More

    ಆನ್‌ಲೈನ್ ವಿಚಾರಣೆ, ಇಬ್ಬರಿಗೆ ಜಾಮೀನು

    ಬೆಳಗಾವಿ: ಲಾಕ್‌ಡಾನ್ ಹಿನ್ನೆಲೆ ನ್ಯಾಯಾಲಯದಲ್ಲಿ ತುರ್ತು ಪ್ರಕರಣ ವಿಚಾರಣೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ನಡುವೆ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಗುರುವಾರ ಪ್ರಥಮ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎರಡು ಪ್ರಕರಣಗಳ ವಿಚಾರಣೆ ನಡೆಸಿದ ಬೆಳಗಾವಿ ನ್ಯಾಯಾಲಯ, ಎರಡೂ ಪ್ರಕರಣಗಳಲ್ಲಿ ಆರೋಪಿತರಿಗೆ ಜಾಮೀನು ನೀಡಿದೆ. ಬೆಳಗಾವಿಯ 6, 8ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 2 ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೂಂ ಆ್ಯಫ್ ಮೂಲಕ ವಿಚಾರಣೆ ಯಶಸ್ವಿಯಾಗಿ ನಡೆದಿದೆ. ನ್ಯಾಯಾಧೀಶೆ ಭಾಗ್ಯಲಕ್ಷ್ಮೀ, ನ್ಯಾಯಾಧೀಶ ವಿನಯ ಕುಂದಾಪುರ ವಿಚಾರಣೆ ನಡೆಸಿದರು. ವಕೀಲರಾದ ಹರ್ಷವರ್ಧನ ಪಾಟೀಲ, ಎಂ.ಎಂ.ಶೇಖ ಸೇರಿ ಸರ್ಕಾರಿ ಅಭಿಯೋಜಕರು ವಕಾಲತು ವಹಿಸಿದ್ದರು. ಸೋಂಕು ಹರಡುವ ಆತಂಕದ ಮುನ್ನೆಚ್ಚರಿಕೆಯಿಂದ ಹೈಕೋರ್ಟ್ ನೀಡಿರುವ ನಿರ್ದೇಶನದಂತೆ ಆರೋಪಿತರಾದವರನ್ನು ಜೈಲಿಗೆ ಕಳುಹಿಸದೆ ಎರಡೂ ಪ್ರಕರಣಗಳಲ್ಲಿ ಇಬ್ಬರಿಗೂ ಜಾಮೀನು ಮಂಜೂರು ಮಾಡಲಾಗಿದೆ ಎಂದು ವಕಾಲತು ವಹಿಸಿದ್ದ ವಕೀಲ ಹರ್ಷವರ್ಧನ ಪಾಟೀಲ ತಿಳಿಸಿದ್ದಾರೆ. ಲಾಕ್‌ಡೌನ್ ವೇಳೆಯಲ್ಲಿ ರಾಜ್ಯದಲ್ಲಿ ಇದೇ ಮೊದಲಬಾರಿಗೆ ಆನ್‌ಲೈನ್ ವಿಚಾರಣೆ ನಡೆಸಿದ್ದು ಬೆಳಗಾವಿ ನ್ಯಾಯಾಲಯ ಎನ್ನಲಾಗಿದ್ದು, ಈ ಪ್ರಯೋಗದ ಮೂಲಕ ಜಿಲ್ಲಾ ನ್ಯಾಯಾಲಯದ ವ್ಯವಸ್ಥೆ ಮತ್ತಷ್ಟು ಮೇಲ್ದರ್ಜೆಗೇರಿದಂತಾಗಿದೆ.

    ವಿಚಾರಣೆ ಹೇಗೆ ?: ವಕೀಲರು ಮೊದಲು ನ್ಯಾಯಾಲಯದಲ್ಲಿನ ಕಂಪ್ಯೂಟರ್ ಆಪರೇಟರ್‌ನನ್ನು ಸಂಪರ್ಕಿಸಿ ಐಡಿ ಮತ್ತು ಪಾಸ್‌ವರ್ಡ್ ಪಡೆಯಬೇಕು. ಬಳಿಕ ಪ್ರಕರಣವನ್ನು ಇ-ಫೈಲಿಂಗ್ ಮಾಡಬೇಕು. ಆನಂತರ ನ್ಯಾಯಾಲಯವು ಪ್ರಕರಣದ ವಿಚಾರಣೆ ದಿನಾಂಕ ಮತ್ತು ಅವಧಿ ತಿಳಿಸುತ್ತದೆ. ಆ ನಿಗದಿತ ಸಮಯದಲ್ಲಿ ಪ್ರಕರಣದ ಕಕ್ಷಿದಾರರ ಪರ ಮತ್ತು ವಿರೋಧದ ವಕೀಲರು ಜೂಮ್ ಆ್ಯಪ್‌ನಲ್ಲಿ ಆನ್‌ಲೈನ್ ಇದ್ದು, ಸಂಬಂಧಿಸಿದ ನ್ಯಾಯಾಧೀಶರೊಂದಿಗೆ ಸಂಪರ್ಕ ಸಾಧಿಸಲಾಗುತ್ತದೆ. ನ್ಯಾಯಾಧೀಶರ ಅನುಮತಿಯಿಂದ ಎಂದಿನಂತೆ ನ್ಯಾಯಾಲಯದಲ್ಲಿ ನಡೆಯುವ ಪ್ರಕ್ರಿಯೆಯಂತೆಯೇ ಸರ್ಕಾರಿ ಅಭಿಯೋಜಕರು, ಆರೋಪಿತರ ಪರ ವಕೀಲರು ವಾದ ಮಂಡಿಸಬೇಕು. ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶರು ಸಾಕ್ಷಾೃಧಾರ ಪರಿಗಣಿಸಿ ತೀರ್ಪು ಪ್ರಕಟಿಸುತ್ತಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts