More

    ಪಾಕಿಸ್ತಾನಕ್ಕೆ ಒಳ್ಳೇ ಪ್ರಧಾನಿ ಆಗು ಎಂದರೆ, ಇಲ್ಲ ನಾನು ಕಾಶ್ಮೀರದವರ ರಾಯಭಾರಿ ಆಗ್ತೀನಿ ಅಂದ್ನಂತೆ…!

    ಇಸ್ಲಾಮಬಾದ್​: ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಉತ್ತಮ ಆಡಳಿತ ನೀಡಿ, ಪಾಕಿಸ್ತಾನದ ಏಳಿಗೆಗೆ ಶ್ರಮಿಸಿ, ಒಳ್ಳೆಯ ಪ್ರಧಾನಿ ಎನಿಸಿಕೊಳ್ಳಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಆದರೆ, ಅವರು ಮಾತ್ರ ಆ ಕೆಲಸ ಬಿಟ್ಟು, ಭಾರತದ ಕಾಶ್ಮೀರ ನಿವಾಸಿಗಳ ರಾಯಭಾರಿಯಾಗಿ ಜಾಗತಿಕವಾಗಿ ಅವರ ಕಷ್ಟನಷ್ಟಗಳನ್ನು ಪ್ರಸ್ತಾಪಿಸುತ್ತೇನೆ ಎಂದು ಹೇಳುತ್ತಿದ್ದಾರೆ.

    ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಆಡಳಿತಕ್ಕೆ ಬಂದ ಕೆಲವೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಡುತ್ತಿದ್ದ ಸಂವಿಧಾನದ ವಿಧಿ 370 ಅನ್ನು ರದ್ದುಗೊಳಿಸಿತ್ತು. ಅಲ್ಲದೆ, ರಾಜ್ಯವನ್ನು ವಿಭಜಿಸಿ ಜಮ್ಮು ಮತ್ತು ಕಾಶ್ಮೀರ ಎಂಬ ಪ್ರತ್ಯೇಕ ರಾಜ್ಯವನ್ನೂ, ಲಡಾಖ್​ ಎಂಬ ಕೇಂದ್ರಾಡಳಿತ ಪ್ರದೇಶವನ್ನೂ ರೂಪಿಸಿತ್ತು. ಆ ಪ್ರದೇಶದಲ್ಲಿ ಅಸ್ಥಿರತೆ ಮೂಡಿಸಲು ಸದಾ ಪ್ರಯತ್ನಿಸುವ ಪಾಕಿಸ್ತಾನಕ್ಕೆ ಇದರಿಂದ ಭಾರಿ ಇರಿಸುಮುರಿಸು ಉಂಟಾಗಿತ್ತು.

    ಇದನ್ನೂ ಓದಿ: ಲಡಾಖ್​ನಲ್ಲಿ ಆಕ್ರಮಣಕಾರಿ ಮನೋಭಾವ ತೋರುತ್ತಿರುವುದಕ್ಕೆ ಚೀನಾ ಭಾರಿ ಬೆಲೆ ತೆರಬೇಕಾಗುತ್ತೆ

    ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಿ, ಭಾರತಕ್ಕೆ ಮುಜುಗರ ಉಂಟು ಮಾಡಲು ಅಂದಿನಿಂದಲೂ ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಹಾಗೆ ಮಾಡಿ ಸಾಕಷ್ಟು ಬಾರಿ ಮುಖಭಂಗಕ್ಕೆ ಒಳಗಾಗಿದೆ. ಆದರೂ ಅದು ಬುದ್ಧಿ ಕಲಿತಿಲ್ಲ.

    ಈಗಲೂ ತಮ್ಮ ರಾಷ್ಟ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಒಳ್ಳೆಯ ಪ್ರಧಾನಿ ಎನಿಸಿಕೊಳ್ಳಬೇಕಿದ್ದ ಇಮ್ರಾನ್​ ಖಾನ್​ ಈಗಲೂ ಕೂಡ ತಾವು ಆ ಕೆಲಸ ಮಾಡುವುದಿಲ್ಲ. ಬದಲಿಗೆ ಕಾಶ್ಮೀರಿಗಳ ರಾಯಭಾರಿಯಾಗಿ ಜಾಗತಿಕ ವೇದಿಕೆಯಲ್ಲಿ ಅವರ ಕಷ್ಟನಷ್ಟಗಳನ್ನು ಪ್ರಸ್ತಾಪಿಸುವುದಾಗಿ ಅಂಬೋ ಎನ್ನುತ್ತಿದ್ದಾರೆ.

    ರಾಷ್ಟ್ರೀಯ ಭದ್ರತೆಯಲ್ಲಿ ರಾಜಕಾರಣ ಬೇಡ; ರಾಹುಲ್​ ಗಾಂಧಿಗೆ ಶರದ್​ ಪವಾರ್​ ಪಾಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts