More

    ಭಾರತದಲ್ಲಿ ವಿಶೇಷ ಆವೃತ್ತಿಯ ಒನ್​ಪ್ಲಸ್ ಸ್ಮಾರ್ಟ್​ಫೋನ್ ಬಿಡುಗಡೆ

    ದೆಹಲಿ: ಪ್ರಸಿದ್ಧ ಒನ್​ಪ್ಲಸ್ ಕಂಪನಿಯು ತನ್ನ ನೂತನ ಸ್ಮಾರ್ಟ್​ಫೋನ್​ ಒನ್​ಪ್ಲಸ್-11 5G ಮಾರ್ಬಲ್ ಒಡಿಸ್ಸಿ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ವಿಶೇಷ ಆವೃತ್ತಿಯಾಗಿರುವ ಇದು ಹಿಂದಿನ ಪ್ಯಾನೆಲ್‌ನಲ್ಲಿ ಮಾರ್ಬಲ್ ತರಹ ವಿನ್ಯಾಸವನ್ನು ಹೊಂದಿದೆ.

    ಈ ಸ್ಮಾರ್ಟ್​ಫೋನ್​ನ್ನು 3D ಮೈಕ್ರೋಕ್ರಿಸ್ಟಲಿನ್ ರಾಕ್‌ನೊಂದಿಗೆ ನಿರ್ಮಿಸಲಾದ ಮೊದಲ ಸ್ಮಾರ್ಟ್‌ಫೋನ್ ಎಂದು ಹೇಳಲಾಗಿದ್ದು, ಸೀಮಿತ ಅವಧಿಗೆ ಮಾತ್ರ ಇದರ ಮಾರಾಟ ಮಾಡಲಾಗುತ್ತದೆ. ಇದು ಎಟರ್ನಲ್ ಗ್ರೀನ್ ಮತ್ತು ಟೈಟಾನ್ ಬ್ಲ್ಯಾಕ್​ ಬಣ್ಣಗಳಲ್ಲಿ ಲಭ್ಯವಿದೆ.

    ಇದನ್ನೂ ಓದಿ: ಗ್ಯಾರಂಟಿಗಳನ್ನು ಜಾರಿಗೊಳಿಸದಿದ್ದರೆ ಹೋರಾಟ; ಮಾಜಿ ಸಚಿವ ಬಿ.ಸಿ.ಪಾಟೀಲ ಎಚ್ಚರಿಕೆ ‌

    ಇನ್ನು, ಈ ಪೋನ್​ ಬೆಲೆ ಸುಮಾರು 56,999ರೂ. ಆಗಿದ್ದು, ಇದು ಜೂನ್ 6ರ ಮಧ್ಯಾಹ್ನ 12 ಗಂಟೆಯಿಂದ ಒನ್​ಪ್ಲಸ್ ಅಧಿಕೃತ ವೆಬ್‌ಸೈಟ್ ಮೂಲಕ ಗ್ರಾಹಕರಿಗೆ ಖರೀದಿಸಲು ಸಿಗುತ್ತದೆ. ನೀವು ಹಳೆಯ ಫೋನ್​ನ್ನು ಕೂಡ ವಿನಿಮಯ ಮಾಡಿಕೊಂಡು, ಹೊಸ ಫೋನ್​ಗೆ ರಿಯಾಯಿತಿ ಪಡೆಯಬಹುದಾಗಿದೆ.

    ಈ ಪೋನ್​ 6.7 ಇಂಚಿನ QHD+ E4 OLED ಡಿಸ್‌ಪ್ಲೇಯನ್ನು ಹೊಂದಿದ್ದು, 50MP+ 48MP+32MP ಟ್ರಿಪಲ್​ ಕ್ಯಾಮರಾ ಜತೆಗೆ ಸೆಲ್ಫಿಗಾಗಿ 16MP ಮುಂಭಾಗದಲ್ಲಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೇ, ಸ್ನಾಪ್​ಡ್ರ್ಯಾಗನ್​ 8 Gen2 ಪ್ರೊಸೆಸರ್​ನ್ನು ಹೊಂದಿದೆ.

    ಒನ್​ಪ್ಲಸ್-11 ಫೋನ್​ 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಒಳಗೊಂಡಿದ್ದು, Android 13 ಆಧಾರಿತ OxygenOS 13.0ನ್ನು ಆಪರೇಟಿಂಗ್​ ಸಿಸ್ಟಂ ಹೊಂದಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts