More

    ‘ಛೋಟಾ ತೆಲಗಿ’ ಎಂಬ ಈ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ…

    ಬೆಂಗಳೂರು: ನಕಲಿ ಛಾಪಾ ಕಾಗದ ದಂಧೆಯಲ್ಲಿ ನಿರತನಾಗಿದ್ದ ಛೋಟಾ ತೆಲಗಿ ಅಲಿಯಾಸ್ ಹಸೈನ್ ಮೋದಿ ಅಲಿಯಾಸ್ ಬಾಬು ಪೊಲೀಸರ ಬಲೆಗೆ ಹೇಗೆ ಬಿದ್ದ ಎಂಬುದು ರೋಚಕವಾಗಿದೆ. ಕರೀಂಲಾಲಾ ತೆಲಗಿಯ ಹಗರಣದ ನಂತರ ಹಲವು ವರ್ಷಗಳ ಹಿಂದೆಯೇ ಸರ್ಕಾರ ಛಾಪಾ ಕಾಗದ ಮುದ್ರಣವನ್ನು ನಿಷೇಧಿಸಿದ್ದರೂ ಈ ಛೋಟಾ ತೆಲಗಿ ಗ್ಯಾಂಗು ನಕಲಿ ಛಾಪಾ ಕಾಗದ ಮುದ್ರಿಸಿ ಚಲಾವಣೆ ಮಾಡುತ್ತಿತ್ತು!

    ಅಕ್ರಮವಾಗಿ ಬೇರೆಯವರ ಆಸ್ತಿ ಲಪಟಾಯಿಸುವವರು, ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುವ ಆಸ್ತಿಗಳಿಗೆ ಮೈಸೂರು ಮಹಾರಾಜರ ಕಾಲದ ಛಾಪಾಕಾಗದಗಳನ್ನು ಈ ಗ್ಯಾಂಗಿನವರು ಬಳಕೆ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಕಂಡು ಬಂದಿದೆ. ಹಲವು ವರ್ಷಗಳ ಹಿಂದಿನ ನಾಲ್ಕಾಣೆ, ಎಂಟಾಣೆಯ ನಕಲಿ ಛಾಪಾ ಕಾಗದಗಳೂ ಆರೋಪಿಗಳ ಬಳಿಯಿರುವುದನ್ನು ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

    ಇದನ್ನೂ ಓದಿ:  ನಾಗರಹೊಳೆಯಲ್ಲಿ ಏಳು ತಿಂಗಳಿಂದ ಸ್ಥಗಿತಗೊಂಡಿದ್ದ ಸಫಾರಿ ಪುನರಾರಂಭ

    ಎಸ್‌ಪಿ ರಸ್ತೆಯ ಅಮರ್ ರೇಡಿಯೋ ಅಂಗಡಿ ಬಳಿ ನಿಷೇಧಗೊಂಡಿರುವ ಛಾಪಾ ಕಾಗದಗಳನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಅಪರಿಚಿತರೊಬ್ಬರು ಫೋನ್ ಮಾಡಿ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಸೈನ್ ಮೋದಿ ಹಾಗೂ ಆತನ ಜತೆ ಸಹಕರಿಸುತ್ತಿದ್ದ ಹರೀಶ್ ಎಂಬ ಟೈಪಿಸ್ಟ್‌ನನ್ನು ವಶಕ್ಕೆ ಪಡೆದರು. ಅವರ ಬಳಿಯಿದ್ದ ನಕಲಿ ಛಾಪಾಕಾಗದಗಳನ್ನು ಜಪ್ತಿ ಮಾಡಿದರು. ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಹಸೈನ್ ಮೋದಿ ಬಾಬು ವಿಚಾರಣೆ ವೇಳೆ ಮತ್ತಷ್ಟು ಕುತೂಹಲಕರ ಮಾಹಿತಿ ಬಾಯ್ಬಿಟ್ಟ. ಅದನ್ನು ಆಧರಿಸಿ ಆತನಿಂದ ನಕಲಿ ಛಾಪಾ ಕಾಗದಗಳನ್ನು ಖರೀದಿ ಮಾಡಿ, ಮಾರಾಟ ಮಾಡುತ್ತಿದ್ದ ಕಂದಾಯ ಭವನದ ಬಳಿ ಸ್ಟಾಂಪ್ ವೆಂಡರ್ ಮತ್ತು ಟೈಪಿಂಗ್ ಕೆಲಸ ಮಾಡುತ್ತಿದ್ದ ಶವರ್ ಸೀಮಾ ಮತ್ತು ನಜ್ಮಾ ಪಾತಿಮಾ ಎಂಬ ಮಹಿಳೆಯರನ್ನು ಬಂಧಿಸಲಾಯಿತು. ಅವರಿಂದಲೂ ನಕಲಿ ಛಾಪಾ ಕಾಗದಗಳು, ನಕಲಿ ಹಕ್ಕು ಪತ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಅವುಗಳ ಮೌಲ್ಯ 2.71 ಕೋಟಿ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ವೇದನೆಯೊಂದಿಗೆ ಕುಸಿದ ಚಿರಾಗ್​ ಪಾಸ್ವಾನ್​

    ಆರೋಪಿಗಳು ಸೀಲ್, ಸ್ಟಾಂಪ್‌ಗಳನ್ನೂ ನಕಲಿ ಮಾಡುತ್ತಿದ್ದರು. ಮೈಸೂರು ಮಹಾರಾಜರ ಕಾಲದ ಛಾಪಾ ಕಾಗದಗಳನ್ನೂ ನಕಲಿ ಮಾಡುತ್ತಿದ್ದ ವಿಚಾರ ಮೆಲ್ನೋಟಕ್ಕೆ ಕಂಡು ಬಂದಿದೆ. ಈ ಎಲ್ಲ ಕರಾಳ ದಂದೆಗೆ ಮೂಲವಾಗಿ, ಬೆಂಗಳೂರಿನ ಎಸ್‌ಪಿ ರಸ್ತೆಯಲ್ಲಿ ನಕಲಿ ಸ್ಟಾಂಪ್ ಪೇಪರ್ ಮುದ್ರಿಸುತ್ತಿದ್ದ ಸಂಗತಿ ಬಹಿರಂಗಗೊಂಡಿದೆ. ಹಸೈನ್ ಮೋದಿ ಮನೆಯಲ್ಲಿ ಪ್ರಾಂಕಿಂಗ್ ಅಥವಾ ಎಂಬೋಸಿಂಗ್ ಮಾಡಿರುವ ದಾಖಲೆ, ದಿನಾಂಕ ನಮೂದಿಸಿರುವ ಸೀಲು, ತಾಲ್ಲೂಕು ಉಪ ಖಜಾನೆ ಸೀಲು, ಶಿವಾಜಿನಗರ, ಕೆಂಗೇರಿ, ಬೊಮ್ಮನಹಳ್ಳಿ ಹಿರಿಯ ಉಪ ನೋಂದಣಾಧಿಕಾರಿ ಕಚೇರಿ ಸೀಲುಗಳು, ಮತ್ತು ಒಂದು ಇಂಕ್ ಪ್ಯಾಡ್ ಸಿಕ್ಕಿದೆ. ಛಾಪಾ ಕಾಗದಗಳ ಇಮೇಜನ್ನು ಸೇವ್ ಮಾಡಿ ಇಟ್ಟಿದ್ದ ಕಂಪ್ಯೂಟರ್, ಪ್ರಿಂಟ್ ಮಾಡಲು ಉಪಯೋಗಿಸುತ್ತಿದ್ದ ಕಲರ್ ಪ್ರಿಂಟರೂ ಸಿಕ್ಕಿದೆ.

    ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಛೋಟಾ ತೆಲಗಿ! ಹೇಗಿತ್ತು ನೋಡಿ ಈತನ ನಕಲಿ ಛಾಪಾ ಕಾಗದ ದಂಧೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts