More

    ಕೆಪಿಟಿಸಿಎಲ್​ ಕಿರಿಯ ಸಹಾಯಕರ ನೇಮಕಾತಿ ಅಕ್ರಮ; ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಪ್ರಮುಖ ಆರೋಪಿಯ ಬಂಧನ

    ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಖೆಡ್ಡಾಗೆ ಕೆಡವಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಸೋಮನಗೌಡ ಪಾಟೀಲ ಬಂಧಿತ. ಈತನ ಬಂಧನದೊಂದಿಗೆ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ‌ಅಕ್ರಮದಲ್ಲಿ ಬಂಧಿತರಾದವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

    ಗದಗಿನ ಪರೀಕ್ಷಾ ಕೇಂದ್ರದಿಂದ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಗೆ ರವಾನಿಸಿದ ಆರೋಪ ಈತನ ಮೇಲೆ ಇದೆ. ಗದಗ ಮುನ್ಸಿಪಲ್ ಪಿಯು ಕಾಲೇಜಿನ ಉಪಪ್ರಾಚಾರ್ಯ ಮಾರುತಿ ಸೋನವಣೆ ಅವರ ಪುತ್ರ ಸುಮಿತ್‌ಕುಮಾರ್‌‌ನನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದು, ಈತನೊಂದಿಗೆ ಸೋಮನಗೌಡ ಡೀಲ್ ಕುದುರಿಸಿದ್ದ.

    ಅಭ್ಯರ್ಥಿಗಳಿಂದ 7.10 ಲಕ್ಷ ರೂ ಪಡೆದು ಅದರಲ್ಲಿ 4.50 ಲಕ್ಷ ರೂ. ಸುಮಿತ್‌ಕುಮಾರ್‌ಗೆ ನೀಡಿದ್ದ ಸೋಮನಗೌಡ, ಆ.7ರಂದು ವಾಟ್ಸ್​​ಆ್ಯಪ್ ಮೂಲಕ ಸುಮಿತ್​ನಿಂದ ಪ್ರಶ್ನೆಪತ್ರಿಕೆ ಪಡೆದಿದ್ದ. ಬಳಿಕ ಉತ್ತರ ಹೇಳುವ ತಂಡಕ್ಕೆ ಪ್ರಶ್ನೆಪತ್ರಿಕೆ ರವಾನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?

    ಹಿರಿಯ ನಟಿಯ ತಲೆಗೆ 40 ಸಲ ಬ್ಯಾಟ್​ನಿಂದ ಬಾರಿಸಿ ಕೊಲೆ; ತಾಯಿಯನ್ನು ಕೊಲ್ಲಲು ಮಗನಿಗಿತ್ತು ವರ್ಷಗಳ ಕಾಲದ ಅಸಹನೆ!

    ಮೊದಲ ಪತಿಯ ಮರಣದ ಬಳಿಕ ಎರಡನೇ ಮದುವೆಯಾಗಿದ್ದಕ್ಕೆ ಸಾರ್ವಜನಿಕವಾಗಿ ಥಳಿಸಿ ತಲೆ ಬೋಳಿಸಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts