More

    ನರ್ಸ್​ಗಳಿಗೆ ಆನ್​ಲೈನ್​ನಲ್ಲಿ ಕರೊನಾ ತರಬೇತಿ: ರಾಜೀವ್​ಗಾಂಧಿ ವಿವಿ, ನಿಮ್ಹಾನ್ಸ್ ಸಹಯೋಗ

    ಬೆಂಗಳೂರು: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಧಾನದ ಬಗ್ಗೆ ತಿಳಿಸಲು ರಾಜೀವ್​ಗಾಂಧಿ ಆರೋಗ್ಯ ವಿವಿ (ಆರ್​ಜಿಯುಎಚ್​ಎಸ್) ಮತ್ತು ನಿಮ್ಹಾನ್ಸ್ ಸಹಯೋಗದಲ್ಲಿ ನರ್ಸ್​ಗಳಿಗಾಗಿ ಆರಂಭಿಸಿರುವ ತರಬೇತಿಗೆ ಮೊದಲ ದಿನವೇ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.

    ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಂಗಳವಾರ ತರಬೇತಿಗೆ ಚಾಲನೆ ನೀಡಿದರು. ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅನುಸರಿಸಬೇಕಾದ ವಿಧಾನ ಮತ್ತು ವೈಯಕ್ತಿಕ ಕಾಳಜಿ ಬಗ್ಗೆ ವೈದ್ಯರು ಮತ್ತು ವೈದ್ಯಕೀಯ ತಜ್ಞರು ಆನ್​ಲೈನ್​ನಲ್ಲಿ ನರ್ಸ್​ಗಳಿಗೆ ತಿಳಿಸಿಕೊಡಲಿದ್ದಾರೆ. ರಾಜ್ಯದಲ್ಲಿ 4.5 ಲಕ್ಷ ನರ್ಸ್​ಗಳಿದ್ದು, ಪ್ರತಿ ನಿತ್ಯ 2 ಗಂಟೆ ಆನ್​ಲೈನ್​ನಲ್ಲಿ ತರಬೇತಿ ನೀಡಲಾಗುತ್ತದೆ. ಮೊದಲ ದಿನ ರಾಜ್ಯಾದ್ಯಂತ 1,800 ನರ್ಸ್​ಗಳು ಭಾಗವಹಿಸಿದ್ದರು.

    ನರ್ಸ್​ಗಳಿಗೆ ತರಬೇತಿ ನೀಡುವುದು ಸರ್ಕಾರ ನೈತಿಕ ಜವಾಬ್ದಾರಿಯಾಗಿದೆ. ಇಡೀ ದೇಶ ಗುಣಮಟ್ಟ ನರ್ಸ್​ಗಳ ಸೇವೆಗಾಗಿ ಕಾದಿದೆ. ಚಿಕಿತ್ಸೆ ನೀಡುವ ವಿಧಾನ ತಿಳಿದಿದ್ದರೆ ಬಹುತೇಕ ರೋಗಿಗಳನ್ನು ಗುಣಪಡಿಸಬಹುದಾಗಿದೆ. ಇದಕ್ಕಾಗಿ ನುರಿತ ನರ್ಸ್ ಮತ್ತು ವೈದ್ಯರ ಅವಶ್ಯಕತೆ ಇದೆ ಎಂದು ಸುಧಾಕರ್ ತಿಳಿಸಿದರು.

    ಆರ್​ಜಿಯುಎಚ್​ಎಸ್ ಕುಲಪತಿ ಡಾ. ಎಸ್. ಸಚ್ಚಿದಾನಂದ ಮಾತನಾಡಿ, ಈಗಾಗಲೇ ಆನ್​ಲೈನ್ ಮೂಲಕ ವೈದ್ಯರಿಗೆ ತರಬೇತಿ ನೀಡುತ್ತಿದ್ದೇವೆ. ಇದೀಗ ನರ್ಸ್​ಗಳಿಗೆ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ‘ಡಿ’ ಗ್ರೂಪ್ ನೌಕರರಿಗೂ ತರಬೇತಿ ನೀಡುತ್ತೇವೆ ಎಂದರು.

    ಡ್ಯಾಶ್​ಬೋರ್ಡ್ ಮೂಲಕ ಕ್ಷಣಕ್ಷಣ ಮಾಹಿತಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಚಾಲನೆ | ಬಿಬಿಎಂಪಿ ವಾರ್ ರೂಂನಲ್ಲಿ ವೆಬ್​ಸೈಟ್ ಕಾರ್ಯಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts