More

    ಜಿ20 ಸಭೆ ಸಿದ್ಧತೆಗೆ ಇರಿಸಿದ್ದ ಹೂಕುಂಡಗಳ ಕಳ್ಳತನ; ಆರೋಪಿ ಅರೆಸ್ಟ್​

    ನವದೆಹಲಿ: ಗುರಗಾಂವ್​ನಲ್ಲಿ ನಡೆದ ಜಿ20 ಸಮಾವೇಶದಲ್ಲಿ ಅಲಂಕಾರಕ್ಕೆಂದು ತಂದಿಟ್ಟಿದ್ದ ಹೂವಿನ ಕುಂಡಗಳನ್ನು ಇಬ್ಬರು ಐಷಾರಾಮಿ ಕಾರಿನಲ್ಲಿ ಕದ್ದೊಯ್ದಿದ್ದರು. ಇಬ್ಬರ ಕೃತ್ಯದ ವೀಡಿಯೋ ಟ್ವಿಟರ್​ನಲ್ಲಿ ಸಾಕಷ್ಟು ವೈರಲ್ ಆಗಿತ್ತು ಮತ್ತು ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಹೂ ಕುಂಡಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

    ದೆಹಲಿ-ಗುರಗಾಂವ್​ ಎಕ್ಸ್​ಪ್ರೆಸ್ ವೇನಲ್ಲಿರುವ ಆಂಬಿಯೆನ್ಸ್ ಮಾಲ್ ಮುಂಭಾಗದಲ್ಲಿ ಕಳೆದ ಸೋಮವಾರ ಈ ಘಟನೆ ನಡೆದಿತ್ತು. ವೈರಲ್ ಆಗಿರುವ ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಐಷಾರಾಮಿ ಕಾರಿನ ಡಿಕ್ಕಿಯಲ್ಲಿ ಹೂಕುಂಡಗಳನ್ನು ತುಂಬಿಸುತ್ತಿರುವುದನ್ನು ಕಾಣಬಹುದು.

    ಇದನ್ನೂ ಓದಿ: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿಲ್ಲ ಅಂದ್ರೆ ನಾವು ಮಾಡ್ತೀವಿ; ಮಾಜಿ ಸಿಎಂ ಸಿದ್ದರಾಮಯ್ಯ

    ಹೂಕುಂಡಗಳನ್ನು ಕದ್ದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ದೆಹಲಿ ಪೊಲೀಸ್ ಕಮಿಷನರ್ ನಿಶಾಂತ್ ಕುಮಾರ್ ಯಾದವ್. ಗುರಗಾಂವ್​ ಪೊಲೀಸರಲ್ಲಿ ವರದಿ ತರಿಸಿಕೊಂಡು, ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು ಸೂಚನೆ ನೀಡಿದ್ದರು.

    ಕಮಿಷನರ್ ಸೂಚನೆಯಂತೆ ತನಿಖೆ ಕೈಗೊಂಡಿದ್ದ ಪೊಲೀಸರು ಸದ್ಯ ಗಾಂಧಿನ ನಗರ ನಿವಾಸಿ ಮನಮೋಹನ್ ಎಂಬಾತನನ್ನು ಬಂಧಿಸಿದ್ದಾರೆ. ಸದ್ಯ ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು ಕಳ್ಳತನವಾಗಿದ್ದ 10 ಹೂಕುಂಡಗಳನ್ನು ವಶ ಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

    ಕೃತ್ಯಕ್ಕೆ ಬಳಸಲಾಗಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಈ ಕಾರು ಬಂಧಿತನಾಗಿರುವ ರಾಮ್​ ಮೋಹನ್​ನ ಪತ್ನಿಯ ಹೆಸರಿಗೆ ನೋಂದಾಯಿತಗೊಂಡಿದೆ. ಮನಮೋಹನ್ ಮತ್ತು ಅತನ ಸ್ನೇಹಿಯ ದೆಹಲಿಯಿಂದ ಗುರುಗ್ರಾಮ್‌ಗೆ ಹಿಂತಿರುಗುತ್ತಿದ್ದಾಗ ಹೂಕುಂಡಗಳನ್ನು ನೋಡಿದ್ದಾರೆ. ಬಳಿಕ ಕೃತ್ಯ ಎಸಗಿದ್ದಾರೆ ಎಂಬುದು ಪ್ರಕರಣದ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿರುವುದು ವರದಿಯಾಗಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಗಡ್ಡ, ಮೀಸೆ ಟ್ರಿಮ್; ಹೊಸ ಲುಕ್​ನೊಂದಿಗೆ ಕೇಂಬ್ರಿಡ್ಜ್ ವಿವಿಯಲ್ಲಿ ರಾಹುಲ್ ಗಾಂಧಿ ಉಪನ್ಯಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts