More

    ಬೆಂಗಾಲಿ ಬೆಡಗಿಯರು ‘ವಾಮಾಚಾರಿಗಳು’ ಎಂದ ಟ್ರೋಲಿಗರ ಬೆನ್ನಟ್ಟಿದ ಪೊಲೀಸರು…

    ಕೊಲ್ಕತ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ನಟಿ ರಿಯಾ ಚಕ್ರವರ್ತಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವುದರ ಮಧ್ಯೆ, ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಬಂಗಾಳಿ ಮಹಿಳೆಯರನ್ನು ವಿರುದ್ಧ ನಿಂದನೆ ಶುರುವಾಗಿದೆ.
    ಸುಶಾಂತ್​​ನ ತಂದೆ ಕೆ.ಕೆ.ಸಿಂಗ್, ರಿಯಾ ಚಕ್ರವರ್ತಿ ಮತ್ತು ಇತರ ಐದು ಜನರ ವಿರುದ್ಧ ದೂರು ನೀಡಿದ ನಂತರ ಕೋಲ್ಕತ ಪೊಲೀಸರ ಸೈಬರ್ ಸೆಲ್ ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಬಂಗಾಳಿ ಮಹಿಳೆಯರ ವಿರುದ್ಧ ಆನ್‌ಲೈನ್ ನಿಂದನೆ ಮತ್ತು ಮಾನಹಾನಿಯ ವಿರುದ್ಧ ಅನೇಕ ದೂರುಗಳು ಬಂದಿವೆ.

    ಇದನ್ನೂ ಓದಿ:  ಸಹೋದರನಿಗೆ ಶ್ರೀರಕ್ಷೆ ಬಂಧಿಸುವ ಕನಸು ಕಂಡ ಬಾಲಕಿಯನ್ನು ರಕ್ಷಿಸಲಿಲ್ಲ ವೈದ್ಯರು

    ಕೆಲವು ಟ್ರೋಲಿಗರು ಬಂಗಾಳಿ ಮಹಿಳೆಯರಿಗೆ “ಚಿನ್ನ ಅಗೆಯುವವರು” ಎಂದು ಹಣೆ ಪಟ್ಟಿ ಕಟ್ಟಿದರೆ, ಮತ್ತೆ ಕೆಲವರು “ವಾಮಾಚಾರಿಗಳು” ಮತ್ತು “ಪುರುಷರ ಮೇಲೆ ಪ್ರಾಬಲ್ಯ ಹೊಂದುವವರು” ಎಂದು ಆರೋಪಿಸಿದ್ದಾರೆ. ಟಿಎಂಸಿ ಸಂಸದೆ ನುಸ್ರತ್ ಜಹಾನ್ ಸೇರಿದಂತೆ ಹಲವು ಪ್ರಮುಖರು ಇಂತ ಅಸಹ್ಯಕರ ಟ್ವೀಟ್‌ಗಳಿಗಾಗಿ ಟ್ರೋಲಿಗರನ್ನು ಟೀಕಿಸಿದ್ದಾರೆ. ನಾವು ಬಂಗಾಳಿ ಹುಡುಗಿಯರು ಎಲ್ಲೆಡೆ ಇದ್ದೇವೆ. ನ್ಯಾಯಯುತವಾಗಿ ಸ್ಪರ್ಧಿಸಿ ಜಗತ್ತನ್ನು ಗೆಲ್ಲುತ್ತೇವೆ. ನಿಮ್ಮ ಆತ್ಮತೃಪ್ತಿಗಾಗಿ ಒಂದು ಸಮುದಾಯವನ್ನು ಅವಮಾನಿಸುವುದನ್ನು ನಿಲ್ಲಿಸಿ ಎಂದಿದ್ದಾರೆ ನುಸ್ರತ್.

    ಇದನ್ನೂ ಓದಿ;  ಮದುವೆಯಾಗದೇ ಹುಚ್ಚನಾದವನಿಂದ ಬರ್ಬರವಾಗಿ ಕೊಲೆಯಾದರು ನಾಲ್ಕು ಮಂದಿ!

    ಸೈಬರ್ ಸೆಲ್ ಅಧಿಕಾರಿಗಳು ದೂರುಗಳ ಕುರಿತು ತನಿಖೆ ಆರಂಭಿಸಿದ್ದಾರೆ. ನಿಂದನೀಯ ಮತ್ತು ಮಾನಹಾನಿಕರ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಬಳಸುವ ಸಾಮಾಜಿಕ ಮಾಧ್ಯಮ ಖಾತೆಗಳ ವಿವರಗಳನ್ನು ಒದಗಿಸುವಂತೆ ಅವರು ನೋಡಲ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ದೂರುಗಳನ್ನು ಪರಿಶೀಲಿಸುತ್ತಿದ್ದು,ಇವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುತ್ತಿರುವುದಾಗಿ ಜಂಟಿ ಸಿಪಿ (ಅಪರಾಧ) ಮುರುಳಿಧರ ಶರ್ಮಾ ತಿಳಿಸಿದ್ದಾರೆಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
    ಕೋಲ್ಕತಾ ಪೊಲೀಸರಿಗೆ ನಗರ ಮೂಲದ ಮನಶ್ಶಾಸ್ತ್ರಜ್ಞ ಚಂದ್ರನ್ ಚಕ್ರವರ್ತಿ ದೂರು ಸಲ್ಲಿಸಿದ್ದಾರೆ. ಜರ್ಮನಿಯಲ್ಲಿ ವಾಸವಾಗಿರುವ ಮತ್ತು ‘ಚಕ್ರವರ್ತಿ’ ಎಂಬ ಉಪನಾಮ ಹೊಂದಿರುವ ತನ್ನ ಸ್ನೇಹಿತರೊಬ್ಬರನ್ನು ಟ್ರೋಲ್ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ. ತಮ್ಮ ಸ್ನೇಹಿತನಿಗೆ ನೀಡುತ್ತಿರುವ ಕಿರುಕುಳವನ್ನು ವಿರೋಧಿಸಿದ್ದಕ್ಕೆ ಆರೋಪಿಗಳು ಚಂದ್ರನ್ ಅವರನ್ನೇ ನಿಂದಿಸಲು ಪ್ರಾರಂಭಿಸಿದ್ದಾರೆ. ಅಪರಾಧಿಗಳು ತಮ್ಮ ಕೆಲವು ಟ್ವೀಟ್‌ಗಳಿಗೆ ಕೊಲ್ಕತ್ತ ಪೊಲೀಸರನ್ನು ಟ್ಯಾಗ್ ಮಾಡಿದ್ದರು.
    ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ ನಂತರ ಬಂಗಾಳಿ ಮಹಿಳೆಯರ ಮೇಲೆ ಆನ್‌ಲೈನ್ ನಿಂದನೆ ಕುರಿತು ಸಾಕಷ್ಟು ದೂರುಗಳು ಬಂದಿದ್ದು, ಅವುಗಳನ್ನು ವಿಚಾರಣೆಗಾಗಿ ಕೋಲ್ಕತಾ ಪೊಲೀಸರ ಸೈಬರ್ ಸೆಲ್‌ಗೆ ಕಳುಹಿಸಿರುವುದಾಗಿ ಪಶ್ಚಿಮ ಬಂಗಾಳ ಮಹಿಳಾ ಆಯೋಗದ ಮುಖ್ಯಸ್ಥೆ ಲೀನಾ ಗಂಗೋಪಾಧ್ಯಾಯ ಹೇಳಿದ್ದಾರೆ.

    ಸರಿಯಾಗಿ ಮನೆಗೆಲಸ ಮಾಡಲಿಲ್ಲ ಎಂದು ಸೇವಕಿಗೆ ಚೂರಿಯಿಂದ ಇರಿದಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts