಧಿಸಿತ್ತು.

    ಈಗ ಆಹ್ವಾನ ಪತ್ರಿಕೆಯಲ್ಲಿ ಪ್ರತಿಪಕ್ಷ ನಾಯಕರ ಹೆಸರು ಇಲ್ಲದೇ ಇದ್ದ ಬಗ್ಗೆ ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾನೊಬ್ಬ ವಿಧಾನಸಭೆ ವಿಪಕ್ಷ ನಾಯಕ. ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಸಿಎಂ, ಸ್ಪೀಕರ್, ರಾಜ್ಯಪಾಲರ ಜತೆಗೆ ನನ್ನ ಹೆಸರು ಬರಬೇಕಿತ್ತು’ ಎಂದು ಸಿದ್ಧರಾಮಯ್ಯ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಮುಖ್ಯಮಂತ್ರಿ ತಮಗೆ ಕರೆ ಮಾಡಿದ್ದ ವಿಚಾರದ ಬಗ್ಗೆಯೂ ಸಿದ್ಧರಾಮಯ್ಯ ಮಾತನಾಡಿದ್ದು ‘ಹಿಂದಿನ ಸಂಜೆ ಏಳು ಗಂಟೆ ಹೊತ್ತಿಗೆ ಮುಖ್ಯಮಂತ್ರಿ ಕರೆ ಮಾಡಿದ್ರು. ಆಗ ನಾನು ಆಹ್ವಾನ ಪತ್ರಿಕೆಯಲ್ಲಿ ಹೆಸರೇ ಇಲ್ಲ ಎಂದೆ. ಆದರೂ ಹೋಗ್ತಿದ್ದೆ. ಬೇರೆ ಮೀಟಿಂಗ್ ಇರುವ ಕಾರಣ ಬರಲು ಆಗುವುದಿಲ್ಲ ಅಂತ ಹೇಳಿದ್ದೆ’ ಎಂದು ಮಾಹಿತಿ ನೀಡಿದರು.

    ‘ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಿದ್ದೇ ನಮ್ಮ‌ ಕಾಲದಲ್ಲಿ. ನಮ್ಮ ಸರ್ಕಾರ ಬಂದಾಗ ಕೇಂದ್ರದಿಂದ ಅನುಮೋದನೆ ಪಡೆದು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಿದ್ದೆವು. ಕೆಂಪೇಗೌಡರ ಜಯಂತಿಯನ್ನು ಪ್ರಾರಂಭಿಸಿದ್ದು ನಾನೇ. ಆದರೂ ಈ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ನನ್ನ ಹೆಸರನ್ನು ಒಮ್ಮೆಯೂ ಉಲ್ಲೇಖಿಸಿಲ್ಲ’ ಎಂದು ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದರು.

    ಲ್ಯಾಂಡ್ ಜಿಹಾದ್ ಮಾಫಿಯಾಕ್ಕೆ ಬಲಿಯಾದರೇ ಡಾ. ಕೃಷ್ಣಮೂರ್ತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts