More

    ಕನ್ನಡದ ಬಾವುಟ, ಸಂಗೊಳ್ಳಿ ರಾಯಣ್ಣ ಬಳಿಕ ಈಗ ಬಸವಣ್ಣಂಗೂ ಅಪಮಾನ; ಭಾವಚಿತ್ರಕ್ಕೆ ಸೆಗಣಿ ಎಸೆದ ದುಷ್ಕರ್ಮಿಗಳು..

    ಬೆಳಗಾವಿ: ಕನ್ನಡದ ಬಾವುಟ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದ ಬೆನ್ನಿಗೇ ಇದೀಗ ಕಾಯಕ ಯೋಗಿ ಬಸವಣ್ಣನಿಗೂ ಅವಮಾನ ಮಾಡಲಾಗಿದೆ. ದುಷ್ಕರ್ಮಿಗಳು ಬಸವಣ್ಣನ ಭಾವಚಿತ್ರಕ್ಕೆ ಸೆಗಣಿ ಎಸೆಯುವ ಮೂಲಕ ಶಾಂತಿ ಕದಡುವ ಯತ್ನ ನಡೆಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಸಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಲಸಿ ಗ್ರಾಮದಲ್ಲಿರುವ ಬಸವೇಶ್ವರ ವೃತ್ತದ ಬಸವೇಶ್ವರ ಭಾವಚಿತ್ರಕ್ಕೆ ಸೆಗಣಿ ಎಸೆಯಲಾಗಿದ್ದು, ಇದೀಗ ಸಾರ್ವಜನಿಕರು ಹಾಗೂ ಕನ್ನಡ ಪರ ಹೋರಾಟಗಾರರನ್ನು ಇದು ಸಿಟ್ಟಿಗೆಬ್ಬಿಸಿದೆ.

    ಇದನ್ನೂ ಓದಿ: ಅಪ್ಪು ಸ್ಮರಣಾರ್ಥ ‘ಪುನೀತ್​ ನಗರ’ ಎಂದು ಹೆಸರಿಟ್ಟಿದ್ದ ಬಡಾವಣೆಯ ನಾಮಫಲಕ ಧ್ವಂಸ

    ನಾಡದ್ರೋಹಿ ಎಂಇಎಸ್ ಪುಂಡರು ಬೆಳಗಾವಿಯ ಅನಗೊಳದ ಕನಕದಾಸ ಕಾಲನಿಯಲ್ಲಿರುವ ರಾಯಣ್ಣನ ಮೂರ್ತಿಯನ್ನು ಡಿ. 17ರಂದು ಭಗ್ನಗೊಳಿಸಿದ್ದರು. ಇದಕ್ಕೂ ಮುನ್ನ ಕನ್ನಡದ ಬಾವುಟವನ್ನು ಕೂಡ ಸುಡಲಾಗಿತ್ತು. ಒಟ್ಟಿನಲ್ಲಿ ಕನ್ನಡಿಗರ ಸಹನೆಯನ್ನು ಕೆದಕುವ ಪ್ರಯತ್ನ ಕೆಲವು ಕಿಡಿಗೇಡಿಗಳಿಂದ ಆಗುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಗೂ ಕಾರಣವಾಗುತ್ತಿದೆ.

    ಹೆದ್ದಾರಿಯಲ್ಲಿ ಭೀಕರ ಅಪಘಾತ: ತಂದೆ-ತಾಯಿ ಜತೆಗಿದ್ದ 3 ವರ್ಷದ ಅವಳಿ ಮಕ್ಕಳಿಬ್ಬರೂ ಸ್ಥಳದಲ್ಲೇ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts