More

    ಒಂದು ತಪ್ಪು ಎಲ್ಲವನ್ನೂ ಕೆಡಿಸಬಹುದು, ಆರ್‌ಸಿಬಿ ಆಟಗಾರರಿಗೆ ಕೊಹ್ಲಿ ಎಚ್ಚರಿಕೆ

    ದುಬೈ: ಒಂದು ತಪ್ಪು ಸಂಪೂರ್ಣ ಟೂರ್ನಿಯನ್ನೇ ಕೆಡಿಸಬಹುದು ಎಂದು ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಐಪಿಎಲ್ 13ನೇ ಆವೃತ್ತಿಗೆ ಪೂರ್ವಭಾವಿಯಾಗಿ ನಡೆದ ತಂಡದ ಮೊದಲ ವರ್ಚುವಲ್ ಸಭೆಯಲ್ಲಿ ಸಹ-ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ಟೂರ್ನಿಯ ಬಯೋ-ಬಬಲ್ ಸುರಕ್ಷತೆಯನ್ನು ಕಾಪಾಡುವುದು ಎಲ್ಲರ ಆದ್ಯತೆಯಾಗಿರಬೇಕು ಎಂದಿದ್ದಾರೆ.

    ‘ನಮಗೆ ಏನನ್ನು ತಿಳಿಸಲಾಗಿದೆಯೋ, ಅದೆಲ್ಲವನ್ನೂ ನಾವು ಪಾಲಿಸಬೇಕು. ಎಲ್ಲ ಸಮಯದಲ್ಲೂ ಬಯೋ-ಬಬಲ್ ಸುರಕ್ಷತೆಯನ್ನು ಕಾಪಾಡುವಲ್ಲಿ ಎಲ್ಲರೂ ಶ್ರಮಿಸಬೇಕು. ಯಾವುದೇ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು. ಯಾಕೆಂದರೆ ಒಂದು ತಪ್ಪಿನಿಂದ ಸಂಪೂರ್ಣ ಟೂರ್ನಿಯೇ ಹದಗೆಡಬಹುದು ಮತ್ತು ನಾವು ಯಾರೂ ಕೂಡ ಅದನ್ನು ಬಯಸುವುದಿಲ್ಲ’ ಎಂದು ಕೊಹ್ಲಿ ವರ್ಚುವಲ್ ಸಭೆಯಲ್ಲಿ ಹೇಳಿದ್ದಾರೆ.

    ಕ್ವಾರಂಟೈನ್ ಬಳಿಕ ತಂಡದ ಮೊದಲ ಅಭ್ಯಾಸ ಅವಧಿಯ ಬಗ್ಗೆ ಕಾತರಗೊಂಡಿರುವುದಾಗಿ ಹೇಳಿರುವ ಕೊಹ್ಲಿ, ತಂಡದ ಹಿರಿಯ ಆಟಗಾರರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದಿದ್ದಾರೆ. ತಂಡದ ಮುಖ್ಯ ಕೋಚ್ ಸೈಮನ್ ಕಾಟಿಚ್ ಕೂಡ ಸಭೆಯಲ್ಲಿ ಹಾಜರಿದ್ದರು.

    ಇದನ್ನೂ ಓದಿ: ಉಸೇನ್​ ಬೋಲ್ಟ್ ಜತೆ ಪಾರ್ಟಿ ಮಾಡಿದ್ದ ಕ್ರಿಸ್ ಗೇಲ್‌ಗೂ ಕರೊನಾತಂಕ! ಐಪಿಎಲ್‌ಗೆ ಪ್ರಯಾಣ ವಿಳಂಬ?

    ನಿಯಮ ಉಲ್ಲಂಸಿರೆ ಕಠಿಣ ಕ್ರಮ
    ಬಯೋ-ಬಬಲ್ ವಲಯದ ನಿಯಮವನ್ನು ಯಾರಾದರೂ ಆಕಸ್ಮಿಕವಾಗಿ ಉಲ್ಲಂಸಿದರೆ, ಅವರನ್ನು 7 ದಿನಗಳ ಕಾಲ ಐಸೋಲೇಷನ್‌ನಲ್ಲಿಡಲಾಗುವುದು ಮತ್ತು ನೆಗೆಟಿವ್ ವರದಿ ಬಂದರಷ್ಟೇ ಮರಳಿ ಸೇರಿಸಿಕೊಳ್ಳಲಾಗುವುದು. ಒಂದು ವೇಳೆ ಆಟಗಾರರು ಗೊತ್ತಿದ್ದು ನಿಯಮ ಉಲ್ಲಂಘನೆ ಮಾಡಿದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಆಟಗಾರರು ಈಗಾಗಲೆ ಒಪ್ಪಂದಕ್ಕೂ ಸಹಿಹಾಕಿದ್ದಾರೆ ಎಂದು ಆರ್‌ಸಿಬಿ ತಂಡದ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ತಿಳಿಸಿದ್ದಾರೆ.

    ಸುನೀಲ್ ಶೆಟ್ಟಿ ಪುತ್ರಿ ಪೋಸ್ಟ್‌ಗೆ ಮತ್ತೆ ಕಮೆಂಟ್ ಹಾಕಿ ಸುದ್ದಿಯಾದ ಕ್ರಿಕೆಟಿಗ ಕೆಎಲ್ ರಾಹುಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts