More

    ಇದು ವಿದೇಶದಲ್ಲಿನ ಪ್ರಪ್ರಥಮ ಸ್ವಂತ ಕನ್ನಡ ಭವನ; 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ..

    ಮನಾಮ: ಕನ್ನಡ ಭವನ ಕರ್ನಾಟಕದಲ್ಲಷ್ಟೇ ಅಲ್ಲ, ಭಾರತದ ಹೊರಗೂ ಇದೆ. ಅಂಥದ್ದೊಂದು ವಿಶೇಷವಾದ ಕನ್ನಡ ಭವನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಡಿಯೋ ಸಂದೇಶದ ಮೂಲಕ ಉದ್ಘಾಟಿಸಿದ್ದಾರೆ. ಅಂದಹಾಗೆ ಈ ಕನ್ನಡ ಭವನ ನಿರ್ಮಾಣಗೊಂಡಿರುವುದು ಬಹರೇನ್​ನಲ್ಲಿ. ಇಲ್ಲಿ ನೆಲೆಸಿರುವ ಕನ್ನಡಿಗರು ಬರೋಬ್ಬರಿ 12 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದು, ವಿದೇಶದಲ್ಲಿ ನಿರ್ಮಾಣಗೊಂಡ ಪ್ರಪ್ರಥಮ ಸ್ವಂತ ಕನ್ನಡ ಭವನ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

    ಬಹರೇನ್ ಕನ್ನಡ ಸಂಘವು ಕನ್ನಡಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಕನ್ನಡದ ಬೆಳವಣಿಗೆಗೆ ದುಡಿಯುತ್ತಿರುವ ಈ ಸಂಸ್ಥೆ ಮುಂದೆಯೂ ಅನೇಕ ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಹರೇನ್​ ಕನ್ನಡ ಸಂಘ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದನ್ನೂ ಸ್ಮರಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

    ಮುಖ್ಯಮಂತ್ರಿಯವರು ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಈ ಕನ್ನಡ ಭವನದ ಉದ್ಘಾಟನೆಯಲ್ಲಿ ಪರೋಕ್ಷವಾಗಿ ಪಾಲ್ಗೊಂಡಿದ್ದಾರೆ. ಬಿಎಸ್​ವೈ ಕೂಡ ವಿಡಿಯೋ ಸಂದೇಶದ ಮೂಲಕ ಶುಭ ಹಾರೈಸಿದ್ದಲ್ಲದೆ, ಉದ್ಘಾಟನೆಯಲ್ಲಿ ಭಾಗವಹಿಸುವ ಬಯಕೆ ಇದ್ದರೂ ಅನಿವಾರ್ಯ ಕಾರಣಗಳಿಂದ ಬರಲು ಆಗಿಲ್ಲ ಎಂಬುದನ್ನು ತಿಳಿಸಿದರು. ಅಲ್ಲದೆ, ನೂತನ ಕನ್ನಡ ಭವನ ನಿರ್ಮಾಣ ಕೂಡ ಬಹರೇನ್ ಕನ್ನಡ ಸಂಘದ ದೊಡ್ಡ ಸಾಧನೆ ಎಂದೂ ಶ್ಲಾಘಿಸಿದರು.

    ಇದು ವಿದೇಶದಲ್ಲಿನ ಪ್ರಪ್ರಥಮ ಸ್ವಂತ ಕನ್ನಡ ಭವನ; 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ..

    ಏನೇನಿದೆ?: ಬಹರೇನ್ ಕನ್ನಡ ಸಂಘದ ಈ ಕನ್ನಡ ಭವನ ಉದ್ಘಾಟನೆಯಲ್ಲಿ ಸಾವಿರಕ್ಕೂ ಅಧಿಕ ಬಹರೇನ್​ ಕನ್ನಡಿಗರು ಸಾಕ್ಷಿಯಾದರು. ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಇದರ ಉದ್ಘಾಟನೆ ಅದ್ಧೂರಿಯಾಗಿ ನಡೆಯಿತು. ಹೀಗೆ ನಿರ್ಮಿತವಾಗಿರುವ ನೂತನ ಕನ್ನಡ ಭವನದಲ್ಲಿ ವಿಶಾಲ ಸಭಾಭವನ, ಕನ್ನಡ ಕಲಿಕೆ ಕೇಂದ್ರ, ಸುಸಜ್ಜಿತ ಯೋಗ ಕೇಂದ್ರ, ಗ್ರಂಥಾಲಯಗಳಿವೆ. ಕನ್ನಡದ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಈ ಭವನದಲ್ಲಿ ಅವಕಾಶ ಮಾಡಿಕೊಡಲಾಗುವುದು.

    ಬಹರೇನ್ ನಗರದ ಕೇಂದ್ರ ಭಾಗದಲ್ಲಿರುವ ಕನ್ನಡ ಭವನ ಹೊರನಾಡಿನಲ್ಲಿರುವ ಕನ್ನಡಿಗರ ಬೇರೆ ಬೇರೆ ಸಂಘಗಳಿಗೂ ಕಾರ್ಯಕ್ರಮ ನಡೆಸಲು, ಸೇರಲು ಮತ್ತು ಸಂವಾದ ನಡೆಸಲು ಅವಕಾಶ ಮಾಡಿಕೊಡಲಿದೆ. ಇದು ಬಹರೇನ್ ಕನ್ನಡಿಗರೆಲ್ಲರೂ ಪರಸ್ಪರ ಭೇಟಿಯಾಗುವ ಬಹುಮುಖ್ಯ ತಾಣವಾಗಲಿದೆ ಎಂದು ಕನ್ನಡ ಸಂಘದವರು ತಿಳಿಸಿದರು.

    ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮನು ಬಳಿಗಾರ್, ಬಹರೇನ್ ಸಂಸ್ಥಾನದ ಭಾರತೀಯ ರಾಯಭಾರಿ ಪಿಯೂಷ್, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ, ಪತ್ರಕರ್ತ ಜೋಗಿ, ಬಹರೇನ್ ಸಂಸ್ಥಾನದ ವಾರ್ತಾ ಇಲಾಖೆ ನಿರ್ದೇಶಕ ಯೂಸುಫ್ ಲೋರಿ, ಡಾ.ಆರತಿ ಕೃಷ್ಣ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬಹರೇನ್ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.

    ಆಸ್ಕರ್ ಜ್ಯೂರಿಯಾಗಿ ಪಾಲ್ಗೊಂಡ ಪವನ್ ಒಡೆಯರ್; ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಭಾಗಿ

    ಉದ್ಯೋಗಕ್ಕಾಗಿ ಛಲ ಬಿಡದ ಯತ್ನ: 2 ತಿಂಗಳಲ್ಲಿ 600 ಇ-ಮೇಲ್​, 80 ಫೋನ್​ ಕರೆ; ಕೊನೆಗೂ ಸಿಕ್ತು ಕೆಲಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts