More

    ವಲಸಿಗರೇ ‘ಒಂದು ದೇಶ, ಒಂದು ಪಡಿತರ ಚೀಟಿ’ ಯ ಬಹುದೊಡ್ಡ ಫಲಾನುಭವಿಗಳು: ಪ್ರಧಾನಿ ಮೋದಿ

    ನವದೆಹಲಿ: ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆಯು ತಮ್ಮ ಗ್ರಾಮವನ್ನು ತೊರೆದು ಉದ್ಯೋಗ ಅಥವಾ ಇತರ ಅಗತ್ಯಗಳಿಗಾಗಿ ಬೇರೆಡೆಗೆ ಹೋಗಿರುವ ಬಡ ಜನರಿಗೆ ಲಾಭದಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ .ತಿಳಿಸಿದರು.
    ಇಂದು ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಯೋಜನೆಯ ಮೇಲೆ ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ತಮ್ಮ ಮೂಲ ಊರು ತೊರೆದು ಬೇರೆಡೆ ಬಕುತ್ತಿರುವವರಿಗೆ ಸಾರ್ವಜನಿಕ ವಿತರಣೆ ವ್ಯವಸ್ಥೆ ಲಾಭದಾಯಕವಾಗಲು ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
    ಕರೊನಾ ಮಧ್ಯದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಮಾಡುತ್ತಿರುವ ಆರನೇ ಭಾಷಣ ಇದಾಗಿದೆ.

    ಇದನ್ನೂ ಓದಿ: ಕೋವಿಡ್ ಮಧ್ಯೆಯೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ನರೇಗಾ ಕೆಲಸಗಾರರಿಗೆ ಅವಕಾಶ

    ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಯೋಜನೆ: ಈ ಉಪಕ್ರಮದಡಿ ಅರ್ಹ ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿ ತಮ್ಮ ಪಾಲಿನ ಆಹಾರ ಧಾನ್ಯಗಳನ್ನು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಅದೇ ಪಡಿತರ ಚೀಟಿ ಬಳಸಿ ಪಡೆಯಬಹುದಾಗಿದೆ.
    ವಿವಿಧ ರಾಜ್ಯಗಳು ಬಳಸುವ ಸ್ವರೂಪವನ್ನು ಗಣನೆಗೆ ತೆಗೆದುಕೊಂಡ ನಂತರ ಮತ್ತು ಇತರ ಪಾಲುದಾರರರೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರ ಸರ್ಕಾರವು ಪಡಿತರ ಚೀಟಿಗೆ ನಿರ್ದಿಷ್ಟ ಸ್ವರೂಪವನ್ನು ಸಿದ್ಧಪಡಿಸಿದೆ. ದ್ವಿಭಾಷಾ ಸ್ವರೂಪದಲ್ಲಿ ಅಂದರೆ ಸ್ಥಳೀಯ ಭಾಷೆಯೊಂದಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪಡಿತರ ಚೀಟಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ,

    ಇದನ್ನೂ ಓದಿ: ಪಾಕ್​​​ನಿಂದ 38 ಭಾರತೀಯ ಅಧಿಕಾರಿಗಳು ವಾಪಸ್; ಬಸ್​, ಟ್ರಕ್​​ನಲ್ಲಿ ಗಡಿ ತಲುಪಿದ ಸಿಬ್ಬಂದಿ

    ಪ್ರಸ್ತುತ ವ್ಯವಸ್ಥೆಯಲ್ಲಿ, ಪಡಿತರ ಕಾರ್ಡುದಾರನು ಎಫ್‌ಪಿಎಸ್‌ನಿಂದ (ಅವರು ವಾಸಿಸುವ ಪ್ರದೇಶದಲ್ಲಿ ಮಾತ್ರ ನಿಯೋಜಿಸಲ್ಪಟ್ಟ) ಮಾತ್ರ ಆಹಾರ ಧಾನ್ಯಗಳನ್ನು ಖರೀದಿಸಬಹುದಾಗಿತ್ತು, . ಹೊಸ ಯೋಜನೆಯಡಿ ಅರ್ಹ ಫಲಾನುಭವಿಗಳು ದೇಶದ ಎಲ್ಲಿಂದಲಾದರೂ ನ್ಯಾಯಬೆಲೆಯ ಆಹಾರ ಧಾನ್ಯಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

    ರಾಯರ ಭಕ್ತರಿಗೆ ನಿರಾಸೆ: ಮಂತ್ರಾಲಯದ ಬಾಗಿಲು ಸದ್ಯಕ್ಕೆ ತೆರೆಯಲ್ಲ ಎಂದ ಆಡಳಿತ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts