More

    ಒಂದೇ ಕಲ್ಲಿಗೆ 2 ಹಕ್ಕಿ ಹೊಡೆಯುವೆ- ಜೆಡಿಎಸ್ ಅಭ್ಯರ್ಥಿ ಸಿವಿಸಿ

    ಕೊಪ್ಪಳ: ಎರಡು ರಾಷ್ಟ್ರೀಯ ಪಕ್ಷಗಳು ಎರಡು ಕುಟುಂಬದ ಪಾಲಾಗಿವೆ. ಇದರಿಂದ ಸಾಮಾನ್ಯರಿಗೆ ಅನ್ಯಾಯವಾಗುತ್ತಿದ್ದು, ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವಂತೆ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಬ್ಬರನ್ನೂ ಸೋಲಿಸುವೆ ಎಂದು ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್ ಹೇಳಿದರು.

    ಬಿಜೆಪಿಯವರು ನನಗೆ ಸಾಕಷ್ಟು ಅನ್ಯಾಯ ಮಾಡಿದ್ದಾರೆ. ಬಹಳ ನೋವಿನಿಂದ ಪಕ್ಷ ತೊರೆದು ಬಂದಿದ್ದೇನೆ. ಜೆಡಿಎಸ್‌ನಲ್ಲಿ ಸಾದಿಕ್ ಅತ್ತಾರ್, ವೀರೇಶ ಮಹಾಂತಯ್ಯನಮಠ ಸೇರಿ ಅನೇಕರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಕೊನೇ ಕ್ಷಣದಲ್ಲಿ ನನಗೆ ಕುಮಾರಸ್ವಾಮಿ ಟಿಕೆಟ್ ನೀಡಿದ್ದಾರೆ. ಕುಟುಂಬ ರಾಜಕಾರಣ ಅಂತ್ಯಗೊಳಿಸಲು ನಾವೆಲ್ಲ ಒಂದಾಗಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇದನ್ನೂ ಓದಿ: ಜೆಡಿಎಸ್​ ಪಟ್ಟಿಯಲ್ಲಿ ಮಹತ್ವದ ಬದಲಾವಣೆ; 12 ಕ್ಷೇತ್ರಗಳಲ್ಲಿ ಹೊಸದಾಗಿ ಅಭ್ಯರ್ಥಿಗಳ ಘೋಷಣೆ!

    ಅಲ್ಪಸಂಖ್ಯಾತರಿಗೆ ಆಗುವ ಅನ್ಯಾಯ ತಡೆಯುವ ಶಕ್ತಿ ಇರುವುದು ಜೆಡಿಎಸ್‌ಗೆ ಮಾತ್ರ. ನಾಲ್ಕು ದಶಕಗಳ ಕಾಲ ರಾಜಕಾರಣ ನಡೆಸಿರುವ ಸಂಸದ ಸಂಗಣ್ಣ ಕರಡಿ ಇತರರಿಗೆ ಮಾದರಿಯಾಗಬೇಕಿತ್ತು. ಆದರೆ, ಸ್ವಾರ್ಥ ಮೆರೆದಿದ್ದಾರೆ. ಅವರ ನಡೆಯನ್ನು ಜಿಲ್ಲೆಯ ಜನ ಗಮನಿಸುತ್ತಿದ್ದಾರೆ ಎಂದರು.

    9 ವರ್ಷ ಪಕ್ಷಕ್ಕಾಗಿ ದುಡಿದೆ. ನನಗೆ ಯಾವೊಂದು ಹುದ್ದೆ ನೀಡದೆ ಅಪಮಾನ, ಅವಮಾನ ಮಾಡಿದರು. ಎಲ್ಲವನ್ನೂ ಸಹಿಸಿಕೊಂಡೆ. 2018ರಲ್ಲಿ ಟಿಕೆಟ್ ದೊರೆತರೂ ಪುತ್ರ ವ್ಯಾಮೋಹದಿಂದ ಕಸಿದುಕೊಂಡರು. ಈಗ ಕುತಂತ್ರದಿಂದ ಮತ್ತೆ ಟಿಕೆಟ್ ತಪ್ಪಿಸಿದ್ದಾರೆ. ನನಗೆ ನೋವು ನೀಡಿದವರಿಗೆ ಒಳ್ಳೆಯದಾಗಲಿ. ಜೆಡಿಎಸ್ ಮತ್ತೆ ಬಲಗೊಂಡಿದೆ ಎಂದು ಹೇಳಿದರು.

    ಬಿಜೆಪಿ, ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರುತ್ತಿದ್ದಾರೆ. ನನ್ನ ಪರವಾಗಿ ಎಚ್.ಡಿ.ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ, ನಿಖಿಲ್ ಕುಮಾರಸ್ವಾಮಿ ಇನ್ನಿತರರು ಪ್ರಚಾರಕ್ಕೆ ಬರಲಿದ್ದಾರೆ ಎಂದರು. ಪ್ರಮುಖರಾದ ಸಾದಿಕ್ ಅತ್ತಾರ್, ಅಪ್ಸರ್‌ಸಾಬ್, ಜೆಡಿಎಸ್ ಜಿಲ್ಲಾಧ್ಯಕ್ಷ ವಿರೇಶ ಮಹಾಂತಯ್ಯನಮಠ, ಚನ್ನಪ್ಪ ಅಳವಂಡಿ, ಮಹೇಶ ಗೋವನಕೊಪ, ಸುರೇಶ ಭೂಮರಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts