More

    ಮಲ್ಲಿಕಾರ್ಜುನ ಶ್ರೀಗಳ ಶಿಸ್ತು ನಮ್ಮೆಲ್ಲರಿಗೂ ದಾರಿ ದೀಪ, ಹೊಳಲ್ಕೆರೆ ಒಂಟಿಕಂಬದ ಮಠದಲ್ಲಿ ಜಗದ್ಗುರುವಿನ ಸ್ಮರಣೆ

    ಮಲ್ಲಿಕಾರ್ಜುನ ಶ್ರೀಗಳ ಶಿಸ್ತು ನಮ್ಮೆಲ್ಲರಿಗೂ ದಾರಿ ದೀಪ, ಹೊಳಲ್ಕೆರೆ ಒಂಟಿಕಂಬದ ಮಠದಲ್ಲಿ ಜಗದ್ಗುರುವಿನ ಸ್ಮರಣೆ
    ಚಿತ್ರದುರ್ಗ: ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳ ಶಿಸ್ತು ನಮ್ಮೆಲ್ಲರಿಗೂ ದಾರಿ ದೀಪವಾಗಿದೆ ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.

    ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿ ಶುಕ್ರವಾರ ಲಿಂಗೈಕ್ಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾ ಮೀಜಿ ಅವರ ಸ್ಮರಣೋತ್ಸವದ ಸಮ್ಮುಖ ವಹಿಸಿ ಆಶೀರ್ವಚನ ನೀಡಿದ ಅವರು, ಶ್ರೀಗಳು ಜಂಗಮಪ್ರಿಯರು. ಭಕ್ತರಿಗೆ ಉತ್ತಮ ಆತಿಥ್ಯ ನೀಡುತ್ತಿದ್ದರು. ಅವರ ಹಾಕಿಕೊಟ್ಟಿರುವ ಶಿಸ್ತಿನ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮೀಜಿ,ಮನುಷ್ಯ ಅಂತರ್ ಮುಖಿಯಾಗಿ ಸಾಗಲು ಭಕ್ತಿಮಾರ್ಗವೇ ಮುಖ್ಯ. ಮಲ್ಲಿಕಾರ್ಜುನ ಶ್ರೀಗಳು ಧಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಪಡೆದವರಾಗಿ ದ್ದ ರು. ಯಾರೇ ಯತಿಗಳು ಬಂದರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅಥಣಿ ಮುರುಘೇಂದ್ರ ಶಿವಯೋಗಿಗಳೆಂದರೆ ಶ್ರೀಗಳಿಗೆ ಅತ್ಯಂತ ಪ್ರೀತಿ. ಅವರ ಬದುಕು ಒಂದು ಸ್ಪಷ್ಟತೆ ಮತ್ತು ಶುಭ್ರವಾದದೆಂದು ಸ್ಮರಿಸಿದರು.

    ಶರಣ ಸಂಸ್ಕೃತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಬಸವಕುಮಾರ ಸ್ವಾಮೀಜಿ,ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ, ಎಸ್.ಲಿಂಗಮೂರ್ತಿ ಮಾತನಾಡಿದರು. ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ,ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ,ಡಾ. ಶಾಂತವೀರ ಸ್ವಾಮೀಜಿ,ನಾನಾ ಮಠಾಧೀಶರು,ಹರಗುರು ಚರಮೂರ್ತಿಗಳು,

    ಎಚ್.ಎಂ. ಆನಂದಪ್ಪ, ಎಸ್.ಬಿ. ವಸ್ತ್ರಮಠ,ಡಿ.ಎಸ್.ಮಲ್ಲಿಕಾರ್ಜುನ,ಮುರುಗೇಶ್,ಎಸ್.ವಿ.ನಾಗರಾಜಪ್ಪ ಮತ್ತಿತರರು ಇದ್ದರು. ಶ್ರೀ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮೀಜಿ ಪ್ರಾರ್ಥಿಸಿದರು. ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸ್ವಾಗತಿಸಿ, ಚಿದರವಳ್ಳಿಯ ಶ್ರೀ ಮಲ್ಲಿ ಕಾರ್ಜುನ ಸ್ವಾಮೀಜಿ ನಿರೂಪಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts