More

    150 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕಾಗಿ ಮಿಡಿದ ಕನ್ನಡ ನಿಘಂಟು ತಜ್ಞ ಫರ್ಡಿನೆಂಡ್ ಕಿಟೆಲ್ ಕುಟುಂಬ!

    ಧಾರವಾಡ: ಕನ್ನಡ ನಿಘಂಟು (Kannada dictionary) ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದ ರೇವರೆಂಡ್ ಫರ್ಡಿನೆಂಡ್ ಕಿಟೆಲ್ (Reverend Ferdinand Kittel) ಅವರ ಕುಟುಂಬ 150 ವರ್ಷಗಳ ಬಳಿಕ ಮತ್ತೆ ಕರ್ನಾಟಕ (Karnataka)ಕ್ಕೆ ಆಗಮಿಸಿದೆ.

    ಸುದೀರ್ಘ ಅವಧಿಯ ಬಳಿಕ ಜರ್ಮನ್​ನಿಂದ ಕರುನಾಡಿಗೆ ಕನ್ನಡ ನಿಘಂಟು ತಜ್ಞ ಕಿಟೆಲ್ ಅವರ ಕುಟುಂಬ (Kittel Family) ಆಗಮಿಸಿದೆ. ಕಿಟೆಲ್​ ಅವರ ಮರಿಮೊಮ್ಮಗಳಾದ ಅಲ್ಮುತ್ ಬರ್ಬೋರ್ ಎಲಿನೋರ್ ಮಯರ್ ಮತ್ತು ಗಿರಿಮೊಮ್ಮಗ ಈವ್ಸ್ ಪ್ಯಾಟ್ರಿಕ್, ಸ್ನೇಹಿತ ಜಾನ್ ಫೆಡ್ರಿಕ್ ಜೊತೆ ಧಾರವಾಡಕ್ಕೆ ಭೇಟಿ ನೀಡಿದ್ದು, ಕಿಟೆಲ್ ಹೆಸರಿನ ಕಾಲೇಜ್ ಮತ್ತು ಕಿಟೆಲ್ ತಂಗಿದ್ದ ಸ್ಥಳಗಳನ್ನು ವೀಕ್ಷಣೆ ಮಾಡಿದ್ದಾರೆ.

    ಅಂದಹಾಗೆ 19ನೇ ಶತಮಾನದಲ್ಲಿ ಉತ್ತರ ಜರ್ಮನ್‌ದಿಂದ ಧಾರವಾಡಕ್ಕೆ ಬಂದಿದ್ದ ಫರ್ಡಿನೆಂಡ್ ಕಿಟೆಲ್ (Ferdinand Kittel) ಅವರು ಕನ್ನಡ ನಿಘಂಟು (Kannada dictionary) ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇಂದಿಗೂ ಕಿಟೆಲ್ ಮನೆಯಲ್ಲಿದೆಯಂತೆ ಕನ್ನಡ ಹಸ್ತಪ್ರತಿಗಳು. ಇದೀಗ ಅವರ ಕುಟುಂಬ ಧಾರವಾಡಕ್ಕೆ ಭೇಟಿ ನೀಡಿರುವುದು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಧಾರವಾಡ (Dharwad)ದ ಜನರು ಕಿಟೆಲ್​ ಕುಟುಂಬಸ್ಥರಿಗೆ ಸನ್ಮಾನ ಮಾಡಿ, ಅವರೊಂದಿಗೆ ಸಂವಾದ ನಡೆಸಿದ್ದಾರೆ. ನಿನ್ನೆ ಕನಕದಾಸ ಜಯಂತಿ (Kanakadasa Jayanthi) ಹಿನ್ನೆಲೆಯಲ್ಲಿ ಆಚರಣೆ ಸಹ ಮಾಡಿದ್ದಾರೆ.

    ಕಿಟೆಲ್‌ರ ಕೊನೇ ದಿನಗಳ ಬಗ್ಗೆ ಅನೇಕ ಮಾಹಿತಿಗಳನ್ನು ಕುಟುಂಬದ ಸದಸ್ಯರು ಹಂಚಿಕೊಂಡಿದ್ದಾರೆ. ಈಗ ಕನ್ನಡ ಕಲಿಯೋಕೆ ಗಿರಿ ಮೊಮ್ಮಗ ಈವ್ಸ್ ನಿರ್ಧಾರ ಮಾಡಿದ್ದಾರೆ. ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಎಂಬುದನ್ನು ಕನ್ನಡದಲ್ಲಿ ಬರೆಯೋಕೆ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲದೆ, ಹಂತಹಂತವಾಗಿ ಕನ್ನಡ ಕಲಿಯೋದಕ್ಕೆ ಉತ್ಸುಕರಾಗಿದ್ದಾರೆ. ಜರ್ಮನ್‌ನಿಂದ ಆಗಾಗ ಧಾರವಾಡಕ್ಕೆ ಬರುವುದಾಗಿ ವಾಗ್ದಾನ ನೀಡಿದ್ದಾರೆ.

    ಕಿಟೆಲ್‌ರ ಕೆಲವೊಂದು ಮಹತ್ವದ ವಸ್ತುಗಳನ್ನು ಮ್ಯೂಸಿಯಂಗಾಗಿ ಕೊಡಲು ನಿರ್ಧಾರ ಮಾಡಿದೆ. ಕಿಟೆಲ್‌ರ 200ನೇ ಜನ್ಮದಿನಾಚರಣೆ ಧಾರವಾಡದಲ್ಲೇ ಆಯೋಜಿಸವುದಾಗಿ ಪ್ರಕಟಿಸಿದ್ದಾರೆ. ಜರ್ಮನ್‌ಗೆ ವಾಪಸ್ ಹೋದ ಬಳಿಕವೂ ಕನ್ನಡದ್ದ ಧ್ಯಾನ ಮಾಡುತ್ತಿದ್ದರಂತೆ ಕಿಟೆಲ್​. 70 ಸಾವಿರ ಪದಗಳ ನಿಘಂಟು ಹೊರತಂದಿದ್ದ ಕಿಟೆಲ್, ತಮ್ಮ ಕೊನೆಯುಸಿರಿನವರೆಗೂ ಕನ್ನಡದ್ದೇ ಧ್ಯಾನ ಮಾಡಿದ್ದರು. “ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೆಂಜ್” (A grammar of the kannada language) ಎಂಬ ಕೃತಿ ಪ್ರಕಟಿಸಿ ಕಿಟೆಲ್​ ಅಸುನೀಗಿದ್ದರು. ಅಂದಿನಿಂದ ಒಮ್ಮೆಯೂ ಕಿಟೆಲ್​ ಕುಡುಂಬ ಕರ್ನಾಟಕಕ್ಕೆ ಬಂದಿರಲಿಲ್ಲ. ಈಗ ಧಾರವಾಡಕ್ಕೆ ತಮ್ಮ ಪೂರ್ವಜರ ಜಾಡು ಹಿಡಿದು ಆಗಮಿಸಿದ್ದಾರೆ. ಕಿಟೆಲ್‌ರ ಆಶಯದಂತೆ ಕನ್ನಡದ ಜೊತೆಗಿರಲು ಕಿಟೆಲ್ ಕುಟುಂಬ ನಿರ್ಧಾರ ಮಾಡಿದೆ. (ದಿಗ್ವಿಜಯ ನ್ಯೂಸ್​)

    ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲಪಕ್ಷಕ್ಕೆ ಸಿದ್ಧಿಸಿರುವ ಕಲೆ: ಬಿಜೆಪಿ ವಿರುದ್ಧ ಜೆಡಿಎಸ್​ ವಾಗ್ದಾಳಿ

    ಟಿಪ್ಪು ಸುಲ್ತಾನ್ ದೇಶದ್ರೋಹಕ್ಕೆ ಹೆಸರುವಾಸಿ: ಶಾಸಕ ಈಶ್ವರಪ್ಪ

    ಥಾಯ್ಲೆಂಡ್ ಪ್ರವಾಸದಲ್ಲಿ ಮೇಘನಾ; ಸದ್ದು ಮಾಡುತ್ತಿವೆ ಹಾಟ್ ಫೋಟೋಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts