More

    ಮದ್ವೆ ಆಗು ಎಂದಿದ್ದಕ್ಕೆ ಕೊಂದೇಬಿಟ್ಟ, ಶವ ಬಾತ್​​ರೂಮಲ್ಲಿಟ್ಟು ಕಾಂಕ್ರೀಟ್​ ಕಟ್ದ; ಎರಡೂವರೆ ತಿಂಗಳ ಬಳಿಕ ಸಿಕ್ಕಿಹಾಕಿಕೊಂಡ..

    ಬೆಂಗಳೂರು: ‘ದೃಶ್ಯಂ’ ಸಿನಿಮಾದಲ್ಲಿ ನಡೆದಿದ್ದ ಮಾದರಿಯಲ್ಲೇ ಅಪರಾಧ ಪ್ರಕರಣಗಳು ನಡೆದಿರುವುದು ಹೊಸದೇನಲ್ಲ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅರ್ಚಕರೊಬ್ಬರನ್ನು ಕೊಲೆ ಮಾಡಿ ಶವವನ್ನು ದೃಶ್ಯಂ ಸಿನಿಮಾದಲ್ಲಿ ತೋರಿಸಿದ್ದ ರೀತಿಯಲ್ಲೇ ಹೂತಿಟ್ಟ ಪ್ರಕರಣ ಬಯಲಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೀಗೆ ಮಾಡಲು ನನಗೆ ‘ದೃಶ್ಯಂ’ ಸಿನಿಮಾದಲ್ಲಿ ನೋಡಿದ್ದ ಸೀನ್​ ಪ್ರೇರಣೆ ಎಂದು ಆರೋಪಿಯೇ ಒಪ್ಪಿಕೊಂಡಿದ್ದಾನೆ.

    ಸುಮಾರು ಎರಡೂವರೆ ತಿಂಗಳ ಹಿಂದೆಯೇ ಕೊಲೆ ಮಾಡಿದ್ದ ಈ ಆರೋಪಿ ಕೊನೆಗೂ ಸಂಕ್ರಾಂತಿಯಂದು ಸಿಕ್ಕಿ ಹಾಕಿಕೊಂಡಿದ್ದಾನೆ. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಈತ, ಆಕೆ ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಸಿಟ್ಟಾಗಿ ಕತ್ತು ಹಿಸುಕಿ ಸಾಯಿಸಿದ್ದಾನೆ. 34 ವರ್ಷದ ಸೂರಜ್ ಹರ್ಮಾಲ್ಕರ್​ ಎಂಬ ಹೆಸರಿನ ಈತ ಮಹಾರಾಷ್ಟ್ರದ ಪಾಲ್ಗಾರ್​ನಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಅಮಿತಾ ಮೋಹಿತೆ ಎಂಬ 32 ವರ್ಷದ ಯುವತಿ ಈತನನ್ನು ಪ್ರೀತಿಸುತ್ತಿದ್ದಳು.

    ಇಬ್ಬರಿಗೂ ಮದುವೆ ನಿಗದಿಯಾಗದಿದ್ದರೂ 2020ರ ಅಕ್ಟೋಬರ್​ 21ರಂದು ತಮ್ಮ ಮದುವೆಗೆ ಬಟ್ಟೆ ಖರೀದಿಸಲು ಸೂರಜ್​ ಜತೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದ ಅಮಿತಾ, ನಂತರ ಮರಳಿರಲಿಲ್ಲ. ಹೀಗಾಗಿ ಅವಳಿಗೆ ತುಂಬ ಸಲ ಕರೆ ಮಾಡಿದ್ದರೂ ಆಕೆ ಕರೆ ಸ್ವೀಕರಿಸಿರಲಿಲ್ಲ. ನಂತರ ಆಕೆಯ ಮೊಬೈಲ್​ ಫೋನ್​ನಿಂದ ಮನೆಯವರಿಗೆ ವಾಟ್ಸ್​ಆ್ಯಪ್​ನಲ್ಲಿ ಮೆಸೇಜೊಂದು ಬಂದಿತ್ತು. ಗುಜರಾತ್​ನ ವಾಪಿಗೆ ನಾವು ಶಿಫ್ಟ್​ ಆಗಿದ್ದು, ಇಬ್ಬರೂ ಮದುವೆಯಾಗಿದ್ದಾಗಿ ಆ ಮೆಸೇಜ್​ನಲ್ಲಿತ್ತು. ಬಳಿಕ ಅವರು ಸೂರಜ್​ ನಂಬರ್​ಗೆ ಪದೇಪದೆ ಕರೆ ಮಾಡಿದ್ದರೂ ಅವನೂ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು.

    ಕಳೆದ ವಾರ ಅಮಿತಾ ಸೋದರ ಆರೋಪಿಯನ್ನು ಮಹಾರಾಷ್ಟ್ರದ ಬೊಯ್ಸರ್ ಎಂಬಲ್ಲಿ ಕಂಡಿದ್ದು, ತಕ್ಷಣ ಆತನನ್ನು ಹತ್ತಿರದ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾನೆ. ಅಲ್ಲಿ ಪೊಲೀಸರು ಅಮಿತಾ ಬಗ್ಗೆ ವಿಚಾರಿಸಿದಾಗ ಆಕೆಯನ್ನು ಮದುವೆಯಾಗಿದ್ದು, ಅವಳು ವಾಪಿಯಲ್ಲಿ ಇರುವುದಾಗಿ ತಿಳಿಸಿದ್ದ. ನಂತರ ಪೊಲೀಸರು ಆತನನ್ನು ವಾಪಿಗೆ ಕರೆದೊಯ್ದರೆ ಅಲ್ಲಿ ಆಕೆ ಇರಲಿಲ್ಲ. ಒಳ್ಳೆಯ ಮಾತಿನಲ್ಲಿ ಕೇಳಿದಾಗಲೂ ಉತ್ತರಿಸದ ಸೂರಜ್​ ಬಳಿಕ ಪೊಲೀಸರು ತಮ್ಮದೇ ಭಾಷೆ/ವಿಧಾನದ ಮೂಲಕ ಪ್ರಶ್ನಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಜ. 14ರಂದು ಅಲ್ಲಿ ವಿಚಾರಣೆ ನಡೆಸಿದ್ದ ಪೊಲೀಸರಿಗೆ ಆತ ಬಾತ್​ರೂಮ್​ನ ಅಟ್ಟದ ಮೇಲೆ ಶವವಿಟ್ಟು, ವಾಸನೆ ಬರದಂತೆ ರಾಸಾಯನಿಕ ಹಾಕಿ ಕಾಂಕ್ರೀಟ್​ ಹಾಕಿದ್ದಾಗಿ ಹೇಳಿದ್ದಾನೆ. ಕಾಂಕ್ರೀಟ್​ ಅಗೆದು ತೆಗೆದಾಗ ಶವ ಪತ್ತೆಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ‘ದೃಶ್ಯಂ’ ಸಿನಿಮಾದಲ್ಲಿನ ದೃಶ್ಯದ ಮೇರೆಗೆ ಈ ರೀತಿಯ ಐಡಿಯಾ ಹೊಳೆಯಿತು ಎಂದು ಆರೋಪಿ ಹೇಳಿಕೊಂಡಿದ್ದಾನೆ. ಆ ಚಿತ್ರದಲ್ಲಿ ಶವವನ್ನು ಪೊಲೀಸ್ ಠಾಣೆಯಲ್ಲೇ ಹೂತಿಡಲಾಗಿತ್ತು.

    ಹೆಲ್ತ್ ಇನ್ಶೂರೆನ್ಸ್ ಮಾಡಿಸುತ್ತಿದ್ದೀರಾ? ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ!

    ಕರೊನಾ ಲಾಕ್​ಡೌನ್​ ಸಮಯದಲ್ಲಿ ಇಡೀ ಜಗತ್ತಿನ ಜನರು ಹೆಚ್ಚು ತಿಂದದ್ದು ಏನು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts