More

    ಚುನಾವಣಾ ಅಕ್ರಮ; ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ರೂ. ಹಣ ಸೀಜ್​

    ಬೆಂಗಳೂರು: ದಾಖಲೆ ಇಲ್ಲದೆ ಆಟೋದಲ್ಲಿ ಸಾಗಿಸಲಾಗುತ್ತಿದ್ದ ಒಂದು ಕೋಟಿ ರೂಪಾಯಿ ಹಣವನ್ನು ಎಸ್​.ಜೆ.ಪಾರ್ಕ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸುರೇಶ್​ ಮತ್ತು ಪ್ರವೀಣ್​ ಎಂಬುವವರು ನಗರ ಕಾಳಿಂಗ ರಾವ್ ಬಸ್​ ನಿಲ್ದಾಣದ ಬಳಿ ಹಣ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಆಟೋ ಬುಕ್​ ಮಾಡಿ ಹಣ ಸಾಗಾಣೆ

    ಬಂಧಿತ ಆರೋಪಿಗಳಾದ ಸುರೇಶ್​ ಹಾಗೂ ಪ್ರವೀಣ್​ ಇಬ್ಬರು ಆಟೋವನ್ನು ಆನ್​ಲೈನ್​ನಲ್ಲಿ ಬುಕ್​ ಮಾಡಿ ಅದರಲ್ಲಿ ಹಣ ಸಾಗಿಸುತ್ತಿದ್ದರು. ಇಬ್ಬರ ಚಲನವಲನಗಳನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ಆಟೋ ಪರಿಶೀಲನೆ ನಡೆಸಿದಾಗ ಹಣ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

    ಚುನಾವಣಾ ಅಕ್ರಮ; ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ರೂ. ಹಣ ಸೀಜ್​

    ಇದನ್ನೂ ಓದಿ: ನ್ಯಾಯಾಂಗದ ಕುರಿತು ಟೀಕೆ; ಲಲಿತ್​ ಮೋದಿಗೆ ಸುಪ್ರೀಂ ಕೋರ್ಟ್​ ಛೀಮಾರಿ

    ಬರೋಬ್ಬರಿ ಕೋಟಿ ರೂಪಾಯಿ

    ಆಟೋದಲ್ಲಿ ಸಾಗುವ ವೇಳೆ ಆರೋಪಿಗಳ ಚಲನವಲನಗಳನ್ನು ಗಮನಿಸಿದ ಪೊಲೀಸರು ಎರಡು ಬ್ಯಾಗ್​ ಇರುವುದನ್ನು ಪತ್ತೆ ಮಾಡಿದ್ದಾರೆ. ನಂತರ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಒಂದು ಕೋಟಿ ರೂಪಾಯಿ ಹಣ ಇರುವುದು ಪತ್ತೆಯಾಗಿದೆ.

    ಈ ಬಗ್ಗೆ ಆರೋಪಿಗಳ ಬಳಿ ವಿಚಾರಿಸಿದದಾಗ ಯಾವುದೇ ದಾಖಲೆಯನ್ನು ನೀಡಲಿಲ್ಲ ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿಜಯನಗರದಿಂದ ಜಯನಗರಕ್ಕೆ ಹಣ ಸಾಗಣೆ

    ಬಂಧಿತ ಆರೋಪಿಗಳಾದ ಸುರೇಶ್ ಮತ್ತು ಪ್ರವೀಣ್ ವಿಜಯನಗರದಿಂದ ಜಯನಗರಕ್ಕೆ ಹಣ ಸಾಗಿಸುತ್ತಿದ್ದರು. ಮಾರ್ಗ ಮಧ್ಯೆ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಆಟೋ ಕೆಟ್ಟು ನಿಂತಿದೆ.

    ಈ ವೇಳೆ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರು ಆರೋಫಿಗಳು ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರನ್ನು ಹಿಡಿದು ಪ್ರಶ್ನಿಸಿ ಬ್ಯಾಗ್​ ಪರಿಶೀಲನೆ ಮಾಡಿಧಾಗ ಹಣ ಇರುವುದು ಬೆಳಕಿಗೆ ಬಂದಿದೆ.

    ವಿಚಾರಣೆ ವೇಳೆ ಇದು ಬಿಜೆಪಿ ನಾಯಕರೊಬ್ಬರಿಗೆ ಸೇರಿದ್ದ ಹಣವಾಗಿದ್ದು ವಿಜಯನಗರದ ರಾಜೇಶ್​ ಎಂಟರ್​ಪ್ರೈಸಸ್​ನಿಂದ ಜಯನಗರಕ್ಕೆ ಕೊಂಡೊಯ್ಯಲಾಗುತ್ತಿತ್ತು ಎಂದು ಬಾಯ್ಬಿಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts