More

    ಗೊಂದಲದ ಗೂಡಾದ ಆನ್​ಲೈನ್ ಶಿಕ್ಷಣ: ಹೈಕೋರ್ಟ್ ಆನ್​ಲೈನ್ ಶಿಕ್ಷಣ ಪರವಾಗಿ ತೀರ್ಪು

    ಬೆಂಗಳೂರು: ಆನ್​ಲೈನ್ ಕ್ಲಾಸ್ ಬಗ್ಗೆ ತಜ್ಙರ ಸಮಿತಿ ವರದಿ ಸಲ್ಲಿಕೆಯಾದ ನಂತರ ಇದೀಗ ಹೈಕೋರ್ಟ್ ಆನ್​ಲೈನ್ ಶಿಕ್ಷಣಕ್ಕೆ ಹಸಿರು ನಿಶಾನೆ ತೋರಿರುವುದು ಎಲ್ಲರಲ್ಲೂ ಒಂದು ರೀತಿಯ ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ. ಪೂರ್ವ ಪ್ರಾಥಮಿಕ ಶಾಲೆಗಳು ಸೇರಿದಂತೆ ಎಲ್ಲ ವಯೋಮಾನದ ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್ ನಡೆಸುವ ಬಗ್ಗೆ ಪಾಲಕರು ಮತ್ತು ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಗಳಿಗೆ ಆನ್​ಲೈನ್ ಶಿಕ್ಷಣ ರದ್ದುಗೊಳಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು.

    ಮಂಗಳವಾರಷ್ಟೇ ರಾಜ್ಯ ಸರ್ಕಾರ ರಚಿಸಿದ್ದ ತಜ್ಙರ ಸಮಿತಿಯು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಬುಧವಾರ ಹೈಕೋರ್ಟ್ ಆನ್​ಲೈನ್ ಶಿಕ್ಷಣ ವಿದ್ಯಾರ್ಥಿಗಳ ಮೂಲಭೂತ ಹಕ್ಕು ಇದ್ದಂತೆ. ಇದನ್ನು ರದ್ದು ಮಾಡಿದರೆ ಸಂವಿಧಾನದಲ್ಲಿ ಕೊಡಮಾಡುವ ಶಿಕ್ಷಣದ ಹಕ್ಕು ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.

    ನಿನ್ನೆ ಅಷ್ಟೇ ತಜ್ಞರ ಸಮಿತಿ ವರದಿ ನೀಡಿದೆ. ಈ ಮಧ್ಯೆ ಹೈಕೋರ್ಟ್ ಆದೇಶ ಕೂಡ ಬಂದಿದೆ. ತೀರ್ಪಿನ ಸಂಪೂರ್ಣ ಪ್ರತಿ ಸಿಕ್ಕಿದ ನಂತರ ಅಧ್ಯಯನ ಮಾಡಿ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ.
    ಎಸ್.ಸುರೇಶ್ ಕುಮಾರ್         ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

    ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಆನ್​ಲೈನ್ ತರಗತಿ ಬಗ್ಗೆ ಹೊಸ ಗೊಂದಲ ಸೃಷ್ಟಿ ಮಾಡಿದೆ. ತೀರ್ಪಿನ ಪ್ರಕಾರ, ಖಾಸಗಿ ಶಾಲೆಗಳು ಆನ್​ಲೈನ್ ತರಗತಿ ನಡೆಸುತ್ತವೆ. ಆದರೆ ಸರ್ಕಾರ ಇದರ ಕುರಿತು ಸ್ಪಷ್ಟತೆ ಹೊಂದಿಲ್ಲದ ಕಾರಣಕ್ಕೆ 57 ಸಾವಿರ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 65.56 ಲಕ್ಷ ವಿದ್ಯಾರ್ಥಿಗಳು ಆನ್​ಲೈನ್ ಶಿಕ್ಷಣದಿಂದ ವಂಚಿತರಾಗುವ ಸಂಭವವಿದೆ.

    ಸರ್ಕಾರ ಹೇಳುವುದೇನು?: ಆನ್​ಲೈನ್ ಶಿಕ್ಷಣದ ಬಗ್ಗೆ ಪಾಲಕರಿಂದ ದೂರು ಬಂದ ಮೇಲೆ ಜೂನ್ 15 ಮತ್ತು 27 ರಂದು ಆದೇಶ ಹೊರಡಿಸಿತ್ತು. ಒಂದು ಆನ್​ಲೈನ್ ಶಿಕ್ಷಣವನ್ನು ಪೂರ್ವ ಪ್ರಾಥಮಿಕ ಶಾಲೆಗಳಿಗೆ ನಡೆಸುವುದನ್ನು ನಿಲ್ಲಿಸುವುದು ಮತ್ತು ಇದಕ್ಕಾಗಿ ಪಾಲಕರಿಂದ ಪ್ರತ್ಯೇಕ ಶುಲ್ಕ ಪಡೆಯುವುದನ್ನು ತಡೆಯುವುದಾಗಿತ್ತು. ಮಕ್ಕಳ ಮಾನಸಿಕ ಆರೋಗ್ಯದ ರಕ್ಷಣೆ ಹಿನ್ನೆಲೆಯಲ್ಲಿ ತಜ್ಙರ ಸಮಿತಿಯನ್ನು ರಚಿಸಿತ್ತು. ಇದೀಗ ಸಮಿತಿ ವರದಿಯನ್ನು ನೀಡಿದೆ. ಈ ಮಧ್ಯೆ ಹೈಕೋರ್ಟ್ ಆದೇಶ ಕೂಡ ಬಂದಿದೆ. ತೀರ್ಪಿನ ಸಂಪೂರ್ಣ ಪ್ರತಿ ಸಿಕ್ಕಿದ ನಂತರ ಅಧ್ಯಯನ ಮಾಡಿ ಸರ್ಕಾರ ಮುಂಇನ ತೀರ್ಮಾನ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
    ಒಟ್ಟಾರೆ ಗೊಂದಲ: ಮೊದಲಿಗೆ ರಾಜ್ಯ ಸರ್ಕಾರ ಆನ್​ಲೈನ್ ಶಿಕ್ಷಣ ಪರವಾಗಿತ್ತು. ಇದಕ್ಕೆ ಶುಲ್ಕ ಪಡೆಯುತ್ತಿದ್ದರಿಂದ ಪಡೆಯಬಾರದು ಎಂದು ಸೂಚನೆ ನೀಡಿತ್ತು. ಆಮೇಲೆ ಪಾಲಕರ ವಿರೋಧ ವ್ಯಕ್ತವಾದ ಮೇಲೆ ತಕ್ಷಣ ಪೂರ್ವ ಪ್ರಾಥಮಿಕ ಶಾಲೆಗೆ ಆನ್​ಲೈನ್ ಶಿಕ್ಷಣ ಬೇಡ ಎಂದು ಆದೇಶ ಹೊರಡಿಸಿತ್ತು. ತಜ್ಙರ ಸಮಿತಿ ರಚಿಸಿ ವರದಿ ಪಡೆಯುವುದಾಗಿ ಹೇಳಿತ್ತು. ಇದೀಗ ವರದಿ ಸರ್ಕಾರದ ಕೈ ಸೇರಿದೆ. ವರದಿಯಲ್ಲಿ ನೇರವಾಗಿ ಆನ್​ಲೈನ್ ಶಿಕ್ಷಣ ಬೇಡ ಎಂದಿಲ್ಲ. ತಾತ್ಕಾಲಿಕವಾಗಿ ಆನ್​ಲೈನ್ ಶಿಕ್ಷಣದ ಅವಶ್ಯಕತೆ ಇದ್ದು, ಇದರ ಜತೆಗೆ ಆಫ್​ಲೈನ್ ಶಿಕ್ಷಣವನ್ನು ಸಹ ನೀಡಬೇಕು ಎಂದು ಶಿಫಾರಸು ಮಾಡಿದೆ. ಆದರೆ, ಖಾಸಗಿ ಶಾಲೆಗಳು ಮಾತ್ರ ಆನ್​ಲೈನ್ ಶಿಕ್ಷಣ ನಡೆಸುತ್ತಲೇ ಇವೆ. ಆದರೆ, ಸರ್ಕಾರ ಮತ್ತು ಹೈಕೋರ್ಟ್ ನಡೆಯಿಂದಾಗಿ ಆನ್​ಲೈನ್ ಶಿಕ್ಷಣ ಮತ್ತಷ್ಟು ಗೊಂದಲದ ಗೂಡಾಗಿದೆ.

    ಶಾಲೆ ಆರಂಭ ಇಲ್ಲ: ಶಾಲೆ ಆರಂಭದ ಬಗ್ಗೆ ಸರ್ಕಾರ ಯವುದೇ ನಿರ್ಧಾರ ತೆಗಅೆದುಕೊಂಡಿಲ್ಲ. ಪಾಲಕರು, ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ಸರ್ಕಾರ ತಾನಾಗಿಯೇ ಯಾವುದೇ ನಿರ್ಣಯವನ್ನು ಅಧಿಕೃತವಾಗಿ ಪ್ರಕಟಿಸುವ ಮುನ್ನ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ.

    6 ಮತ್ತು 7ನೇ ತರಗತಿಗೆ ಆನ್​ಲೈನ್​ ಶಿಕ್ಷಣ ಇರುತ್ತಾ-ಇಲ್ವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts