More

    ಈ ಮುಖ್ಯಮಂತ್ರಿಯವರಿಗೂ ಈಗ ಕರೊನಾ ಸೋಂಕು…

    ಡೆಹ್ರಾಡೂನ್​: ಕೋವಿಡ್​-19 ಸೋಂಕು ಸಾಕಷ್ಟು ರಾಜಕಾರಣಿಗಳನ್ನು ಕಾಡಿದ್ದು, ಒಬ್ಬರ ಹಿಂದೊಬ್ಬರಂತೆ ಹಲವರು ತಾವು ಸೋಂಕಿಗೆ ಒಳಗಾಗಿದ್ದನ್ನು ಈಗಾಗಲೇ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ಹಲವರು ಚೇತರಿಸಿಕೊಂಡು ಗುಣ ಕೂಡ ಆಗಿದ್ದಾರೆ. ಇದೀಗ ಮುಖ್ಯಮಂತ್ರಿಯೊಬ್ಬರು ಕೋವಿಡ್​-19 ಸೋಂಕಿಗೆ ಒಳಪಟ್ಟಿದ್ದು ದೃಢಪಟ್ಟಿದೆ.

    ಅದನ್ನು ಖುದ್ದು ಅವರೇ ಸೋಷಿಯಲ್​ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಅವರು ಮತ್ಯಾರೂ ಅಲ್ಲ, ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್. ಅವರ ಕೋವಿಡ್​-19 ಪರೀಕ್ಷಾ ವರದಿ ಶುಕ್ರವಾರ ಬಹಿರಂಗಗೊಂಡಿದ್ದು, ಸೋಂಕಿರುವುದು ದೃಢಪಟ್ಟಿದೆ.

    ಇದನ್ನೂ ಓದಿ: ಹೊಸ ವರ್ಷದಿಂದ ಫಾಸ್​ಟ್ಯಾಗ್​ ಕಡ್ಡಾಯ; ರದ್ದಾಗಲಿದೆ ನಗದು ಶುಲ್ಕ ಪಾವತಿ ಪಥ…

    ನಾನು ಕೋವಿಡ್​ ಪರೀಕ್ಷೆಗೆ ಒಳಗಾಗಿದ್ದೆ. ವರದಿ ಕೈಸೇರಿದ್ದು, ಸೋಂಕಿರುವುದು ದೃಢಪಟ್ಟಿದೆ. ನನ್ನ ಆರೋಗ್ಯ ಸ್ಥಿತಿ ಚೆನ್ನಾಗಿದೆ ಹಾಗೂ ನನಗೆ ಯಾವುದೇ ರೋಗಲಕ್ಷಣಗಳಿಲ್ಲ. ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಪ್ರತ್ಯೇಕವಾಗಿರುತ್ತಿದ್ದೇನೆ. ಇನ್ನು ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಪರೀಕ್ಷೆಗೆ ಒಳಗಾಗಿ, ಕೆಲದಿನಗಳ ಕಾಲ ಪ್ರತ್ಯೇಕವಾಗಿರುವಂತೆ ಕೋರಿಕೊಳ್ಳುತ್ತೇನೆ ಎಂದು ಅವರು ಟ್ವೀಟ್​ ಮಾಡಿದ್ದಾರೆ.

    ಸತತ ವೈಫಲ್ಯದಿಂದ ಭಾರಿ ಟ್ರೋಲ್‌ಗೆ ಒಳಗಾದ ಪೃಥ್ವಿ ಷಾ

    ರೈತರ ಆದಾಯ ಹೆಚ್ಚಿಸಲು ಕನ್ನಡದಲ್ಲಿ ‘ಇಂಡಿಯನ್ ಮನಿ ಡಾಟ್ ಕಾಂ’ ವಿಶೇಷ ಕೋರ್ಸ್ ಲೋಕಾರ್ಪಣೆ

    ಸ್ನೇಹಿತನ ಪೀಸ್ ಪೀಸ್​ ಮಾಡಿ ಎರಡು ಸೂಟ್​ಕೇಸ್​ನಲ್ಲಿ ದೇಹ ತುಂಬಿದ ದಂಪತಿ!

    ಡ್ರಗ್ಸ್​ ಕೇಸ್​ನಲ್ಲಿ ನಟರನ್ನೇಕೆ ಬಂಧಿಸಿಲ್ಲ? ಅಸಮಾಧಾನ ಹೊರಹಾಕಿದ ಇಂದ್ರಜಿತ್​ ಲಂಕೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts