More

    ಪ್ರಾಚಾರ್ಯರಿಗೆ ವಿಶೇಷ ಕಾರ್ಯಾಗಾರ

    ಹುಬ್ಬಳ್ಳಿ : ಹುಬ್ಬಳ್ಳಿ ಶಹರ ವಲಯದ ಅನುದಾನಿತ ಮತ್ತು ಅನುದಾನರಹಿತ ಶಾಲಾ ಮುಖ್ಯೊಪಾಧ್ಯಾಯರು ಮತ್ತು ಪಿಯುಸಿ ಕಾಲೇಜಿನ ಪ್ರಾಚಾರ್ಯರಿಗೆ, ಶೈಕ್ಷಣಿಕ ನಾಯಕತ್ವ ಅಭಿವೃದ್ಧಿ ಎಂಬ ವಿಷಯ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರ ನಗರದ ಶೆಟ್ಟರ್ ಲೇಜೌಟ್​ನಲ್ಲಿರುವ ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನದ ಗ್ಲೋಬಲ್ ನಿರ್ವಹಣಾ, ಐಟಿ ಹಾಗೂ ಮ್ಯಾನೇಜಮೇಂಟ್ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಜರುಗಿತು.

    ಡಿಡಿಪಿಐ ಶಣ್ಮುಖಸ್ವಾಮಿ ಕೆಳದಿಮಠ ಹಾಗೂ ಕಾರ್ಯಾಗಾರದ ವಿಶೇಷ ತರಬೇತುದಾರ ಡಾ. ಗೌರೀಶಾ ಉದ್ಘಾಟಿಸಿದರು.

    ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಕೆ.ಪಿ. ಸುರೇಶ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಸಂದೀಪ ಬೂದಿಹಾಳ ಅತಿಥಿಗಳಾಗಿದ್ದರು.

    ಹುಬ್ಬಳ್ಳಿ ಶಹರ ವಲಯದ ಒಟ್ಟು 123 ಪಿಯುಸಿ ಕಾಲೇಜುಗಳ ಪ್ರಾಚಾರ್ಯರು ಭಾಗವಹಿಸಿದ್ದರು.

    ಇಪ್ಪತ್ತೊಂದನೆ ಶತಮಾನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಭಾರಿ ಬದಲಾವಣೆಯನ್ನು ಸಮರ್ಥವಾಗಿ ಎದುರಿಸಲು ‘ಶೈಕ್ಷಣಿಕ ನಾಯಕರು’ ಹೇಗೆ ಕಾರ್ಯಪ್ರವೃತ್ತರಾಗಬೇಕು ಎಂಬ ವಿಷಯ ಕುರಿತು ರ್ಚಚಿಸಲಾಯಿತು.

    ಹುಬ್ಬಳ್ಳಿ ಶಹರ ವಲಯ ಬಿಇಒ ಚನ್ನಪ್ಪಗೌಡ್ರ, ಬಿಆರ್​ಸಿ ಶಿವಳ್ಳಿಮಠ, ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಜಿ.ಎನ್. ಹಿರೇಮಠ, ಕಾರ್ಯದರ್ಶಿ ಪುಷ್ಪಾ ಹಿರೇಮಠ, ಗ್ಲೋಬಲ್ ಸಮೂಹ ಶಿಕ್ಷಣ ಸಂಸ್ಥೆಗಳ ಡೀನ್ ಡಾ. ಮಹೇಶ ದೇಶಪಾಂಡೆ, ಪ್ರಾಚಾರ್ಯ ಪ್ರೊ. ಅಶ್ವಿನಕುಮಾರ ಕೋಟಿ, ಪ್ರಾಚಾರ್ಯು ಪ್ರೊ. ರಾಧಾ ರಾಮದುರ್ಗ, ಪ್ರೊ. ಭಾರತಿ ಎನ್., ಪ್ರೊ. ಸೌಮ್ಯ ಎಂ., ಪ್ರೊ. ಸುನೀಲ ಪ್ರತಾಪನ್ ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts