More

    ಒಂದೂವರೆ ಸಾವಿರ ರೂ. ಬಿಲ್​ಗೆ ಒಂದು ಲಕ್ಷ ರೂ. ಟಿಪ್ಸ್​ ಕೊಟ್ಟ ಭೂಪ! ವೇಟರ್​ ಫುಲ್​ ಖುಷ್​

    ಕೊಲರಾಡೊ: ಕರೊನಾ ಕಾರಣದಿಂದ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದರೆ ಆ ಸಂಕಷ್ಟವನ್ನು ಪರಿಹರಸಿಲೆಂದು ಕೆಲವರು ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ಪುಣ್ಯಾತ್ಮ ಇಪ್ಪತ್ತು ಡಾಲರ್ ಮೌಲ್ಯದ ಆಹಾರ ಸೇವಿಸಿದ್ದಕ್ಕೆ 1400 ಡಾಲರ್ ಟಿಪ್ ಕೊಟ್ಟಿದ್ದಾನೆ. ಆತನ ಔದಾರ್ಯದಿಂದ ತಲಾ 200 ಡಾಲರ್ ಟಿಪ್ ಪಡೆದ ಅಮೆರಿಕದ ರೆಸ್ಟೊರೆಂಟಿನ ಏಳು ಜನ ಕಾರ್ಮಿಕರು ಸಂತಸ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಭಾರತಕ್ಕೆ ನಾಲ್ಕು ರಾಜಧಾನಿ ಬೇಕು! ನಾಲ್ಕೂ ಕಡೆ ಸಂಸತ್​ ಅಧಿವೇಶನ ನಡೆಸಬೇಕು ಎಂದು ಬೇಡಿಕೆ ಇಟ್ಟ ದೀದಿ

    ಕೊಲರಾಡೋದ ಈಸ್ಟೆಸ್ ಪಾರ್ಕ್​ನಲ್ಲಿರುವ ನಾಚ್ಟಾಪ್ ಬೇಕರಿ ಅಂಡ್ ಕೆಫೆಯಲ್ಲಿ 20 ಡಾಲರ್ ಬೆಲೆಯ ಊಟ ತಿಂದ ಡೇವಿಡ್ ಎಂಬುವವನೇ ಆ ಉದಾರಿ. ಬಿಲ್ ಕಟ್ಟುವಾಗ 1420 ಡಾಲರ್ ಸ್ವೈಪ್ ಮಾಡಿರುವ ಆತ, ಕಾರ್ಡ್ ಸ್ಲಿಪ್​ನಲ್ಲಿ ಸ್ಮೈಲಿ ಚಿತ್ರಿಸಿ, “ಕೋವಿಡ್ ಸಕ್ಸ್! ಇವತ್ತು ಪ್ರತಿ ಉದ್ಯೋಗಿಗೆ 200 ಡಾಲರ್ !” ಎಂದು ಬರೆದಿದ್ದಾನೆ. ಇಪ್ಪತ್ತು ಡಾಲರ್ 1,460 ರೂಪಾಯಿಗೆ ಸಮನಾಗಿದ್ದು, 1,420 ಡಾಲರ್ 1 ಲಕ್ಷ 3,660 ರೂಪಾಯಿಗೆ ಸಮ. 200 ಡಾಲರ್ ಎಂದರೆ 14,600 ರೂಪಾಯಿಗೆ ಸಮ.

    ನಾಚ್ಟಾಪ್ ಕೆಫೆ ಈ ವಿಷಯವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡು, ತನ್ನ ಉದಾರ ಗ್ರಾಹಕನಿಗೆ ಧನ್ಯವಾದ ಸಲ್ಲಿಸಿದೆ. ಪೇಮೆಂಟ್ ಸ್ಲಿಪ್​ನ ಫೋಟೋದೊಂದಿಗೆ ಭಾರೀ ಟಿಪ್ ಪಡೆದ ತನ್ನ ಏಳು ಜನ ಉದ್ಯೋಗಿಗಳ ಫೋಟೋವನ್ನು ಕೂಡ ಅದು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದೆ.

    ಇದನ್ನೂ ಓದಿ: ಕೊನೆಗೂ ನಾಲ್ಕು ವರ್ಷಗಳ ಬಳಿಕ ಶಾಸಕನಿಗೆ ಶಿಕ್ಷೆ; 2 ವರ್ಷ ಜೈಲು, 1 ಲಕ್ಷ ರೂ. ದಂಡ…

    ಕರೊನಾ ಪೀಡಿತ ಜಗತ್ತಿನಲ್ಲಿ ಹಲವರು ಆರ್ಥಿಕ ಸವಾಲುಗಳನ್ನೆದುರಿಸುತ್ತಿದ್ದಾರೆ. ಭಾರೀ ಹೊಡೆತ ತಿಂದಿರುವ ಒಂದು ಕ್ಷೇತ್ರವೆಂದರೆ ರೆಸ್ಟೊರೆಂಟ್ ಉದ್ಯಮ. ತಮ್ಮ ನೆಚ್ಚಿನ ರೆಸ್ಟೊರೆಂಟ್​ಗಳಿಗೆ ಸಹಾಯ ಮಾಡಲು ಹಲವು ಗ್ರಾಹಕರು ಹೆಚ್ಚು ಮೊತ್ತದ ಟಿಪ್ಸ್ ಕೊಡುವುದನ್ನು ರೂಢಿಸಿಕೊಂಡಿದ್ದಾರೆ. ವೈಟರ್​ಗಳಿಗಾಗಿ ದುಡ್ಡು ಸಂಗ್ರಹಿಸುವ ‘ವೆನ್ಮೊ ಚಾಲೆಂಜ್’ ಕೂಡ ಟಿಕ್​ಟಾಕ್ ಆ್ಯಪ್ ಬಳಕೆದಾರರಲ್ಲಿ ಜನಪ್ರಿಯವಾಗಿದೆ.(ಏಜೆನ್ಸೀಸ್​)

    ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

    ಆನೆಗೇ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಕೊನೆಯುಸಿರೆಳೆದ ಆನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts