More

    ರಾಜಧಾನಿಯ ನಿದ್ದೆ ಕೆಡಿಸಿದ ಕಟ್ಟಡ ಕುಸಿತ; ಬೆಂಗಳೂರಿನಲ್ಲಿ ಕುಸಿದು ಬಿತ್ತು ಮೂರು ಮಹಡಿಯ ಬಿಲ್ಡಿಂಗ್..

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇದೀಗ ಮನೆಯೊಳಗೆ ನೆಮ್ಮದಿಯಾಗಿ ಸುರಕ್ಷಿತವಾಗಿ ಇದ್ದೇವೆ ಎಂದುಕೊಳ್ಳುವಂತೆ ಇರದ ಪರಿಸ್ಥಿತಿ ಸೃಷ್ಟಿಯಾಗಿದೆ. ಏಕೆಂದರೆ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಒಂದರ ಹಿಂದೊಂದರಂತೆ ಕಟ್ಟಡ ಕುಸಿಯುತ್ತಿದ್ದು, ಇದೀಗ ಆ ಪಟ್ಟಿಗೆ ಮತ್ತೊಂದು ಪ್ರಕರಣವೂ ಸೇರಿದೆ.

    ಬೆಂಗಳೂರಿನ ಕಸ್ತೂರಿನಗರದ ಡಾಕ್ಟರ್ಸ್​ ಲೇಔಟ್​ನಲ್ಲಿನ ವಸತಿ ಕಟ್ಟಡವೊಂದು ಕುಸಿದು ಬಹುತೇಕ ನೆಲಸಮಗೊಂಡಿದೆ. ಮೂರಂತಸ್ತಿನ ಈ ಕಟ್ಟಡ ಕುಸಿದು ಬಿದ್ದಿದ್ದು, ಅಕ್ಕಪಕ್ಕದ ಕಟ್ಟಡಗಳವರೂ ಆತಂಕಕ್ಕೀಡಾಗುವಂತೆ ಆಗಿದೆ.

    ಇದನ್ನೂ ಓದಿ: ಕಾಮಗಾರಿ ಹಂತದಲ್ಲಿದ್ದ ಕಟ್ಟಡ ಕುಸಿತ, ಒಬ್ಬ ಸ್ಥಳದಲ್ಲೇ ಸಾವು; ಇನ್ನೊಬ್ಬ ಆಸ್ಪತ್ರೆಗೆ ಕೊಂಡೊಯ್ಯುವಾಗ ನಿಧನ..

    ಈ ವಸತಿ ಕಟ್ಟಡ ಬೆಳಗ್ಗೆಯೇ ವಾಲಿಕೊಂಡಿದ್ದನ್ನು ಗಮನಿಸಿದ ನಿವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಆಗಲೇ ಹೊರಗೆ ಬಂದಿದ್ದರಿಂದ ಸಾವು-ನೋವುಗಳು ತಪ್ಪಿಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸರು ಬಂದಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.

    ಇದನ್ನೂ ಓದಿ: ನಡುರಾತ್ರಿ ಕಟ್ಟಡ ಕುಸಿತ- ಸವಿನಿದ್ದೆಯಲ್ಲಿದ್ದವರ ದುರ್ಮರಣ: ಮಕ್ಕಳು ಸೇರಿದಂತೆ 11 ಮಂದಿ ಸಾವು

    ರಾಜಧಾನಿಯ ನಿದ್ದೆ ಕೆಡಿಸಿದ ಕಟ್ಟಡ ಕುಸಿತ; ಬೆಂಗಳೂರಿನಲ್ಲಿ ಕುಸಿದು ಬಿತ್ತು ಮೂರು ಮಹಡಿಯ ಬಿಲ್ಡಿಂಗ್..ರಾಜಧಾನಿಯ ನಿದ್ದೆ ಕೆಡಿಸಿದ ಕಟ್ಟಡ ಕುಸಿತ; ಬೆಂಗಳೂರಿನಲ್ಲಿ ಕುಸಿದು ಬಿತ್ತು ಮೂರು ಮಹಡಿಯ ಬಿಲ್ಡಿಂಗ್..ರಾಜಧಾನಿಯ ನಿದ್ದೆ ಕೆಡಿಸಿದ ಕಟ್ಟಡ ಕುಸಿತ; ಬೆಂಗಳೂರಿನಲ್ಲಿ ಕುಸಿದು ಬಿತ್ತು ಮೂರು ಮಹಡಿಯ ಬಿಲ್ಡಿಂಗ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts