More

    ಸೇತುವೆಯಲ್ಲಿ ಬಿರುಕು, ಮುರಿದು ಬೀಳುವ ಆತಂಕ; ಸಾವಿರಾರು ವಾಹನಗಳು ಸಂಚರಿಸುವ ಸಂಪರ್ಕ ಮಾರ್ಗವೇ ಬಂದ್​

    ವಿಜಯಪುರ: ರಾಜಧಾನಿ ಬೆಂಗಳೂರಿನಲ್ಲಿ ವಾಲಿದ್ದ ಮೂರಂತಸ್ತಿನ ಕಟ್ಟಡವೊಂದು ಕುಸಿದು ನೆಲಸಮಗೊಂಡ ಬೆನ್ನಿಗೇ ರಾಜ್ಯದ ಮತ್ತೊಂದೆಡೆ ಸೇತುವೆಯೊಂದರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅದು ಮುರಿದು ಬೀಳುವ ಸಾಧ್ಯತೆ ಇರುವುದರಿಂದ ಆತಂಕವೂ ಸೃಷ್ಟಿಯಾಗಿದೆ.

    ವಿಜಯಪುರ ಜಿಲ್ಲೆ ಮಿಣಜಗಿ ಗ್ರಾಮದ ಬಳಿ ರಾಜ್ಯ ಹೆದ್ದಾರಿ-61ರಲ್ಲಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯಲ್ಲಿ ಈ ಬಿರುಕು ಕಂಡುಬಂದಿದೆ. ಬಿರುಕು ಬಿಟ್ಟ ಕಾರಣ ಸೇತುವೆ ಬೆಂಡಾಗಿದ್ದು, ಕುಸಿದು ಬೀಳುವ ಆತಂಕ ಉಂಟಾಗಿದೆ.

    ಇದನ್ನೂ ಓದಿ: ಎಲೆಕ್ಟ್ರಾನಿಕ್​ ಸಿಟಿ ಫ್ಲೈಓವರ್ ಮೇಲೆ ಮತ್ತೊಂದು ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು…

    ಪರಿಣಾಮವಾಗಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ವಿಜಯಪುರ, ತಾಳಿಕೋಟೆ, ಮುದ್ದೇಬಿಹಾಳ ಸಂಪರ್ಕ ಬಂದ್ ಆಗಿದೆ. ಅಗತ್ಯವಾದರೆ ದೇವರಹಿಪ್ಪರಗಿ ಪಟ್ಟಣದ ಮೂಲಕ ಸುತ್ತು ಹಾಕಿ ಹೋಗುವ ಅನಿವಾರ್ಯತೆ ಉಂಟಾಗಿದೆ.

    ಸಾಮಾನ್ಯವಾಗಿ ಈ ಹೆದ್ದಾರಿಯಲ್ಲಿ ನಿತ್ಯ 20 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಸ್ಥಳಕ್ಕೆ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್. ಪಾಟೀಲ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

    ಈತ ಇನ್ನು ಬೆಂಗಳೂರಲ್ಲಿ ಕಾಣಿಸಿಕೊಳ್ಳುವಂತಿಲ್ಲ; 10 ವರ್ಷಗಳಿಂದ ಅಬ್ಬರಿಸಿದವ ಇನ್ನೊಂದು ವರ್ಷ ರಾಜಧಾನಿಯಲ್ಲಿ ಇರುವಂತಿಲ್ಲ..

    ಸಮನ್ಸ್ ನೀಡಲು ಬಂದಿದ್ದ ಪೊಲೀಸ್​, ಅತ್ಯಾಚಾರ ಮಾಡಿದ, ಗರ್ಭಪಾತವನ್ನೂ ಮಾಡಿಸಿದ; ವಿಡಿಯೋ ವೈರಲ್​…

    ಸೊಂಟಕ್​ ವೇಲು ಸುತ್ತಿಕೊಂಡು, ಬೆಟ್ಟದ್ ಮೇಲಿಂದ ಹಾರಿ ‘ತನ್ನ ಪ್ರೀತಿಯ ಹುಡುಗಿ’ ಜತೆ ಆತ್ಮಹತ್ಯೆ; ಸಾವಲ್ಲೂ ಜೊತೆಯಾದ ಪ್ರೇಮಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts