More

    ಬಹರೇನ್ ಕನ್ನಡ ಭವನದ ಮೊಗಸಾಲೆ ಉದ್ಘಾಟನೆ

    ಬೆಂಗಳೂರು: ವಿದೇಶದಲ್ಲಿನ ಮೊತ್ತಮೊದಲ ಕನ್ನಡ ಭವನ ಎಂಬ ಹೆಮ್ಮೆಗೆ ಪಾತ್ರವಾಗಿರುವ ಬಹರೇನ್ ಕನ್ನಡ ಭವನದಲ್ಲಿ ಹೊಸದಾಗಿ ನಿರ್ಮಿಸಿರುವ ಮೊಗಸಾಲೆಯ ಉದ್ಘಾಟನೆ ನೆರವೇರಿತು.
    ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ‘ರೊನಾಲ್ಡ್ ಕೊಲಾಸೊ ಮೊಗಸಾಲೆ’ಯ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ಕನ್ನಡದ ಕಂಪು ಬೀರುತ್ತಿರುವ ಬಹರೇನ್ ಕನ್ನಡ ಭವನಕ್ಕೆ ಈ ಮೊಗಸಾಲೆ ಸೇರ್ಪಡೆಯಾಗಿರುವುದು ಖುಷಿಯ ವಿಚಾರ. ಇದರಿಂದ ಭವನದ ಕನ್ನಡಪರ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲವಾಗಲಿ ಎಂದು ಹಾರೈಸಿದರು.
    ಬಹರೇನ್ ಕನ್ನಡ ಭವನ ನಿರ್ಮಾಣಕ್ಕೆ ಡಾ. ರೊನಾಲ್ಡ್ ಕೊಲಾಸೊ ದೊಡ್ಡಮೊತ್ತದ ಕೊಡುಗೆ ನೀಡಿರುವುದನ್ನು ಗೌರವಿಸಿ ಅಲ್ಲಿನ ಮೊಗಸಾಲೆಗೆ ಅವರ ಹೆಸರನ್ನು ಇರಿಸಲಾಗಿದೆ.
    ಇದೇ ಸಂದರ್ಭದಲ್ಲಿ, ಕನ್ನಡ ಸಂಘ ಬಹರೇನ್ ಹೊಸ ಆಡಳಿತ ಮಂಡಳಿಯ ಪದಗ್ರಹಣ ಸಹ ನಡೆಯಿತು. ಈ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
    ಬಹರೇನ್‌ನಲ್ಲಿನ ಭಾರತೀಯ ರಾಯಭಾರಿ ವಿನೋದ್ ಕೆ. ಜೇಕಬ್, ಶಾಸಕ ರವಿಕುಮಾರ್ ಗೌಡ, ಎಐಸಿಸಿ ಕಾರ್ಯದರ್ಶಿ ಡಾ.ಆರತಿ ಕೃಷ್ಣ,, ಉದ್ಯಮಿ ಹಾಗೂ ಸಮಾಜ ಸೇವಕ ಡಾ. ರೊನಾಲ್ಡ್ ಕೊಲಾಸೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts